Delhi Polls | 70 ಕ್ಷೇತ್ರಗಳ ಪೈಕಿ 68 ಅಭ್ಯರ್ಥಿಗಳನ್ನು ಘೋಷಿಸಿದ ಕಾಂಗ್ರೆಸ್‌
x
ಸಾಂದರ್ಭಿಕ ಚಿತ್ರ.

Delhi Polls | 70 ಕ್ಷೇತ್ರಗಳ ಪೈಕಿ 68 ಅಭ್ಯರ್ಥಿಗಳನ್ನು ಘೋಷಿಸಿದ ಕಾಂಗ್ರೆಸ್‌

Delhi Polls | ಕಾಂಗ್ರೆಸ್‌ ಮಂಗಳವಾರ 15 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿತ್ತು. ಪಟೇಲ್ ನಗರದಿಂದ ಮಾಜಿ ಕೇಂದ್ರ ಸಚಿವ ಕೃಷ್ಣಾ ತೀರತ್ ಮತ್ತು ಓಖ್ಲಾದಿಂದ ಕೌನ್ಸಿಲರ್ ಆರಿಬಾ ಖಾನ್ ಅವರನ್ನು ಅಭ್ಯರ್ಥಿ ಎಂದು ಘೋಷಿಸಿತ್ತು.


ಫೆಬ್ರುವರಿಯಲ್ಲಿ ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಗೆ (Delhi Polss) ಕಾಂಗ್ರೆಸ್ ಇಂದು (ಗುರುವಾರ) ಐವರು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರೊಂದಿಗೆ 70 ಕ್ಷೇತ್ರಗಳ ಪೈಕಿ 68 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದಂತಾಗಿದೆ. ಡೆಲ್ಲಿಯಲ್ಲಿ ಬಿಜೆಪಿ, ಕಾಂಗ್ರೆಸ್‌ ಮತ್ತು ಆಪ್‌ ನಡುವೆ ತ್ರಿಕೋನ ಸ್ಪರ್ಧೆಯಿದೆ. ಇಂಡಿಯಾ ಒಕ್ಕೂಟದ ಮೈತ್ರಿ ಪಕ್ಷಗಳಾಗಿರುವ ಕಾಂಗ್ರೆಸ್‌ ಹಾಗೂ ಆಪ್‌ ಇಲ್ಲಿ ವೈರಿಗಳಂತೆ ತೊಡೆ ತಟ್ಟಿ ನಿಂತಿವೆ.

ಬವಾನಾ (ಎಸ್‌ಸಿ) ಕ್ಷೇತ್ರದಿಂದ ಸುರೇಂಧ್ರ ಕುಮಾರ್, ರೋಹಿಣಿ ಕ್ಷೇತ್ರದಿಂದ ಸುಮೇಶ್ ಗುಪ್ತಾ, ಕರೋಲ್ ಬಾಗ್‌ (ಎಸ್‌ಸಿ) ಕ್ಷೇತ್ರದಿಂದ ರಾಹುಲ್ ಧನಕ್, ತುಘಲಕಾಬಾದ್‌ನಿಂದ ವೀರೇಂದ್ರ ಬಿಧೂರಿ ಮತ್ತು ಬದರ್‌ಪುರದಿಂದ ಅರ್ಜುನ್ ಭದಾನ ಅವರಿಗೆ ಕಾಂಗ್ರೆಸ್‌ ಹೈಕಮಾಂಡ್‌ ಟಿಕೆಟ್‌ ನೀಡಿದೆ.

ಕಾಂಗ್ರೆಸ್‌ ಮಂಗಳವಾರ 15 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿತ್ತು. ಪಟೇಲ್ ನಗರದಿಂದ ಮಾಜಿ ಕೇಂದ್ರ ಸಚಿವ ಕೃಷ್ಣಾ ತೀರತ್ ಮತ್ತು ಓಖ್ಲಾದಿಂದ ಕೌನ್ಸಿಲರ್ ಆರಿಬಾ ಖಾನ್ ಅವರನ್ನು ಅಭ್ಯರ್ಥಿ ಎಂದು ಘೋಷಿಸಿತ್ತು.

ಡಿಸೆಂಬರ್ 24ರಂದು ಕಾಂಗ್ರೆಸ್ 26 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಮಾಜಿ ಶಾಸಕಿ ಅಲ್ಕಾ ಲಂಬಾ (49) ಅವರು ದೆಹಲಿ ಮುಖ್ಯಮಂತ್ರಿ ಅತಿಶಿ ಅವರ ವಿರುದ್ಧ ಕಣಕ್ಕಿಳಿಸಲಾಗಿದೆ. ಕಲ್ಕಾಜಿ ಕ್ಷೇತ್ರದಲ್ಲಿ ರಾಷ್ಟ್ರೀಯ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆಯೂ ಆಗಿರುವ ಲಂಬಾ ಹಾಗೂ ಅತಿಶಿ ಮುಖಾಮುಖಿಯಾಗಲಿದ್ದಾರೆ.

ಮುನ್ನ 21 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದ ಕಾಂಗ್ರೆಸ್, ಮಾಜಿ ಸಂಸದ ಸಂದೀಪ್ ದೀಕ್ಷಿತ್ ಅವರನ್ನು ನವದೆಹಲಿಯಿಂದ ಕಣಕ್ಕಿಳಿಸಿತ್ತು. ಅವರ ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ವಿರುದ್ಧ ಸೆಣಸಾಟ ನಡೆಸಲಿದ್ದಾರೆ.

ದೆಹಲಿ ವಿಧಾನಸಭಾ ಚುನಾವಣೆಗೆ ಫೆಬ್ರುವರಿ 5ರಂದು ಮತದಾನ ನಡೆಯಲಿದ್ದು, ಫೆಬ್ರುವರಿ 8ರಂದು ಮತ ಎಣಿಕೆ ನಡೆಯಲಿದೆ.

Read More
Next Story