
ಕಾಂಗ್ರೆಸ್ ಪುನರುಜ್ಜೀವನ: ಮೂರಂಕಿ ದಾಟಲು ಸಜ್ಜು
ಕಾಂಗ್ರೆಸ್ ಲೋಕಸಭೆ ಚುನಾವಣೆಗಳಲ್ಲಿ ಪುನರುಜ್ಜೀವಗೊಂಡಿದ್ದು, ಮೂರಂಕಿ ದಾಟುವ ಹಾದಿಯಲ್ಲಿದೆ.
2014 ಮತ್ತು 2019ರಲ್ಲಿ ಹೀನಾಯ ಸೋಲು ಎದುರಿಸಿದ್ದ ಕಾಂಗ್ರೆಸ್, 2014 ರಲ್ಲಿ ಕೇವಲ 44 ಮತ್ತು 2019 ರಲ್ಲಿ 52 ಕ್ಷೇತ್ರಗಳಲ್ಲಿ ಗೆದ್ದಿತ್ತು. 2009 ರಲ್ಲಿ ಪಕ್ಷ 206 ಸ್ಥಾನಗಳನ್ನು ಗೆದ್ದು, ಮನಮೋಹನ್ ಸಿಂಗ್ ನೇತೃತ್ವದ ಯುಪಿಎ 2.0 ಗೆ ದಾರಿ ಮಾಡಿಕೊಟ್ಟಿತು.
ಮಧ್ಯಾಹ್ನ 2.30 ಗಂಟೆಗೆ ಕಾಂಗ್ರೆಸ್ 97 ಕ್ಷೇತ್ರದಲ್ಲಿ ಮತ್ತುಇಂಡಿಯ ಒಕ್ಕೂಟ 234 ಸ್ಥಾನಗಳಲ್ಲಿ ಮುಂದಿತ್ತು. ಆದರೆ, ಕಳೆದ ಬಾರಿ 303 ಸ್ಥಾನ ಗೆದ್ದಿದ್ದ ಬಿಜೆಪಿ, 272ರ ಬಹುಮತದ ಗುರುತನ್ನು ಮುಟ್ಟಿಲ್ಲ.
2014 ರಲ್ಲಿ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್, 'ಮೋದಿ ಅಲೆ'ಯಲ್ಲಿ ಹೀನಾಯ ಸೋಲು ಅನುಭವಿಸಿತು ಮತ್ತು 162 ಸ್ಥಾನಗಳನ್ನು ಕಳೆದುಕೊಂಡಿತು. ಶೇ.9.3 ಮತ ಗಳಿಕೆ ಕಡಿಮೆಯಾಯಿತು. ಪಶ್ಚಿಮದಲ್ಲಿ ಗುಜರಾತ್ ಮತ್ತು ರಾಜಸ್ಥಾನ, ಪೂರ್ವದಲ್ಲಿ ಬಿಹಾರ ಮತ್ತು ಜಾರ್ಖಂಡ್ ಮತ್ತು ಮಧ್ಯಪ್ರದೇಶ ಬೆಲ್ಟ್‌ನಲ್ಲಿ ಸೋಲುಂಡಿತು. ಈ ರಾಜ್ಯಗಳು 543 ಸ್ಥಾನಗಳಲ್ಲಿ 336 ಸ್ಥಾನಗಳನ್ನು ಹೊಂದಿವೆ. ಬಿಜೆಪಿ ಸ್ವಂತ ಬಲದಿಂದ 282 ಸ್ಥಾನ ಗೆದ್ದುಕೊಂಡಿತು. ಎನ್‌ಡಿಎ ಉತ್ತರಪ್ರದೇಶ 73, ಮಹಾರಾಷ್ಟ್ರ 41, ಬಿಹಾರ 31 ಮತ್ತು ಮಧ್ಯಪ್ರದೇಶದಲ್ಲಿ 27, ಗುಜರಾತಿನ 26, ರಾಜಸ್ಥಾನದ 25, ದೆಹಲಿಯ 7, ಹಿಮಾಚಲ ಪ್ರದೇಶದ ನಾಲ್ಕು, ಉತ್ತರಾಖಂಡದ ಐದು, ಜಾರ್ಖಂಡ್‌ನ 14 ರಲ್ಲಿ 12, ಛತ್ತೀಸ್‌ಗಢದ 11 ರಲ್ಲಿ 10 ಮತ್ತು ಹರಿಯಾಣದ 10 ರಲ್ಲಿ 7 ಸ್ಥಾನಗಳನ್ನು ಗೆದ್ದುಕೊಂಡಿತು. ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಕೇವಲ ಎರಡು ಸ್ಥಾನಗಳಲ್ಲಿ ಗೆದ್ದಿದೆ ಸಾಧಿಸಿತು: ಪಕ್ಷದ ಭದ್ರಕೋಟೆಗಳಾದ ಅಮೇಥಿ ಮತ್ತು ರಾಯ್ಬರೇಲಿ. ಹಿಂದಿ ಬೆಲ್ಟ್‌ನಲ್ಲಿ ಕೇವಲ ಆರು ಸ್ಥಾನ ಗೆದ್ದುಕೊಂಡಿತು. ಯುಪಿಎ ಪಾಲುದಾರರು ಆರು ಸ್ಥಾನ ನೀಡಿದರು.
2019ರಲ್ಲಿ ಬಿಜೆಪಿ ಸ್ವಂತ ಬಲದಿಂದ 303 ಮತ್ತು ಮಿತ್ರಪಕ್ಷಗಳೊಂದಿಗೆ 353 ಸ್ಥಾನ ಗೆದ್ದುಕೊಂಡಿತು. ಯುಪಿ 74, ಬಿಹಾರ 39, ಮಧ್ಯಪ್ರದೇಶ 28, ಗುಜರಾತ್, ರಾಜಸ್ಥಾನ, ಹರಿಯಾಣ, ಉತ್ತರಾಖಂಡ, ಹಿಮಾಚಲ ಪ್ರದೇಶ ಮತ್ತು ದೆಹಲಿಯಲ್ಲಿ ಒಟ್ಟು 77, ಛತ್ತೀಸ್‌ಗಢ 9 ಮತ್ತು ಜಾರ್ಖಂಡ್ 11 ಸೇರಿಸಿ, ಬಿಜೆಪಿ ಈ ಬೆಲ್ಟ್ ನಿಂದ 238 ಸ್ಥಾನ ಗಳಿಸಿತು. ಮತ್ತೊಂದೆಡೆ, ಕಾಂಗ್ರೆಸ್ ತನ್ನ 2014 ರ ಸಂಖ್ಯೆಯನ್ನು 52 ಕ್ಕೆ ಹೆಚ್ಚಿಸಿಕೊಂಡಿತು.