ಚುನಾವಣೆ 2024:  ರಾಜನಾಥ್ ಸಿಂಗ್  ಪ್ರಣಾಳಿಕೆ ಸಮಿತಿ ಮುಖ್ಯಸ್ಥ
x

ಚುನಾವಣೆ 2024: ರಾಜನಾಥ್ ಸಿಂಗ್ ಪ್ರಣಾಳಿಕೆ ಸಮಿತಿ ಮುಖ್ಯಸ್ಥ


ಮಾರ್ಚ್ 30- ಬಿಜೆಪಿ ಹಲವು ಕೇಂದ್ರ ಸಚಿವರು ಮತ್ತು ಮುಖ್ಯಮಂತ್ರಿಗಳನ್ನು ಒಳಗೊಂಡ 27 ಸದಸ್ಯರ ಚುನಾವಣೆ ಸಮಿತಿಯನ್ನು ರಚಿಸಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ನೇತೃತ್ವದ ಸಮಿತಿಗೆ ಪಕ್ಷದ ಪ್ರಣಾಳಿಕೆಯನ್ನು ರಚಿಸುವ ಹೊಣೆಗಾರಿಕೆ ನೀಡಲಾಗಿದೆ.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಮಿತಿಯ ಸಂಚಾಲಕರು ಮತ್ತು ಕೇಂದ್ರ ಸಚಿವ ಪಿಯೂಷ್ ಗೋಯಲ್ ಸಹ ಸಂಚಾಲಕರು. ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್, ಅಶ್ವಿನಿ ವೈಷ್ಣವ್, ಭೂಪೇಂದರ್ ಯಾದವ್, ಕಿರೆಣ್ ರಿಜಿಜು, ಅರ್ಜುನ್ ಮುಂಡಾ, ಅರ್ಜುನ್ ರಾಮ್ ಮೇಘವಾಲ್, ಸ್ಮೃತಿ ಇರಾನಿ ಮತ್ತು ರಾಜೀವ್ ಚಂದ್ರಶೇಖರ್ ಅಲ್ಲದೆ, ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಛತ್ತೀಸ್‌ಗಢದ ವಿಷ್ಣು ದೇವ್ ಸಾಯಿ, ಮಧ್ಯಪ್ರದೇಶದ ಮೋಹನ್ ಯಾದವ್, ಶಿವರಾಜ್ ಸಿಂಗ್ ಚೌಹಾಣ್ ಮತ್ತು ವಸುಂಧರಾ ರಾಜೆ ಕೂಡ ಸಮಿತಿಯಲ್ಲಿದ್ದಾರೆ. ಇವರೊಟ್ಟಿಗೆ, ಬಿಹಾರದ ನಾಯಕರಾದ ಸುಶೀಲ್ ಕುಮಾರ್ ಮೋದಿ ಮತ್ತು ರವಿಶಂಕರ್ ಪ್ರಸಾದ್, ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ, ಮಾಜಿ ಕೇಂದ್ರ ಸಚಿವ ಜುಯಲ್ ಓರಂ, ಪಕ್ಷದ ಸಂಘಟನಾ ನಾಯಕರಾದ ವಿನೋದ್ ತಾವ್ಡೆ, ರಾಧಾ ಮೋಹನ್ ದಾಸ್ ಅಗರವಾಲ್, ಮಂಜಿಂದರ್ ಸಿಂಗ್ ಸಿರ್ಸಾ, ತಾರಿಕ್ ಮನ್ಸೂರ್ ಮತ್ತು ಅನಿಲ್ ಆಂಟೋನಿ ಅವರನ್ನು ಸೇರ್ಪಡೆಗೊಳಿಸಲಾಗಿದೆ.

ಪಕ್ಷದ ಮಾಜಿ ಅಧ್ಯಕ್ಷ ರಾಜನಾಥ್ ಸಿಂಗ್ ಅವರು 2019 ರ ಪ್ರಣಾಳಿಕೆ ಸಮಿತಿಯ ಮುಖ್ಯಸ್ಥರಾಗಿದ್ದರು. ಪ್ರಸ್ತುತ ಸಮಿತಿಯಲ್ಲಿಯೂ ಹಲವು ಸದಸ್ಯರು ಪುನರಾವರ್ತನೆಯಾಗಿದ್ದಾರೆ. ಆದರೆ, ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸಮಿತಿ ಸದಸ್ಯರಲ್ಲ. ಇಂಥ ಹಿರಿಯ ನಾಯಕರನ್ನು ಚುನಾವಣೆಗೆ ಸಂಬಂಧಿಸಿದ ಇತರ ಕೆಲಸಗಳಿಗೆ ನೇಮಿಸಬಹುದು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಪಕ್ಷ ಈಗಾಗಲೇ ವಿವಿಧ ಗುಂಪುಗಳಿಂದ ಸಲಹೆ ಪಡೆಯುತ್ತಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಕಳೆದ ತಿಂಗಳು ʻವಿಕಸಿತ್ ಭಾರತ್ ಮೋದಿ ಕಿ ಗ್ಯಾರಂಟಿʼ" ವಿಡಿಯೋ ವ್ಯಾನ್‌ಗಳಿಗೆ ಚಾಲನೆ ನೀಡಿದ್ದರು. ಇವು ದೇಶಾದ್ಯಂತ ಸಂಚರಿಸಿ ಜನರ ಅಭಿಪ್ರಾಯಗಳನ್ನು ಸಂಗ್ರಹಿಸಲಿವೆ.

ಎರಡನೇ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು 370 ನೇ ವಿಧಿ ರದ್ದು, ರಾಮಮಂದಿರ ನಿರ್ಮಾಣ ಪೂರ್ಣಗೊಳಿಸಿದೆ. ಪಕ್ಷದ ಎರಡು ಪ್ರಮುಖ ಭರವಸೆಗಳು ಈಡೇರಿವೆ. ಕೆಲವು ರಾಜ್ಯ ಸರ್ಕಾರಗಳು ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಲು ಕೆಲಸ ಮಾಡುತ್ತಿವೆ. ಇದು ಪ್ರಮುಖ ಭರವಸೆಗಳಲ್ಲಿ ಒಂದು.

ಲೋಕಸಭೆ ಚುನಾವಣೆ ಏಪ್ರಿಲ್ 19 ರಿಂದ ಜೂನ್ 1 ರ ನಡುವೆ ನಡೆಯಲಿದೆ.

Read More
Next Story