ರಾಜ್ಯಸಭೆ ಚುನಾವಣೆ ಸೋಲು: ಹೈಕೋರ್ಟ್‌ ಕದ ತಟ್ಟಿದ ಸಿಂಘ್ವಿ
x

ರಾಜ್ಯಸಭೆ ಚುನಾವಣೆ ಸೋಲು: ಹೈಕೋರ್ಟ್‌ ಕದ ತಟ್ಟಿದ ಸಿಂಘ್ವಿ


ಏಪ್ರಿಲ್‌ 6- ಹಿಮಾಚಲ ಪ್ರದೇಶದಿಂದ ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಿ ಪರಾಭವಗೊಂಡಿರುವ ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ, ಡ್ರಾ ನಿಯಮ ಕುರಿತು ಚುನಾವಣಾಧಿಕಾರಿಯ ವ್ಯಾಖ್ಯಾನವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಫೆಬ್ರವರಿ 27 ರಂದು ನಡೆದ ಚುನಾವಣೆಯಲ್ಲಿ ಸಿಂಘ್ವಿ ಮತ್ತು ಬಿಜೆಪಿ ಅಭ್ಯರ್ಥಿ ಹರ್ಷ್ ಮಹಾಜನ್ ಇಬ್ಬರಿಗೂ ತಲಾ 34 ಮತ ಬಂದಿತ್ತು. ಡ್ರಾ ಮೂಲಕ ಹರ್ಷ್ ಮಹಾಜನ್ ಗೆದ್ದರು.

ವಿಧಾನಸಭೆಯಲ್ಲಿ ಕಾಂಗ್ರೆಸ್ಸಿನ 40 ಸದಸ್ಯರಿದ್ದು, ಮೂವರು ಪಕ್ಷೇತರರ ಬೆಂಬಲವಿತ್ತು. ಆದರೆ, ಒಂಬತ್ತು ಶಾಸಕರು( ಆರು ಕಾಂಗ್ರೆಸ್ ಬಂಡಾಯ ಮತ್ತು ಮೂವರು ಪಕ್ಷೇತರರು) ಬಿಜೆಪಿ ಅಭ್ಯರ್ಥಿ ಪರ ಮತ ಚಲಾಯಿಸಿದ್ದರಿಂದ, ಇಬ್ಬರು ಅಭ್ಯರ್ಥಿಗಳು ತಲಾ 34 ಮತ ಪಡೆದಿದ್ದರು. ಆನಂತರ ಡ್ರಾ ಮೂಲಕ ವಿಜೇತರನ್ನು ನಿರ್ಧರಿಸಲಾಗಿತ್ತು.

ಮಾತನಾಡಿದ ಸಿಂಘ್ವಿ, ʻಡ್ರಾ ಮಾಡಿದಾಗ ಯಾರ ಹೆಸರು ಬರುತ್ತದೋ ಅವರು ಸೋತಿದ್ದಾರೆ ಎನ್ನುವ ಯಾವುದೇ ಕಾನೂನು, ಕಾಯಿದೆ ಅಥವಾ ನಿಯಮ ಇಲ್ಲʼ ಎಂದು ಸಿಂಘ್ವಿ ಹೇಳಿದರು. ʻಚುನಾವಣೆ ಅಧಿಕಾರಿಯ ವ್ಯಾಖ್ಯಾನ ಸಾಮಾನ್ಯ ತಿಳಿವಳಿಕೆ, ಸಂಪ್ರದಾಯ ಮತ್ತು ಆಚರಣೆಗೆ ವಿರುದ್ಧವಾಗಿದೆ. ಯಾರ ಹೆಸರು ಬರುತ್ತದೋ ಅವರು ವಿಜೇತರು: ಸೋತವರಲ್ಲʼ ಎಂದರು.

ರಾಜ್ಯಸಭೆ ಚುನಾವಣೆಯಲ್ಲಿ ಸೋಲಿನ ನಂತರ ಕಾಂಗ್ರೆಸ್ ಬಿಕ್ಕಟ್ಟಿನಲ್ಲಿ ಸಿಲುಕಿದೆ.

Read More
Next Story