ಆಸ್ಟ್ರಾಜೆನೆಕಾದ ಕ್ಯಾನ್ಸರ್ ವಿರೋಧಿ ಔಷಧ ಹಿಂಪಡೆಯಲು ಆದೇಶ
x

ಆಸ್ಟ್ರಾಜೆನೆಕಾದ ಕ್ಯಾನ್ಸರ್ ವಿರೋಧಿ ಔಷಧ ಹಿಂಪಡೆಯಲು ಆದೇಶ


3 ಅಥವಾ ಅದಕ್ಕಿಂತ ಹೆಚ್ಚು ಬಾರಿ ಕೀಮೋಥೆರಪಿ ಪಡೆದ ಕ್ಯಾನ್ಸರ್‌ ರೋಗಿಗಳಿಗೆ ಆಸ್ಟ್ರಾ ಜೆನೆಕಾದ ಉತ್ಪನ್ನ ಓಲಪರಿಬ್‌ ನೀಡಬಾರದು ಎಂದು ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಔಷಧ ನಿಯಂತ್ರಕರಿಗೆ ಪ್ರಧಾನ ಔಷಧ ನಿಯಂತ್ರಕರು ಸೂಚಿಸಿದ್ದಾರೆ.

ಜಿಬಿಆರ್‌ಸಿಎ ರೂಪಾಂತರ ಮತ್ತು ಮುಂದುವರಿದ ಸ್ತನ ಹಾಗೂ ಗರ್ಭಕೋಶದ ಕ್ಯಾನ್ಸರ್‌ ರೋಗಿಗಳಿಗೆ ಸಂಭವನೀಯ ಅಡ್ಡ ಪರಿಣಾಮಗಳಿಂದಾಗಿ ಓಲಪರಿಬ್‌ ನೀಡಬಾರದು ಎಂದು ರಾಜ್ಯಗಳ ಔಷಧ ನಿಯಂತ್ರಕರಿಗೆ ಪ್ರಧಾನ ನಿಯಂತ್ರಕರು ಸೂಚಿಸಿದ್ದಾರೆ. ಇತರ ಅನುಮೋದಿತ ಬಳಕೆಗೆ ಔಷಧ ಮಾರಾಟ ಮಾಡುವುದನ್ನು ಮುಂದುವರಿಸಬಹುದು ಎಂದು ಡಿಜಿಸಿಐ ಹೇಳಿದೆ.

ಮೇ 16 ರಂದು ರಾಜ್ಯ ನಿಯಂತ್ರಕರಿಗೆ ಕಳುಹಿಸಿದ ಸಂವಹನದಲ್ಲಿ, ಆಸ್ಟ್ರಾ ಜೆನೆಕಾ ಓಲಪರಿಬ್ಲಾ‌ 100 ಮಿಲಿಗ್ರಾಂ ಮತ್ತು 150 ಮಿಲಿಗ್ರಾಂ ಮಾತ್ರೆಗಳನ್ನು ಜಿಬಿಆರ್‌ಸಿಎ ರೂಪಾಂತರ ಮತ್ತು ಮುಂದುವರಿದ ಸ್ತನ ಹಾಗೂ ಗರ್ಭಕೋಶದ ಕ್ಯಾನ್ಸರ್‌ ರೋಗಿಗಳಿಗೆ ಸಂಭವನೀಯ ಅಡ್ಡ ಪರಿಣಾಮಗಳಿಂದಾಗಿ ನೀಡಬಾರದು ಎಂಬ ಹಿನ್ನೆಲೆಯಲ್ಲಿ ಆ ಔಷಧವನ್ನು ಹಿಂಪಡೆಯಬೇಕು ಎಂದು ಬರೆದಿತ್ತು. ʻಇಂಥ ಪರಿಸ್ಥಿತಿಯಲ್ಲಿ ಎಲ್ಲ ಉತ್ಪಾದಕರಿಗೆ ನೀವು ಓಲಪರಿಬ್‌ 100 ಮತ್ತು 150 ಮಿಲಿಗ್ರಾಂ ಮಾತ್ರೆಗಳನ್ನು ಹಿಂಪಡೆಯಲು ಸೂಚಿಸಬೇಕು. ಮತ್ತು, ಪರಿಷ್ಕೃತ ಸೂಚನೆಯನ್ನು ಸಲ್ಲಿಸಬೇಕು. ಇತರ ಬಳಕೆಗೆ ಈ ಔಷಧದ ಬಳಕೆ ಮುಂದುವರಿಸಬಹುದು,ʼ ಎಂದು ಡಿಜಿಸಿಐ ಹೇಳಿದೆ.

ಡಿಜಿಸಿಐ ಆಗಸ್ಟ್‌ 13,2018ರಂದು ಓಲಪರಿಬ್‌ 100 ಮಿಗ್ರಾಂ ಮತ್ತು 150 ಮಿಲಿಗ್ರಾಂ ಮಾತ್ರೆಗಳ ಬಳಕೆಗೆ ಅನುಮತಿ ನೀಡಿತ್ತು.

Read More
Next Story