ಕೇಜ್ರಿವಾಲ್ ನ್ಯಾಯಾಂಗ ಬಂಧನ ಜುಲೈ 3ರವರೆಗೆ ವಿಸ್ತರಣೆ
x

ಕೇಜ್ರಿವಾಲ್ ನ್ಯಾಯಾಂಗ ಬಂಧನ ಜುಲೈ 3ರವರೆಗೆ ವಿಸ್ತರಣೆ


ನವದೆಹಲಿ, ಜೂನ್ 19- ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನ್ಯಾಯಾಂಗ ಬಂಧನವನ್ನು ದೆಹಲಿ ನ್ಯಾಯಾಲಯ ಜುಲೈ 3 ರವರೆಗೆ ವಿಸ್ತರಿಸಿದೆ.

ಈ ಹಿಂದೆ ನೀಡಿದ್ದ ನ್ಯಾಯಾಂಗ ಬಂಧನದ ಅವಧಿ ಮುಗಿದ ಹಿನ್ನೆಲೆಯಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಕೇಜ್ರಿವಾಲ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ವಿಶೇಷ ನ್ಯಾಯಾಧೀಶ ನಿಯಾಯ್ ಬಿಂದು ಅವರು ಕಸ್ಟಡಿಯನ್ನು ವಿಸ್ತರಿಸಿದರು.

ಕೇಜ್ರಿವಾಲ್ ಅವರ ಪರ ವಕೀಲರು, ಕಸ್ಟಡಿ ವಿಸ್ತರಣೆ ಕೋರಿ ಇಡಿ ಸಲ್ಲಿಸಿದ ಅರ್ಜಿಯನ್ನು ವಿರೋಧಿಸಿದರು. ಕಸ್ಟಡಿ ವಿಸ್ತರಣೆಯನ್ನು ಸಮರ್ಥಿಸುವ ಯಾವುದೇ ಆಧಾರಗಳಿಲ್ಲ ಎಂದು ಹೇಳಿದರು.

ಕೇಜ್ರಿವಾಲ್ ಸಲ್ಲಿಸಿದ ಜಾಮೀನು ಅರ್ಜಿಯ ಮೇಲಿನ ಸಲ್ಲಿಕೆಗಳನ್ನೂ ನ್ಯಾಯಾಧೀಶರು ಆಲಿಸಿದರು. ನ್ಯಾಯಾಧೀಶರು ಗುರುವಾರ ಅರ್ಜಿಯ ವಿಚಾರಣೆಯನ್ನು ಮತ್ತೆ ಆರಂಭಿಸಲಿದ್ದಾರೆ.

ಕೇಜ್ರಿವಾಲ್ ಪರ ವಕೀಲರು,ʻಸಿಎಂ ಮೇಲಿನ ಸಂಪೂರ್ಣ ಪ್ರಕರಣ ಹೇಳಿಕೆಗಳ ಮೇಲೆ ನಿಂತಿದೆ,ʼ ಎಂದು ಹೇಳಿದರು. ʻಆ ಹೇಳಿಕೆಗಳು ತಪ್ಪೊಪ್ಪಿಕೊಂಡ ಜನರದ್ದು. ಅವರು ಸಂತರಲ್ಲ; ಕಳಂಕಿತರು ಮಾತ್ರವಲ್ಲದೆ ಕೆಲವರು ಬಂಧಿತರಾಗಿದ್ದರು. ಅವರಿಗೆ ಜಾಮೀನು ಮತ್ತು ಕ್ಷಮಾದಾನದ ಭರವಸೆಯನ್ನು ನೀಡಲಾಗಿತ್ತು. ಬಂಧಿಸದೆ ಇರುವ ಮತ್ತೊಂದು ವರ್ಗವೂ ಇದೆ, ʼಎಂದು ವಕೀಲರು ಹೇಳಿದರು.

ʻಹೇಳಿಕೆಗಳು ಸಾಂದರ್ಭಿಕ ಸಾಕ್ಷಿಯಾಗಿವೆ,ʼ ಎಂದು ಹೇಳಿದರು.

ʻಅಪರಾಧಕ್ಕೆ ಕಾರಣವಾಗುವ ಸನ್ನಿವೇಶಗಳು ಪರಸ್ಪರ ಸಂಬಂಧ ಹೊಂದಿರಬೇಕು. ಕಳಂಕಿತ ವ್ಯಕ್ತಿಗಳ ಈ ಹೇಳಿಕೆಗಳು ಪ್ರಾಸಿಕ್ಯೂಷನ್ನಿಗೆ ಅಪಖ್ಯಾತಿ ತರುತ್ತವೆ. ಸೌತ್ ಗ್ರೂಪ್ ನಿಂದ 100 ಕೋಟಿ ರೂ. ಹಣ ಬಂದಿರುವುದಕ್ಕೆ ಯಾವುದೇ ಪುರಾವೆಗಳಿಲ್ಲ.ಇವೆಲ್ಲ ಯಾವುದೇ ಪುರಾವೆಗಳಿಲ್ಲದ ಹೇಳಿಕೆಗಳಷ್ಟೇ,ʼ ಎಂದು ವಕೀಲರು ಹೇಳಿದರು.

ʻಸಹ ಆರೋಪಿಗಳ ಹಲವಾರು ವ್ಯತಿರಿಕ್ತ ಹೇಳಿಕೆಗಳಿವೆ,ʼ ಎಂದು ಹೇಳಿದರು.

ʻಈ ಕೊರತೆಯನ್ನು ತುಂಬಲು ಮತ್ತೊಂದು ಹೇಳಿಕೆ ದಾಖಲಿಸಿದರೆ ನನಗೆ ಆಶ್ಚರ್ಯವಾಗುವುದಿಲ್ಲ. ಇದು ಅವರು ಅನುಸರಿಸುವ ಪ್ರಕ್ರಿಯೆ. ತನಿಖೆಗಳಿಗೆ ಅಂತ್ಯವಿರುವುದಿಲ್ಲ. ಅವರು ಬಯಸಿದಾಗ ಯಾರನ್ನಾದರೂ ಸೇರಿಸುತ್ತಾರೆ. ಇದು ದಬ್ಬಾಳಿಕೆಯ ಅತಿ ದೊಡ್ಡ ಸಾಧನ,ʼ ಎಂದು ಅವರು ಹೇಳಿದರು.

ʻಕೇಜ್ರಿವಾಲ್ ನ್ಯಾಯದಿಂದ ತಪ್ಪಿಸಿಕೊಳ್ಳುವ ಅಥವಾ ತನಿಖೆ ಅಥವಾ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಯಾವುದೇ ಸಾಧ್ಯತೆಗಳಿಲ್ಲ ಎಂದು ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ಸಿಎಂಗೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲ,ʼ ಎಂದು ಹೇಳಿದರು.

ಅರ್ಜಿಯನ್ನು ವಿರೋಧಿಸಿದ ಇಡಿ, ʻಪಿಎಂಎಲ್‌ಎ ಅಡಿಯಲ್ಲಿ ಜಾಮೀನು ಮಂಜೂರು ಮಾಡಲು ಸಾಂವಿಧಾನಿಕ ಹುದ್ದೆಯನ್ನು ಹೊಂದಿದ್ದಾರೆಯೇ ಎನ್ನುವುದು ಪ್ರಸ್ತುತವಾಗುವುದಿಲ್ಲ.ಜಾಮೀನು ನಿರಾಕರಿಸಲು ಇದು ಹೆಚ್ಚುವರಿ ಅಂಶವಾಗಬಹುದು. ಆದರೆ, ಅವರು ತಪ್ಪಿತಸ್ಥರೇ ಎಂಬುದು ಮಾತ್ರ ಪ್ರಸ್ತುತ,ʼ ಎಂದು ಇಡಿ ವಕೀಲರು ಹೇಳಿದರು.

ಕೇಜ್ರಿವಾಲ್ ಲಂಚಕ್ಕೆ ಬೇಡಿಕೆ ಇಟ್ಟಿರುವುದು ಸಿಬಿಐ ಪ್ರಕರಣ. ಅವರು 100 ಕೋಟಿ ರೂ.ಲಂಚ ಕೇಳಿದ್ದಾರೆ. ಮನೀಷ್ ಸಿಸೋಡಿಯಾ ಅವರ ಕಾಲದಲ್ಲಿ ಎಎಪಿಯನ್ನು ಆರೋಪಿಯನ್ನಾಗಿ ಮಾಡಿರಲಿಲ್ಲ. ಈಗ ಎಎಪಿಯನ್ನು ಆರೋಪಿಯನ್ನಾಗಿ ಮಾಡಲಾಗಿದೆ. ಕೇಜ್ರಿವಾಲ್ ಅವರ ನಡವಳಿಕೆಗೆ ಜವಾಬ್ದಾರರು, ʼಎಂದು ಇಡಿ ಹೇಳಿದೆ.

ʻಸಹ ಆರೋಪಿ ವಿಜಯ್ ನಾಯರ್ ಎಎಪಿಯ ಮಾಧ್ಯಮ ಸಂಯೋಜಕರಾಗಿದ್ದರು. ಮದ್ಯ ನೀತಿಯಲ್ಲಿ ಆಸಕ್ತಿ ಹೊಂದಿರುವವರು, ಸಗಟು ವ್ಯಾಪಾರಿಗಳೊಂದಿಗೆ ಸಭೆ ನಡೆಸುತ್ತಿದ್ದರು. ಅವರು ಕೇಜ್ರಿವಾಲ್‌ಗೆ ಬಹಳ ಹತ್ತಿರದವರು ಎಂಬುದಕ್ಕೆ ನಮ್ಮ ಬಳಿ ಪುರಾವೆಗಳಿವೆ. ಹಣ ಗೋವಾಕ್ಕೆ, ಹವಾಲಾ ಡೀಲರ್‌ಗಳಿಗೆ ಹೋಗಿದೆ. ದೊಡ್ಡ ಮೊತ್ತವನ್ನು ನಗದು ರೂಪದಲ್ಲಿ ಪಾವತಿಸಲಾಗಿದೆ,ʼ ಎಂದು ಇಡಿ ಹೇಳಿದೆ.

Read More
Next Story