ದೆಹಲಿ: ಆಟಿಕೆಯೆಂದು ತಿಳಿದು ನಿಜ ಪಿಸ್ತೂಲ್ ಶಾಲೆಗೆ ತಂದ 6ನೇ ತರಗತಿಯ ಬಾಲಕ
10 ವರ್ಷದ ವಿದ್ಯಾರ್ಥಿಯ ಶಾಲಾ ಬ್ಯಾಗ್‌ನಿಂದ ಪಿಸ್ತೂಲ್ ಅನ್ನು ವಶಪಡಿಸಿಕೊಂಡಿರುವ ಘಟನೆ ದೆಹಲಿಯ ನಜಾಫ್‌ಗಢದಲ್ಲಿ ನಡೆದಿದೆ. ವಿದ್ಯಾರ್ಥಿ ಪಿಸ್ತೂಲ್ ಅನ್ನು ಆಟಿಕೆ ಎಂದು ಭಾವಿಸಿ ಶಾಲೆಗೆ ತಂದಿದ್ದಾನೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
10 ವರ್ಷದ ವಿದ್ಯಾರ್ಥಿಯ ಶಾಲಾ ಬ್ಯಾಗ್‌ನಿಂದ ಪಿಸ್ತೂಲ್ ಅನ್ನು ವಶಪಡಿಸಿಕೊಂಡಿರುವ ಘಟನೆ ದೆಹಲಿಯ ನಜಾಫ್‌ಗಢದಲ್ಲಿ ನಡೆದಿದೆ. ವಿದ್ಯಾರ್ಥಿ ಪಿಸ್ತೂಲ್ ಅನ್ನು ಆಟಿಕೆ ಎಂದು ಭಾವಿಸಿ ಶಾಲೆಗೆ ತಂದಿದ್ದಾನೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಶನಿವಾರ ದೀಪಕ್ ವಿಹಾರ್ ಪ್ರದೇಶದ ಖಾಸಗಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ನಜಾಫ್‌ಗಢ ಪೊಲೀಸ್ ಠಾಣೆಗೆ ಕರೆ ಬಂದಿದೆ. ಪೋಲೀಸರು ಶಾಲೆಗೆ ಬಂದು ವಿದ್ಯಾರ್ಥಿಯ ಬ್ಯಾಗ್ ಪರಿಶೀಲಿಸಿದಾಗ 6 ನೇ ತರಗತಿಯ ವಿದ್ಯಾರ್ಥಿಯ ಬ್ಯಾಗ್‌ನಲ್ಲಿ ತನ್ನ ತಂದೆಯ ಪರವಾನಗಿ ಪಡೆದ ಪಿಸ್ತೂಲ್ ಪತ್ತೆಯಾಗಿತ್ತು. ಪೊಲೀಸರು ಪಿಸ್ತೂಲ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಳಿಕ ಶಾಲಾ ಆಡಳಿತ ಮಂಡಳಿ ಆತನ ತಾಯಿಯನ್ನು ಶಾಲೆಗೆ ಕರೆಸಿಕೊಂಡಿದ್ದು, ಆಕೆಯ ಪತಿ ಪರವಾನಗಿ ಪಡೆದ ಪಿಸ್ತೂಲ್ ಹೊಂದಿದ್ದರು. ಕೆಲವು ತಿಂಗಳ ಹಿಂದೆ ತನ್ನ ಪತಿ ತೀರಿಕೊಂಡಿದ್ದಾನೆ. ಹೀಗಾಗಿ ಪಿಸ್ತೂಲ್ ಅನ್ನು ಪೊಲೀಸ್ ಠಾಣೆಯಲ್ಲಿ ಠೇವಣಿ ಇಡಲು ಹೊರಗೆ ಇಟ್ಟಿದ್ದಾಗಿ ಮಹಿಳೆ ಹೇಳಿದ್ದಾಳೆ ಎಂದು ಅಧಿಕಾರಿ ಹೇಳಿದರು.ಇದು ಆಟಿಕೆ ಎಂದು ಭಾವಿಸಿರುವುದಾಗಿ ಬಾಲಕ ಪೊಲೀಸ್ ತಂಡಕ್ಕೆ ತಿಳಿಸಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಪೊಲೀಸರು ಪಿಸ್ತೂಲಿನ ಪರವಾನಗಿಯನ್ನು ಪರಿಶೀಲಿಸಿದರು. ಅದೇ ದಿನ ಪೊಲೀಸ್ ಉಗ್ರಾಣದಲ್ಲಿ ಹುಡುಗನ ತಾಯಿ ಪಿಸ್ತೂಲ್ ಅನ್ನು ಠೇವಣಿ ಮಾಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.