ಕವಿತಾ ಅವರ ಇಡಿ ಕಸ್ಟಡಿ ಮಾ.26 ರವರೆಗೆ ವಿಸ್ತರಣೆ
x

ಕವಿತಾ ಅವರ ಇಡಿ ಕಸ್ಟಡಿ ಮಾ.26 ರವರೆಗೆ ವಿಸ್ತರಣೆ


ನವದೆಹಲಿ, ಮಾ. 23- ದೆಹಲಿ ಅಬಕಾರಿ ನೀತಿ ಹಗರಣದ ಆರೋಪಿ ಬಿಆರ್‌ಎಸ್ ನಾಯಕಿ ಕೆ. ಕವಿತಾ ಅವರ ಜಾರಿ ನಿರ್ದೇಶನಾಲಯದ ಕಸ್ಟಡಿಯನ್ನು ನ್ಯಾಯಾಲಯ ಮಾ.26 ರವರೆಗೆ ವಿಸ್ತರಿಸಿದೆ.

ಫೆಡರಲ್ ತನಿಖಾ ಸಂಸ್ಥೆ ಅವರ ಕಸ್ಟಡಿಯನ್ನು ಐದು ದಿನಗಳ ಕಾಲ ವಿಸ್ತರಿಸುವಂತೆ ಕೋರಿತ್ತು. ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರ ಪುತ್ರಿ ಕವಿತಾ ಅವರು ‘ಸೌತ್ ಗ್ರೂಪ್’ನ ಪ್ರಮುಖ ಸದಸ್ಯೆ ಎಂದು ಇಡಿ ಆರೋಪಿಸಿದೆ. ಮದ್ಯದ ಪರವಾನಗಿ ಗಳ ದೊಡ್ಡ ಪಾಲು ನೀಡಿದ್ದಕ್ಕೆ ಪ್ರತಿಯಾಗಿ ಎಎಪಿ 100 ಕೋಟಿ ರೂ. ಪಡೆದುಕೊಂಡಿದೆ ಎಂದು ಇಡಿ ದೂರಿದೆ.

ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ, ನಾಲ್ವರ ಹೇಳಿಕೆ ಮತ್ತು ಫೋನ್‌ನಿಂದ ಸಂಗ್ರಹಿಸಿದ ದತ್ತಾಂಶದ ವರದಿಯನ್ನು ನೀಡಲಾಗಿದೆ. ಹೈದರಾಬಾದ್‌ನಲ್ಲಿರುವ ಆಕೆಯ ಸೋದರಳಿಯನ ಮನೆಯ ಮೇಲೆ ದಾಳಿ ನಡೆದಿದೆ ಎಂದು ಇಡಿ ನ್ಯಾಯಾಲಯಕ್ಕೆ ತಿಳಿಸಿದೆ.

ಬಿಆರ್‌ಎಸ್ ನಾಯಕಿಯ ವಕೀಲರು ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದರು. ಕವಿತಾ (46) ಅವರನ್ನು ಮಾ.15 ರಂದು ಹೈದರಾಬಾದ್‌ನ ಬಂಜಾರಾ ಹಿಲ್ಸ್‌ನಲ್ಲಿರುವ ಅವರ ನಿವಾಸದಿಂದ ಕೇಂದ್ರ ತನಿಖಾ ಸಂಸ್ಥೆ ಬಂಧಿಸಿದೆ.

Read More
Next Story