
By-Election Results| ಏಳು ರಾಜ್ಯ, ಒಂದು ಕೇಂದ್ರಾಡಳಿತ ಪ್ರದೇಶದ ಎಂಟು ಕ್ಷೇತ್ರಗಳಲ್ಲೂ ಮತ ಎಣಿಕೆ
ಬಿಹಾರ ವಿಧಾನಸಭಾ ಚುನಾವಣೆ ಜತೆಗೆ ದೇಶದ ಏಳು ರಾಜ್ಯಗಳು, ಒಂದು ಕೇಂದ್ರಾಡಳಿತ ಪ್ರದೇಶದ ಎಂಟು ಕ್ಷೇತ್ರಗಳಲ್ಲಿ ಮತ ಎಣಿಕೆ ನಡೆಯುತ್ತಿದೆ. ರಾಷ್ಟ್ರದಾದ್ಯಂತ ತೀವ್ರ ಕುತೂಹಲ ಮೂಡಿಸಿದೆ.
ಬಿಹಾರ ವಿಧಾನಸಭಾ ಚುನಾವಣೆಯ ಜತೆಗೆ ದೇಶದ ಏಳು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ಎಂಟು ವಿಧಾನಸಭಾ ಕ್ಷೇತ್ರಗಳಿಗೆ ನಡೆದಿದ್ದ ಉಪಚುನಾವಣೆಯ ಮತ ಎಣಿಕೆಯೂ ನಡೆಯುತ್ತಿದೆ. ಇದೇ 11 ರಂದು ನಡೆದಿದ್ದ ಈ ಚುನಾವಣೆಗಳ ಫಲಿತಾಂಶ ಹೊರಬೀಳಲಿದ್ದು, ರಾಷ್ಟ್ರದಾದ್ಯಂತ ತೀವ್ರ ಕುತೂಹಲ ಮೂಡಿಸಿದೆ.
ಜಮ್ಮು ಮತ್ತು ಕಾಶ್ಮೀರದ ಬುಡ್ಗಾಮ್ ಮತ್ತು ನಗ್ರೋಟಾ, ರಾಜಸ್ಥಾನದ ಅಂತಾ, ಜಾರ್ಖಂಡ್‌ನ ಘಾಟ್ಸಿಲಾ, ತೆಲಂಗಾಣದ ಜುಬಿಲಿ ಹಿಲ್ಸ್, ಪಂಜಾಬ್‌ನ ತರಣ್ ತರಣ್, ಮಿಜೋರಾಂನ ದಂಪಾ ಮತ್ತು ಒಡಿಶಾದ ನುವಾಪಾದ ಕ್ಷೇತ್ರಗಳಲ್ಲಿ ಮತದಾನ ನಡೆದಿತ್ತು. ಚುನಾವಣಾ ಆಯೋಗದ ಮಾಹಿತಿ ಪ್ರಕಾರ, ನುವಾಪಾದದಲ್ಲಿ ಶೇ 79.4, ಬುಡ್ಗಾಮ್‌ನಲ್ಲಿ ಶೇ 50, ನಾಗ್ರೋಟಾದಲ್ಲಿ ಶೇ 75.1, ಅಂತಾದಲ್ಲಿ ಶೇ 80.3, ದಂಪಾದಲ್ಲಿ ಶೇ 82.3, ಘಾಟ್ಸಿಲಾದಲ್ಲಿ ಶೇ 74.6, ಜುಬಿಲಿ ಹಿಲ್ಸ್‌ನಲ್ಲಿ ಶೇ 48.5 ಮತ್ತು ತರಣ್ ತರಣ್‌ನಲ್ಲಿ ಶೇ 61ರಷ್ಟು ಮತದಾನವಾಗಿದೆ.
ರಾಜಸ್ಥಾನದ ಅಂತಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಮೋದ್ ಜೈನ್ ಭಯ ಮತ್ತು ಬಿಜೆಪಿಯ ಮೋರ್ಪಾಲ್ ಸುಮನ್ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಒಟ್ಟು 15 ಅಭ್ಯರ್ಥಿಗಳು ಕಣದಲ್ಲಿದ್ದು, 2,26,643 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ತೆಲಂಗಾಣದ ಜುಬಿಲಿ ಹಿಲ್ಸ್‌ನಲ್ಲಿ ಈ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಇದೆ. ಬಿಜೆಪಿಯಿಂದ ಎಲ್. ದೀಪಕ್ ರೆಡ್ಡಿ, ಬಿಆರ್‌ಎಸ್‌ನಿಂದ ಮಾಜಿ ಶಾಸಕ ಗೋಪಿನಾಥ್ ಅವರ ಪತ್ನಿ ಸುನೀತಾ ಮತ್ತು ಎಐಎಂಐಎಂ ಬೆಂಬಲಿತ ಕಾಂಗ್ರೆಸ್ ಅಭ್ಯರ್ಥಿ ನವೀನ್ ಯಾದವ್ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ.
ಜಾರ್ಖಂಡ್‌ನ ಘಾಟ್ಸಿಲಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಚಂಪೈ ಸೊರೇನ್ ಅವರ ಪುತ್ರ ಹಾಗೂ ಬಿಜೆಪಿ ಅಭ್ಯರ್ಥಿ ಬಾಬುಲಾಲ್ ಸೊರೇನ್ ಮತ್ತು ಮಹಾಘಟಬಂಧನ್ ಅಭ್ಯರ್ಥಿ ಸೋಮೇಶ್ ಚಂದ್ರ ಸೊರೆನ್ ನಡುವೆ ಪ್ರಮುಖ ಸ್ಪರ್ಧೆ ಇದೆ. ಜಮ್ಮು ಮತ್ತು ಕಾಶ್ಮೀರದ ಬುಡ್ಗಾಮ್ ಕ್ಷೇತ್ರದಲ್ಲಿ ನ್ಯಾಷನಲ್ ಕಾನ್ಫರೆನ್ಸ್‌ನ ಅಗಾ ಸೈಯದ್ ಮೆಹಮೂದ್, ಪಿಡಿಪಿಯ ಅಗಾ ಮುಂತಜೀರ್ ಮತ್ತು ಬಿಜೆಪಿಯ ಸೈಯದ್ ಮೊಹ್ಸಿನ್ ಸೇರಿದಂತೆ ಹಲವು ಪ್ರಮುಖರು ಕಣದಲ್ಲಿದ್ದಾರೆ. ಪಂಜಾಬ್‌ನ ತರಣ್ ತರಣ್ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದ ಹರ್ಮೀತ್ ಸಿಂಗ್ ಸಂಧು, ಕಾಂಗ್ರೆಸ್‌ನ ಕರಣ್‌ಬೀರ್ ಸಿಂಗ್ ಬುರ್ಜ್ ಮತ್ತು ಬಿಜೆಪಿಯ ಹರ್ಜಿತ್ ಸಿಂಗ್ ಸಂಧು ನಡುವೆ ಸ್ಪರ್ಧೆ ಏರ್ಪಟ್ಟಿದೆ.
ಪಂಜಾಬ್‌ನ ತರಣ್ ತರಣ್ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದ ಹರ್ಮೀತ್ ಸಿಂಗ್ ಸಂಧು, ಕಾಂಗ್ರೆಸ್‌ನ ಕರಣ್‌ಬೀರ್ ಸಿಂಗ್ ಬುರ್ಜ್ ಮತ್ತು ಬಿಜೆಪಿಯ ಹರ್ಜಿತ್ ಸಿಂಗ್ ಸಂಧು ನಡುವೆ ಸ್ಪರ್ಧೆ ಏರ್ಪಟ್ಟಿದೆ. ಮಿಜೋರಾಂನ ದಂಪಾದಲ್ಲಿ ಜೆಡ್‌ಪಿಎಂ ಅಭ್ಯರ್ಥಿ ವನ್ಲಾಲ್ ಸೈಲೋವಾ, ಎಂಎನ್‌ಎಫ್‌ನ ಆರ್. ಲಾಲ್‌ಥಾಂಗ್ಲಿಯಾನ, ಕಾಂಗ್ರೆಸ್‌ನ ಜಾನ್ ರೊಟ್ಲುವಾಂಗ್ಲಿಯಾನ ಮತ್ತು ಬಿಜೆಪಿಯ ಲಾಲ್‌ಮಿಂಗ್‌ಥಾಂಗ ಕಣದಲ್ಲಿದ್ದಾರೆ. ಒಡಿಶಾದ ನುವಾಪಾದ ಕ್ಷೇತ್ರದಲ್ಲಿ ಬಿಜೆಡಿಯ ಸ್ನೇಹಾಂಗಿನಿ ಚುರಿಯಾ, ಬಿಜೆಪಿಯ ಜೇ ಧೋಲಾಕಿಯಾ ಮತ್ತು ಕಾಂಗ್ರೆಸ್‌ನ ಘಾಸಿರಾಮ್ ಮಾಝಿ ನಡುವೆ ಪ್ರಮುಖ ಪೈಪೋಟಿ ಇದೆ. ಜಮ್ಮು ಮತ್ತು ಕಾಶ್ಮೀರದ ನಗ್ರೋಟಾ ಕ್ಷೇತ್ರದಲ್ಲಿ ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿ ಅನಿಲ್ ಶರ್ಮಾ ಸ್ವತಂತ್ರವಾಗಿ ಸ್ಪರ್ಧಿಸಿದ್ದರೆ, ಆಮ್ ಆದ್ಮಿ ಪಕ್ಷದ ಜೋಗಿಂದರ್ ಸಿಂಗ್ ಕೂಡ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದು ಕುತೂಹಲ ಮೂಡಿಸಿದೆ.

