CUET-UG ಫಲಿತಾಂಶ| ಬಿಸಿನೆಸ್‌ ಸ್ಟಡೀಸ್‌ನಲ್ಲಿ ಹೆಚ್ಚು ಅಂಕ ಗಳಿಕೆ
x

CUET-UG ಫಲಿತಾಂಶ| ಬಿಸಿನೆಸ್‌ ಸ್ಟಡೀಸ್‌ನಲ್ಲಿ ಹೆಚ್ಚು ಅಂಕ ಗಳಿಕೆ

ವಿದ್ಯಾರ್ಥಿಗಳು ಪೂರ್ಣ ಅಂಕಗಳನ್ನು ಗಳಿಸಿದ ಇತರ ವಿಷಯಗಳೆಂದರೆ ಇತಿಹಾಸ, ಇಂಗ್ಲಿಷ್, ಮನೋವಿಜ್ಞಾನ, ಜೀವಶಾಸ್ತ್ರ, ಅರ್ಥಶಾಸ್ತ್ರ, ರಸಾಯನಶಾಸ್ತ್ರ, ಭೂಗೋಳ ಮತ್ತು ಕೃಷಿ.


ಈ ವರ್ಷದ ಸಿಯುಇಟಿ-ಯುಜಿ(ವಿಶ್ವವಿದ್ಯಾನಿಲಯ ಸಾಮಾನ್ಯ ಪ್ರವೇಶ ಪರೀಕ್ಷೆ)ಯಲ್ಲಿ ಬಿಸಿನೆಸ್ ಸ್ಟಡೀಸ್ ವಿಷಯದಲ್ಲಿ 8,024 ಅಭ್ಯರ್ಥಿಗಳು ಪೂರ್ಣ ಅಂಕ ಗಳಿಸಿದ್ದಾರೆ. ರಾಜ್ಯಶಾಸ್ತ್ರದಲ್ಲಿ 5,141 ಮಂದಿ, ಇತಿಹಾಸ 2,520, ಇಂಗ್ಲಿಷ್‌ 1,683 ಮತ್ತು ಮನೋವಿಜ್ಞಾನ ದಲ್ಲಿ 1,602 ಮಂದಿ ಪೂರ್ಣ ಅಂಕ ಗಳಿಸಿದ್ದಾರೆ.

ಪೂರ್ಣ ಅಂಕಗಳನ್ನು ಗಳಿಸಿದ ಇತರ ವಿಷಯಗಳೆಂದರೆ ಜೀವಶಾಸ್ತ್ರ/ಜೈವಿಕ ಅಧ್ಯಯನ/ಜೈವಿಕ ತಂತ್ರಜ್ಞಾನ/ಜೀವರಸಾಯನಶಾಸ್ತ್ರ 835, ಅರ್ಥಶಾಸ್ತ್ರ/ವ್ಯಾಪಾರ ಅರ್ಥಶಾಸ್ತ್ರ 430, ರಸಾಯನಶಾಸ್ತ್ರ 398, ಭೂಗೋಳ/ಭೂವಿಜ್ಞಾನ 373 ಮತ್ತು ಕೃಷಿಯಲ್ಲಿ 180; ಐವರು ಗಣಿತ/ಅನ್ವಯಿಕ ಗಣಿತ, 17 ಮಂದಿ ಕಾನೂನು ಅಧ್ಯಯನ, ತೆಲುಗು, ಫ್ರೆಂಚ್, ಜಪಾನೀಸ್ ಮತ್ತು ರಷ್ಯನ್ ಭಾಷೆಯಲ್ಲಿ ತಲಾ ಒಬ್ಬರು ಪೂರ್ಣ ಅಂಕ ಗಳಿಸಿದ್ದಾರೆ.

ಪದವಿ ಪ್ರವೇಶ ಪ್ರಾರಂಭ: ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ)ಯು ಸಿಯುಇಟಿ-ಯುಜಿ ಫಲಿತಾಂಶಗಳನ್ನು ಭಾನುವಾರ ಪ್ರಕಟಿಸಿದ್ದು, ಪದವಿಪೂರ್ವ ಕೋರ್ಸ್‌ಗಳ ಪ್ರವೇಶ ಪ್ರಕ್ರಿಯೆ ಪ್ರಾರಂಭವಾಗಲಿದೆ. ಅಕ್ರಮಗಳ ಆರೋಪದ ಹಿನ್ನೆಲೆಯಲ್ಲಿ ಸಿಯುಇಟಿ ಮಾತ್ರವಲ್ಲದೆ, ನೀಟ್‌ ಯುಜಿ ಮತ್ತು ಯುಜಿಸಿ-ನೆಟ್‌ ಪರೀಕ್ಷೆಗಳು ಈ ವರ್ಷ ವಿಳಂಬವಾಗಿದೆ.

ಸಿಯುಇಟಿಗೆ ದೇಶಾದ್ಯಂತ 7.09 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು. ಒಬ್ಬರು ಮಾತ್ರ ಪೂರ್ಣ ಅಂಕ ಪಡೆದಿದ್ದಾರೆ. ಪ್ರತಿಯೊಂದು ವಿಷಯದಲ್ಲೂ ಕನಿಷ್ಠ ಒಬ್ಬರು ಪೂರ್ಣ ಅಂಕ ಗಳಿಸಿದ್ದಾರೆ. ಆದರೆ ಈ ವರ್ಷ ವಿವಿಧ ವಿಷಯಗಳಲ್ಲಿ ನೂರು ಶೇಕಡಾ ಅಂಕ ಗಳಿಸಿದವರ ಸಂಖ್ಯೆಯನ್ನು ಪರೀಕ್ಷಾ ಏಜೆನ್ಸಿ ಒದಗಿಸಿಲ್ಲ. ಕಳೆದ ವರ್ಷ 22,836 ಮಂದಿ ಶೇಕಡಾ ನೂರು ಅಂಕ ಗಳಿಸಿದ್ದರು. 2022 ರಲ್ಲಿ ಈ ಸಂಖ್ಯೆ 21,159 ಇದ್ದಿತ್ತು.

ಸಿಯುಇಟಿ ಫಲಿತಾಂಶ ಜೂನ್ 30 ರಂದು ಪ್ರಕಟವಾಗಬೇಕಿತ್ತು. ಆದರೆ ನೀಟ್-ಯುಜಿ, ಯುಜಿಸಿ-ನೆಟ್‌ ಮತ್ತು ಸಿಎಸ್‌ಐಆರ್-ಯುಜಿಸಿ-ನೆಟ್‌ ಪರೀಕ್ಷೆಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಆರೋಪದಿಂದಾಗಿ‌, ಎನ್ಟಿಎ ಫಲಿತಾಂಶ ಪ್ರಕಟನೆಯನ್ನು ವಿಳಂಬಗೊಳಿಸಿತು.

ಮರುಪರೀಕ್ಷೆ ಮತ್ತು ಕೀ ಉತ್ತರ: ಎನ್ಟಿಎ ಜುಲೈ 7 ರಂದು ಸಿಯುಇಟಿ-ಯುಜಿ ಪರೀಕ್ಷೆಯ ತಾತ್ಕಾಲಿಕ ಕೀ ಉತ್ತರಗಳನ್ನು ಬಿಡುಗಡೆ ಮಾಡಿ, ಜುಲೈ 19 ರಂದು 1,000 ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಮರುಪರೀಕ್ಷೆ ನಡೆಸಿತು. ಅವರ ದೂರು ನಿಜವೆಂದು ಕಂಡುಬಂದಿತು. ಜುಲೈ 7 ಮತ್ತು ಜುಲೈ 9 ರ ನಡುವೆ ತಾತ್ಕಾಲಿಕ ಕೀ ಉತ್ತರವನ್ನು ಪ್ರಶ್ನಿಸಲು ಅವಕಾಶ ನೀಡಲಾಯಿತು.

ʻಈ ಅವಧಿಯಲ್ಲಿ ಸುಮಾರು 9,512 ಮಂದಿ ಆಕ್ಷೇಪ ಸಲ್ಲಿಸಿದ್ದರು. ಅದರಲ್ಲಿ 1,782 ವಿಶಿಷ್ಟವಾಗಿದ್ದವು. ಅವನ್ನು ಸಂಬಂಧಪಟ್ಟ ವಿಷಯ ತಜ್ಞರಿಗೆ ತೋರಿಸಿ, ಅವರ ಪ್ರತಿಕ್ರಿಯೆಯನ್ನು ಆಧರಿಸಿ ಮತ್ತು ಬದಲಾವಣೆಗಳನ್ನುಅಳವಡಿಸಿ, ಅಂತಿಮ ಉತ್ತರ ಕೀಗಳನ್ನು ಸಿದ್ಧಪಡಿಸಲಾಗಿ ದೆ,ʼ ಎಂದು ಎನ್‌ಟಿಎ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

283 ಕೇಂದ್ರ, ರಾಜ್ಯ, ಡೀಮ್ಡ್ ಮತ್ತು ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಪದವಿಪೂರ್ವ ಕೋರ್ಸ್‌ಗಳಿಗೆ ಪ್ರವೇಶಕ್ಕೆ 13.4 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಏಜೆನ್ಸಿ ಒದಗಿಸಿದ ಸ್ಕೋರ್‌ಕಾರ್ಡ್ ಆಧರಿಸಿ ಮೆರಿಟ್ ಪಟ್ಟಿ ಸಿದ್ಧಪಡಿಸುತ್ತ ವೆ ಮತ್ತು ಪ್ರವೇಶ ಕೌನ್ಸೆಲಿಂಗ್ ನಡೆಸುತ್ತವೆ.

ಫಲಿತಾಂಶ ವಿಳಂಬ: ಮೇ ತಿಂಗಳಲ್ಲಿ ದೇಶದಾದ್ಯಂತ ಮೊದಲ ಬಾರಿಗೆ ಹೈಬ್ರಿಡ್ ವಿಧಾನದಲ್ಲಿ ನಡೆಯಬೇಕಿದ್ದ ಸಿಯಿಇಟಿ-ಯುಜಿ ಪರೀಕ್ಷೆಯನ್ನು ಹಿಂದಿನ ದಿನ ರದ್ದುಗೊಳಿಸಲಾಯಿತು. ಬಳಿಕ ದೆಹಲಿಯಲ್ಲಿ ಪರೀಕ್ಷೆ ನಡೆಯಿತು. 15 ವಿಷಯಗಳಿಗೆ ಲೇಖನಿ-ಕಾಗದ ವಿಧಾನದಲ್ಲಿ ಮತ್ತು ಇತರ 48 ವಿಷಯಗಳಿಗೆ ಕಂಪ್ಯೂಟರ್ ಆಧಾರಿತ ವಿಧಾನದಲ್ಲಿ ಪರೀಕ್ಷೆ ನಡೆಯಿತು.

2022 ರಲ್ಲಿ ಸಿಯುಇಟಿ-ಯುಜಿಯ ಮೊದಲ ಆವೃತ್ತಿಯು ತಾಂತ್ರಿಕ ದೋಷಗಳಿಂದಾಗಿ ಪರೀಕ್ಷೆ ಸಮಸ್ಯೆಗೆ ಸಿಲುಕಿತ್ತು.

Read More
Next Story