ಅಪ್ಪ, ಅಮ್ಮ ಅಕ್ಕನನ್ನು ಕೊಲ್ಲುವ ವಿಧಾನವನ್ನು ಗೂಗಲ್ ಸರ್ಚ್ ಮಾಡಿಕೊಂಡು ಕಲಿತಿದ್ದ ಡೆಲ್ಲಿ ತ್ರಿವಳಿ ಕೊಲೆ ಆರೋಪಿ!
20 ವರ್ಷದ ಅರ್ಜುನ್ ಅಪ್ಪ ಅಪನ್ನ ವಿವಾಹ ವಾರ್ಷಿಕೋತ್ಸವದ ದಿನವೇ ಕೊಲೆ ಮಾಡಿ, ದುಷ್ಕರ್ಮಿಗಳ ಕೃತ್ಯ ಎಂದು ನಾಟಕ ಮಾಡಿದ್ದ. ಆದರೆ ಪೊಲೀಸರ ತನಿಖೆಯಲ್ಲಿ ಆತ ಸೆರೆ ಸಿಕ್ಕಿದ್ದಾನೆ.
ದಕ್ಷಿಣ ದೆಹಲಿಯ ನಿವಾಸದಲ್ಲಿ ತನ್ನ ಪೋಷಕರು ಮತ್ತು ಅಕ್ಕನನ್ನು ಏಕಕಾಲಕ್ಕೆ ಚುಚ್ಚಿ ಹತ್ಯೆ ಮಾಡಿದ್ದ ಆರೋಪದ ಮೇಲೆ ಮೇಲೆ ಬಂಧನಕ್ಕೆ ಒಳಗಾಗಿರುವ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಅರ್ಜುನ್ ತನ್ವರ್, ಕೊಲೆ ಮಾಡುವುದು ಹೇಗೆ ಎಂದು ಗೂಗಲ್ ಮಾಡಿಕೊಂಡು ತಿಳಿದುಕೊಂಡಿದ್ದ ಎಂದು ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
20 ವರ್ಷದ ಅರ್ಜುನ್ ಅಪ್ಪ ಅಪನ್ನ ವಿವಾಹ ವಾರ್ಷಿಕೋತ್ಸವದ ದಿನವೇ ಕೊಲೆ ಮಾಡಿ, ದುಷ್ಕರ್ಮಿಗಳ ಕೃತ್ಯ ಎಂದು ನಾಟಕ ಮಾಡಿದ್ದ. ಆದರೆ ಪೊಲೀಸರ ತನಿಖೆಯಲ್ಲಿ ಆತ ಸೆರೆ ಸಿಕ್ಕಿದ್ದಾನೆ. ದೆಹಲಿ ಪೊಲೀಸರು ರಕ್ತಸಿಕ್ತ ಬಟ್ಟೆಗಳು ಮತ್ತು ಅಪರಾಧಕ್ಕೆ ಬಳಸಿದ ಸೇನಾ ಚಾಕುವನ್ನು ವಶಪಡಿಸಿಕೊಂಡಿದ್ದಾರೆ. ಅರ್ಜುನ್ ಮೊಬೈಲ್ ಫೋನ್, , ಲ್ಯಾಪ್ಟಾಪ್ ಮತ್ತು ಇತರ ಎಲೆಕ್ಟ್ರಾನಿಕ್ ಗ್ಯಾಜೆಟ್ಗಳನ್ನು ವಶಪಡಿಸಿಕೊಂಡಿದ್ದಾರೆ. ಅದರಲ್ಲಿ ಕೊಲೆಗೆ ತಂತ್ರಗಳನ್ನು ಹುಡುಕಿದ್ದು ಗೊತ್ತಾಗಿದೆ.
ಭೀಕರ ಹತ್ಯೆ ನಡೆಸಿರುವ ಅರ್ಜುನ್ನ ''ಮಾನಸಿಕ ವಿಶ್ಲೇಷಣೆ ಪರೀಕ್ಷೆ'' ನಡೆಸಲು ಪೊಲೀಸರು ಚಿಂತನೆ ನಡೆಸಿದ್ದಾರೆ ಎಂದು ಮೂಲಗಳು ಪಿಟಿಐಗೆ ತಿಳಿಸಿವೆ.
ಅಂತರ್ಜಾಲದಲ್ಲಿ ಕೊಲೆ ತಂತ್ರಗಳಿಗೆ ಹುಡುಕಾಟ
ಮಾಜಿ ಸೇನಾಧಿಕಾರಿ ರಾಜೇಶ್ ಕುಮಾರ್ (51), ಅವರ ಪತ್ನಿ ಕೋಮಲ್ (46) ಮತ್ತು ಅವರ ಮಗಳು ಕವಿತಾ (23) ಬುಧವಾರ (ಡಿಸೆಂಬರ್ 4) ಬೆಳಿಗ್ಗೆ ಡಿಯೋಲಿ ಗ್ರಾಮದ ತಮ್ಮ ಮನೆಯಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ಪೊಲೀಸರ ಪ್ರಕಾರ, ಅರ್ಜುನ್ ತನ್ನ ಹೆತ್ತವರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರಲಿಲ್ಲ. ತನಗಿಂತ ಹೆಚ್ಚಾಗಿ ತನ್ನ ಸಹೋದರಿಯನ್ನು ಇಷ್ಟಪಡುತ್ತಾರೆ ಎಂದು ಅಸಮಾಧಾನಗೊಂಡಿದ್ದ ಎನ್ನಲಾಗಿದೆ.
ಗುರುವಾರ ಆರೋಪಿ ಅರ್ಜುನ್ನನ್ನು ನಗರದ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಅಲ್ಲಿಂದ ಅವರನ್ನು ಮೂರು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ. ಆತನನ್ನು ಕೂಲಂಕಷವಾಗಿ ವಿಚಾರಣೆ ನಡೆಸಬೇಕು ಮತ್ತು ಕೆಲವು ಜನರು ಮತ್ತು ಇತರ ಸಾಕ್ಷಿಗಳನ್ನು ಹುಡುಕಬೇಕು ಎಂದು ಪೊಲೀಸರು ಹೇಳಿದ್ದಾರೆ.
"ತನಿಖೆಯ ಸಮಯದಲ್ಲಿ, ಆರೋಪಿಗಳು ಅಪರಾಧ ಮಾಡುವ ಮೊದಲು ಅಂತರ್ಜಾಲದಲ್ಲಿ ಕೊಲೆ ತಂತ್ರಗಳನ್ನು ಹುಡುಕಿದ್ದಾರೆ ಎಂದು ತಿಳಿದುಬಂದಿದೆ" ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸ್ವೆಟ್ ಶರ್ಟ್, ಚಾಕು ವಶ
ಪೊಲೀಸರು ಅವನ ಮೊಬೈಲ್ ಫೋನ್ಗಳನ್ನು ಲ್ಯಾಪ್ಟಾಪ್ ಮತ್ತು ಇತರ ಎಲೆಕ್ಟ್ರಾನಿಕ್ ಗ್ಯಾಜೆಟ್ಗಳನ್ನು ವಶಪಡಿಸಿಕೊಂಡಿದ್ದಾರೆ. ಅಪರಾಧ ಮಾಡಲು ಕ್ರೈಮ್ ವೆಬ್ ಸರಣಿಗಳನ್ನು ನೋಡಿದ್ದಾನೆಯೇ ಎಂಬ ಕೋನದಲ್ಲಿಯೂ ತನಿಖೆ ನಡೆಯುತ್ತಿದೆ.
ಪೊಲೀಸರು ಬುಧವಾರ ತಡರಾತ್ರಿ ಹತ್ತಿರದ ಸಂಜಯ್ ವನದಿಂದ ರಕ್ತಸಿಕ್ತ ಸ್ವೆಟ್ಶರ್ಟ್ ಮತ್ತು ಸೇನಾ ಚಾಕುವನ್ನು ವಶಪಡಿಸಿಕೊಂಡಿದ್ದಾರೆ.
ಹತ್ಯೆ ಮಾಡಿದ್ದು ಹೇಗೆ?
ತನ್ನ ಅಕ್ಕ ನಿದ್ರೆಯಲ್ಲಿದ್ದಾಗ ಕತ್ತು ಸೀಳಿ ಕೊಂದಿದ್ದೇನೆ ಎಂದು ಅರ್ಜುನ್ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ಬಳಿಕ ಮಹಡಿಗೆ ಹೋಗಿ ತನ್ನ ತಂದೆಯ ಕುತ್ತಿಗೆಗೆ ಇರಿದು ತಾಯಿಯ ಕತ್ತು ಸೀಳಿ ಸೀಳಿದ್ದಾನೆ. ನಂತರ ಅರ್ಜುನ್ ತನ್ನ ರಕ್ತಸಿಕ್ತ ಬಟ್ಟೆಗಳನ್ನು ಬದಲಾಯಿಸಿ, ಅವುಗಳನ್ನು ತನ್ನ ಜಿಮ್ ಚೀಲದಲ್ಲಿ ಇರಿಸಿ ಸಂಜಯ್ ಉದ್ಯಾನಕ್ಕೆ ಹೋಗಿ ಅವುಗಳನ್ನು ಎಸೆದಿದ್ದ
ರಕ್ತದ ಕಲೆಗಳನ್ನು ಸ್ವಚ್ಛಗೊಳಿಸಲು ಪ್ರಯತ್ನಿಸಿದ್ದ
ಮನೆಗೆ ಮರಳಿದ ನಂತರ, ಅರ್ಜುನ್ ಶೌಚಾಲಯದಲ್ಲಿನ ರಕ್ತದ ಕಲೆಗಳು ಮತ್ತು ಮನೆಯಲ್ಲಿನ ಇತರ ವಸ್ತುಗಳನ್ನು ಸ್ವಚ್ಛಗೊಳಿಸಲು ಪ್ರಯತ್ನಿಸಿದ್ದಾನೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಳಿಕ ಪೊಲೀಸರಿಗೆ ಫೋನ್ ಮಾಡಿ ಯಾರೊ ಬಂದು ಕೊಲೆ ಮಾಡಿದ್ದಾರೆ ಎಂದು ಸುಳ್ಳುಹೇಳಿದ್ದ.
ಪ್ರತಿಭಾವಂತ
ಆರೋಪಿ ದೆಹಲಿ ವಿಶ್ವವಿದ್ಯಾಲಯದ ಕಾಲೇಜಿನಲ್ಲಿ ರಾಜ್ಯಶಾಸ್ತ್ರದಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದು, ತರಬೇತಿ ಪಡೆದ ಬಾಕ್ಸರ್ ಆಗಿದ್ದ. ರಾಜ್ಯ ಬಾಕ್ಸಿಂಗ್ ಸ್ಪರ್ಧೆಯಲ್ಲಿ ದೆಹಲಿಯನ್ನು ಪ್ರತಿನಿಧಿಸಿ ಬೆಳ್ಳಿ ಪದಕ ಗೆದ್ದಿದ್ದ. ಅರ್ಜುನ್ ಈ ಹಿಂದೆ ಧೌಲಾ ಕುವಾನ್ ನ ಆರ್ಮಿ ಪಬ್ಲಿಕ್ ಶಾಲೆಯಲ್ಲಿ ಅಧ್ಯಯನ ಮಾಡಿದ್ದ .
ಪರೀಕ್ಷೆಗಳ ಹಿಂದಿನ ನಿದರ್ಶನಗಳು
ಕಳೆದ ವರ್ಷ ಪಶ್ಚಿಮ ದೆಹಲಿಯ ತಿಲಕ್ ನಗರ ಪ್ರದೇಶದಲ್ಲಿ ಸ್ವಿಸ್ ಮಹಿಳೆ ನೀನಾ ಬರ್ಗರ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯ ಮೇಲೆ ಮಾನಸಿಕ ವಿಶ್ಲೇಷಣೆ ಪರೀಕ್ಷೆ ನಡೆಸಲಾಗಿತ್ತು.
ವಾಯುವ್ಯ ದೆಹಲಿಯ ಶಹಬಾದ್ ಡೈರಿ ಪ್ರದೇಶದಲ್ಲಿ 16 ವರ್ಷದ ಬಾಲಕಿಯ ಕೊಲೆ ಪ್ರಕರಣದ ಆರೋಪಿಗಳ ಮೇಲೆ ಮತ್ತು ಸಂಸತ್ ಅಕ್ರಮ ಪ್ರವೇಶ ಪ್ರಕರಣದ ಆರೋಪಿಗಳ ಮೇಲೆ ಇದೇ ರೀತಿಯ ಪರೀಕ್ಷೆಗಳನ್ನು ನಡೆಸಲಾಗಿತ್ತು.
2022 ರಲ್ಲಿ, ಪೊಲೀಸರು ಶ್ರದ್ಧಾ ವಾಕರ್ ಕೊಲೆ ಆರೋಪಿ ಅಫ್ತಾಬ್ ಪೂನಾವಾಲಾನ ಮಾನಸಿಕ ವಿಶ್ಲೇಷಣೆ ಪರೀಕ್ಷೆ ನಡೆಸಿದ್ದರು.