ದೆಹಲಿ ಕೋಚಿಂಗ್ ಸೆಂಟರ್ ಸಾವು: ಸಿಬಿಐ ತನಿಖೆಗೆ
x

ದೆಹಲಿ ಕೋಚಿಂಗ್ ಸೆಂಟರ್ ಸಾವು: ಸಿಬಿಐ ತನಿಖೆಗೆ


ದೆಹಲಿಯ ಕೋಚಿಂಗ್ ಸೆಂಟರ್‌ನ ನೆಲಮಾಳಿಗೆಯಲ್ಲಿ ಮೂವರು ಐಎಎಸ್ ಆಕಾಂಕ್ಷಿಗಳ ಸಾವು ಪ್ರಕರಣದ ತನಿಖೆಯನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ವಹಿಸಿಕೊಂಡಿದೆ ಎಂದು ಅಧಿಕಾರಿಗಳು ಬುಧವಾರ (ಆಗಸ್ಟ್ 7) ತಿಳಿಸಿದ್ದಾರೆ.

ದೆಹಲಿಯ ಹಳೆಯ ರಾಜೀಂದರ್ ನಗರದ ರಾವ್ಸ್‌ ಐಎಎಸ್ ಸ್ಟಡಿ ಸರ್ಕಲ್‌ನ ನೆಲಮಾಳಿಗೆಗೆ ಜುಲೈ 27ರಂದು ನೀರು ನುಗ್ಗಿ ಉತ್ತರ ಪ್ರದೇಶದ ಶ್ರೇಯಾ ಯಾದವ್ (25), ತೆಲಂಗಾಣದ ತಾನ್ಯಾ ಸೋನಿ (25) ಮತ್ತು ಕೇರಳದ ನೆವಿನ್ ಡೆಲ್ವಿನ್ (24) ಮೃತಪಟ್ಟಿದ್ದರು.

ದೆಹಲಿ ಹೈಕೋರ್ಟ್ ಆದೇಶದ ಮೇರೆಗೆ ದೆಹಲಿ ಪೊಲೀಸರಿಂದ ಸಿಬಿಐಗೆ ಪ್ರಕರಣವನ್ನು ಹಸ್ತಾಂತರಿಸಲಾಗಿದೆ.

ದೆಹಲಿ ಹೈಕೋರ್ಟ್ ಆದೇಶ: ವಿದ್ಯಾರ್ಥಿಗಳ ಸಾವಿಗೆ ಪೊಲೀಸರು ಮತ್ತು ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ) ಯನ್ನು ದೂಷಿ‌ ಸಿದ ನ್ಯಾಯಾಲಯ, ಐಎಎಸ್ ಆಕಾಂಕ್ಷಿಗಳಿಗೆ ನೆಲಮಾಳಿಗೆಯಿಂದ ಹೊರಬರಲು ಏಕೆ ಸಾಧ್ಯವಾಗಲಿಲ್ಲ ಎಂದು ಪ್ರಶ್ನಿಸಿತು. ಬಾಗಿಲುಗಳನ್ನು ಮುಚ್ಚಲಾಗಿತ್ತೇ ಅಥವಾ ಮೆಟ್ಟಿಲುಗಳು ಕಿರಿದಾಗಿದ್ದವೇ ಎಂದು ತಿಳಿಯಲು ಪ್ರಯತ್ನಿಸಿತು.

ʻನೀವು ಈಗಾಗಲೇ ಪ್ರಕರಣದ ತನಿಖೆ ಮಾಡಿದ್ದು, ಅದರಿಂದ ಏನು ಗೊತ್ತಾಯಿತು? ಮಕ್ಕಳು ಹೇಗೆ ಮುಳುಗಿದರು? ನೆಲಮಾಳಿಗೆ ತುಂಬಲು ಎರಡು-ಮೂರು ನಿಮಿಷ ಬೇಕಾಗುತ್ತದೆ. ಅವರು ಏಕೆ ಹೊರಬರಲು ಸಾಧ್ಯವಾಗಲಿಲ್ಲ?,ʼಎಂದು ನ್ಯಾಯಾಲಯ ಕೇಳಿತು.

ಸಿಬಿಐ ತನಿಖೆಯ ಮೇಲ್ವಿಚಾರಣೆಗೆ ಹಿರಿಯ ಅಧಿಕಾರಿಯನ್ನು ನೇಮಿಸಲು ಕೇಂದ್ರೀಯ ಜಾಗೃತ ಆಯೋಗ (ಸಿವಿಸಿ)ಕ್ಕೆ ನ್ಯಾಯಾಲಯ ಸೂಚಿಸಿದೆ.

Read More
Next Story