ಕೇಜ್ರಿವಾಲ್‌ ಅವರಿಗೆ ಸೌಲಭ್ಯ ಒದಗಿಸಲು ನಿರ್ದೇಶನ
x

ಕೇಜ್ರಿವಾಲ್‌ ಅವರಿಗೆ ಸೌಲಭ್ಯ ಒದಗಿಸಲು ನಿರ್ದೇಶನ


ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ 'ವೈದ್ಯಕೀಯ ಸ್ಥಿತಿ'ಯಿಂದಾಗಿ ಅವರಿಗೆ ವಿದ್ಯುತ್ ಕೆಟಲ್ ಒದಗಿಸಬೇಕು. ಓದಲು ಕುರ್ಚಿ ಹಾಗೂ ಮೇಜು ನೀಡಬೇಕು ಎಂದು ತಿಹಾರ್ ಜೈಲಿ ಅಧಿಕಾರಿಗಳಿಗೆ ದಿಲ್ಲಿ ಹೈ ಕೋರ್ಟ್‌ ಆದೇಶಿಸಿದೆ.

ಅಬಕಾರಿ ನೀತಿ ಹಗರಣದಲ್ಲಿ ನ್ಯಾಯಾಲಯವು ಏಪ್ರಿಲ್ 15 ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. ಆಮ್ ಆದ್ಮಿ ಪಕ್ಷದ ಸಂಚಾಲಕ ರಿಗೆ ಚಹಾ ತಯಾರಿಸಲು ನೀರು ಕಾಯಿಸಲು ಎಲೆಕ್ಟ್ರಿಕ್ ಕೆಟಲ್ ಅಗತ್ಯವಿದೆ ಎಂಬ ಕೇಜ್ರಿವಾಲ್ ಅವರ ವಕೀಲರ ಅರ್ಜಿ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶರಾದ ಕಾವೇರಿ ಬವೇಜಾ ಅವರು ಅಗತ್ಯ ಸೌಲಭ್ಯ ಒದಗಿಸುವಂತೆ ಹೇಳಿದರು.

ಏ.1 ರಂದು ಕೇಜ್ರಿವಾಲ್ ಅವರನ್ನು ಜೈಲಿಗೆ ಕಳುಹಿಸಿದಾಗ, ಅವರಿಗೆ ಕುರ್ಚಿ ಮತ್ತು ಟೇಬಲ್ ನೀಡುವಂತೆ ಅರ್ಜಿ ಸಲ್ಲಿಸಲಾಗಿತ್ತು. ಆದರೆ, ಈಸಂಬಂಧ ಯಾವುದೇ ನಿರ್ದೇಶನ ನೀಡಿಲ್ಲ ಎಂದು ವಕೀಲರು ಹೇಳಿದರು. ʻಆರೋಪಿಯ ಆರೋಗ್ಯ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಎಲೆಕ್ಟ್ರಿಕ್ ಕೆಟಲ್ ಗೆ ಅನುಮತಿ ನೀಡಲಾಗಿದೆ. ಪುಸ್ತಕಗಳನ್ನು ಓದಲು ಕುರ್ಚಿ ಮತ್ತು ಟೇಬಲ್ ನೀಡಲು ಸಂಬಂಧಪಟ್ಟ ಜೈಲು ಅಧೀಕ್ಷಕರಿಗೆ ಸೂಚಿಸಲಾಗಿದೆ, ʼಎಂದು ನ್ಯಾಯಾಧೀಶರು ಹೇಳಿದರು.

ಕೇಜ್ರಿವಾಲ್ ಅವರ ವಕೀಲರಿಗೆ ಜೈಲು ಕೈಪಿಡಿಯ ಪ್ರತಿಯನ್ನು ನೀಡಲು ಸೂಚಿಸಿದರು.

Read More
Next Story