ಗ್ಲೋಬಲ್ ಚೆಸ್ ಲೀಗ್‌ ತಂಡ ಖರೀದಿಸಿದ ರವಿಚಂದ್ರನ್‌ ಅಶ್ವಿನ್
x

ಗ್ಲೋಬಲ್ ಚೆಸ್ ಲೀಗ್‌ ತಂಡ ಖರೀದಿಸಿದ ರವಿಚಂದ್ರನ್‌ ಅಶ್ವಿನ್


ನವದೆಹಲಿ, ಜುಲೈ 8- ಭಾರತದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಟೆಕ್ ಮಹೀಂದ್ರಾ ಮತ್ತು ಇಂಟರ್‌ನ್ಯಾಷನಲ್ ನ ಜಂಟಿ ಉದ್ಯಮವಾದ ಗ್ಲೋಬಲ್ ಚೆಸ್ ಲೀಗ್‌ನ ಎರಡನೇ ಆವೃತ್ತಿಯಲ್ಲಿ ಭಾಗವಹಿಸುತ್ತಿರುವ ಅಮೆರಿಕನ್ ಗ್ಯಾಂಬಿಟ್ಸ್‌ ತಂಡದ ಸಹ ಮಾಲೀಕರಾಗಿದ್ದಾರೆ.

ಅಕ್ಟೋಬರ್ 3 ರಿಂದ 12 ರವರೆಗೆ ಲಂಡನ್‌ನಲ್ಲಿ ನಡೆಯಲಿರುವ ಎರಡನೇ ಗ್ಲೋಬಲ್‌ ಚೆಸ್‌ ಲೀಗಿನಲ್ಲಿ ಆಡಲಿರುವ ಆರು ತಂಡಗಳನ್ನು ಸೋಮವಾರ ಅನಾವರಣಗೊಳಿಸಲಾಗಿದೆ.

ಪ್ರಚುರ ಪಿಪಿ, ವೆಂಕಟ್ ಕೆ. ನಾರಾಯಣ ಮತ್ತು ಅಶ್ವಿನ್ ಒಡೆತನದ ಅಮೆರಿಕನ್ ಗ್ಯಾಂಬಿಟ್ಸ್ ತಂಡವು ಚಿಂಗಾರಿ ಗಲ್ಫ್ ಟೈಟಾನ್ಸ್ ಬದಲು ಆಡಲಿದೆ.

ಆಡಲಿರುವ ಇತರ ಐದು ಫ್ರಾಂಚೈಸಿಗಳೆಂದರೆ, ಆಲ್ಪೈನ್ ಎಸ್ಜಿ ಪೈಪರ್ಸ್, ಪಿಬಿಜಿ ಅಲಾಸ್ಕನ್ ನೈಟ್ಸ್, ಗಂಗಾ ಗ್ರ್ಯಾಂಡ್ ಮಾಸ್ಟರ್ಸ್, ಹಾಲಿ ಚಾಂಪಿಯನ್ ತ್ರಿವೇಣಿ ಕಾಂಟಿನೆಂಟಲ್ ಕಿಂಗ್ಸ್ ಮತ್ತು ಮುಂಬಾ ಮಾಸ್ಟರ್ಸ್.

ʻನಮ್ಮ ತಂಡವು ಆಟವನ್ನು ಮರುವ್ಯಾಖ್ಯಾನಿಸುವ ಗುರಿಯನ್ನು ಹೊಂದಿದೆ. ಸಹ ಮಾಲೀಕನಾಗಿ ಆಟಗಾರರನ್ನು ವೀಕ್ಷಿಸಲು ಮತ್ತು ಯಶಸ್ಸಿಗೆ ಅವರ ಕೊಡುಗೆಯನ್ನು ನೋಡಲು ಉತ್ಸುಕನಾಗಿದ್ದೇನೆ,ʼ ಎಂದು ಅಶ್ವಿನ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗ್ಲೋಬಲ್ ಚೆಸ್ ಲೀಗ್‌ನ ಸಿಇಒ ಸಮೀರ್ ಪಾಠಕ್, ʻ ಎರಡನೇ ಋತುಗೆ ತಂಡಗಳನ್ನುಉತ್ಸಾಹದಿಂದ ಸ್ವಾಗತಿಸುತ್ತಿದ್ದೇವೆ. ಲೀಗಿನ ಜಾಗತಿಕ ವ್ಯಾಪ್ತಿಯನ್ನು ಹೆಚ್ಚಿಸಲು ಸರಿಯಾದ ಪಾಲುದಾರರನ್ನು ಕಂಡುಕೊಂಡಿದ್ದೇವೆ,ʼ ಎಂದು ಹೇಳಿದರು.

ಇಬ್ಬರು ಅಗ್ರ ಮಹಿಳಾ ಚೆಸ್ ಆಟಗಾರರು ಮತ್ತು ಪ್ರತಿ ತಂಡದಲ್ಲಿ ಒಬ್ಬ ಪ್ರಾಡಿಜಿ ಆಟಗಾರ್ತಿ ಸೇರಿದಂತೆ ಆರು ಆಟಗಾರರು ಇರುತ್ತಾರೆ. ಪ್ರಮುಖ ಒಟಿಟಿ ಮತ್ತು ವಿವಿಧ ವೇದಿಕೆಗಳಲ್ಲಿ ಪ್ರಸಾರ ಮಾಡಲಾಗುತ್ತದೆ.

ಪಂದ್ಯಾವಳಿಯಲ್ಲಿ ಪ್ರತಿ ತಂಡ ಒಟ್ಟು 10 ಪಂದ್ಯ ಆಡುತ್ತದೆ. ಪ್ರತಿ ಪಂದ್ಯದ ವಿಜೇತರನ್ನು ಆರರಲ್ಲಿ ಉತ್ತಮ ಅಂಕ ವ್ಯವಸ್ಥೆಯಲ್ಲಿ ನಿರ್ಧರಿಸಲಾಗುತ್ತದೆ. ಅಗ್ರ ಎರಡು ತಂಡಗಳು ಅಂತಿಮ ಸುತ್ತಿಗೆ ಮುನ್ನಡೆಯಲಿವೆ.

Read More
Next Story