ಸಿಎಸ್‌ಕೆ ದಾಖಲೆ: ಇನ್‌ಸ್ಟಾದಲ್ಲಿ 15 ದಶಲಕ್ಷ ಅನುಯಾಯಿಗಳು
x

ಸಿಎಸ್‌ಕೆ ದಾಖಲೆ: ಇನ್‌ಸ್ಟಾದಲ್ಲಿ 15 ದಶಲಕ್ಷ ಅನುಯಾಯಿಗಳು


ಮಾ.31- ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ಮತ್ತೊಂದು ದಾಖಲೆ ಮಾಡಿದ್ದು, ಇನ್‌ಸ್ಟಾಗ್ರಾಮ್‌ನಲ್ಲಿ 15 ದಶಲಕ್ಷ ಅನುಯಾಯಿಗಳನ್ನು ಹೊಂದಿರುವ ಮೊದಲ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ತಂಡವಾಗಿದೆ.

ವಿಶಾಖಪಟ್ಟಣದಲ್ಲಿ ಭಾನುವಾರ ಸಂಜೆ ನಡೆದ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ವಿರುದ್ಧದ ಪಂದ್ಯಕ್ಕೆ ಮೊದಲು ಎಕ್ಸ್ ನಲ್ಲಿ ಈ ಬಗ್ಗೆ ಪ್ರಕಟಿಸಿದೆ. ʻಸಿಎಸ್‌ಕೆ ಗೆ ಇನ್ಸ್ಟಾದಲ್ಲಿ 15 ಮಿಲಿಯನ್ ಬೆಂಬಲಿಗರು! ಮತ್ತು ಹಳದಿ ವರ್ಣ ಬೆಳೆಯುತ್ತಲೇ ಇದೆ!ʼ ಎಂದು ಬರೆದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಎರಡನೇ ಅತಿ ಹೆಚ್ಚು 13.5 ದಶಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದೆ. ನಂತರದ ಸ್ಥಾನ ಮುಂಬೈ ಇಂಡಿಯನ್ಸ್ (ಎಂಐ) 13.2 ದಶಲಕ್ಷಕ್ಕೂ ಹೆಚ್ಚು ಅನುಯಾಯಿಗಳಿದ್ದಾರೆ.

2008 ರಲ್ಲಿಐಪಿಎಲ್‌ ಆರಂಭವಾದಾಗಿನಿಂದ, ಸಿಎಸ್‌ಕೆ ಅತ್ಯಂತ ಜನಪ್ರಿಯ ತಂಡಗಳಲ್ಲಿ ಒಂದಾಗಿದೆ. ಎಂ.ಎಸ್. ಧೋನಿ ತಂಡದ ನಾಯಕನಾಗಿರುವುದು ಇದಕ್ಕೆ ಕಾರಣ. ತಂಡ ಇದುವರೆಗೆ ಐದು ಐಪಿಎಲ್ ಪ್ರಶಸ್ತಿ ಗೆದ್ದಿದೆ. 2024ರ ಐಪಿಎಲ್‌ ಗೆ ಮುನ್ನ ಧೋನಿ ಸಿಎಸ್‌ಕೆ ನಾಯಕತ್ವದಿಂದ ಕೆಳಗಿಳಿದು, ಋತುರಾಜ್ ಗಾಯಕ್ವಾಡ್‌ಗೆ ಜವಾಬ್ದಾರಿಯನ್ನು ಹಸ್ತಾಂತರಿಸಿದರು

Read More
Next Story