ರಾಜೀವ್ ಚಂದ್ರಶೇಖರ್ ಸುಳ್ಳು ಅಫಿಡವಿಟ್: ಆಯೋಗಕ್ಕೆ ದೂರು
x

ರಾಜೀವ್ ಚಂದ್ರಶೇಖರ್ ಸುಳ್ಳು ಅಫಿಡವಿಟ್: ಆಯೋಗಕ್ಕೆ ದೂರು


ಕೇಂದ್ರ ಐಟಿ ಸಚಿವ ರಾಜೀವ್ ಚಂದ್ರಶೇಖರ್ ಅವರು ಸುಳ್ಳು ಪ್ರಮಾಣಪತ್ರ ಸಲ್ಲಿಸಿದ್ದಾರೆ ಎಂದು ಆರೋಪಿಸಿ, ತಿರುವನಂತಪುರದ ಚುನಾವಣಾಧಿಕಾರಿ ಮತ್ತು ಜಿಲ್ಲಾಧಿಕಾರಿ ಜೆರೋಮಿಕ್ ಜಾರ್ಜ್ ಅವರಿಗೆ ದೂರು ನೀಡಲಾಗಿದೆ. ರೆಂಜಿತ್ ಥಾಮಸ್ ಎಂಬ ಬೆಂಗಳೂರಿನ ಬಿಟಿಎಂ ಲೇಔಟ್‌ ನಿವಾಸಿ ದೂರು ನೀಡಿದವರು.

ದೂರು ಏನು?: ʻ 2018 ರ ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಿದ್ದ ರಾಜೀವ್ ಚಂದ್ರಶೇಖರ್, ಸುಳ್ಳು ಅಫಿಡವಿಟ್‌ ಸಲ್ಲಿಸಿದ್ದಾರೆ ಎಂದು ಚುನಾವಣಾ ಆಯೋಗ, ದೆಹಲಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಅನೇಕ ಅರ್ಜಿ ಸಲ್ಲಿಸಿದ್ದೇನೆ. ಆದರೆ, ಅರ್ಜಿ ಆಯೋಗದಲ್ಲೇ ಉಳಿದುಕೊಂಡಿದೆ,ʼ ಎಂದು ದೂರಿನಲ್ಲಿ ಬರೆದಿದ್ದಾರೆ. ʻಅವರ ಘೋಷಿತ ಆಸ್ತಿ ಮತ್ತು ನಿಜವಾದ ಆಸ್ತಿ ನಡುವೆ ಹಲವಾರು ವ್ಯತ್ಯಾಸಗಳಿವೆ. ನನ್ನ ಬಳಿ ಪುರಾವೆಗಳಿವೆʼ ಎಂದು ಹೇಳಿದರು.

ಕಾಂಗ್ರೆಸ್ ಏನು ಹೇಳುತ್ತದೆ?: ಥಾಮಸ್ ಅವರ ದೂರಿನ ಪ್ರತಿಯನ್ನು ಶುಕ್ರವಾರ (ಏಪ್ರಿಲ್ 5) ಮಧ್ಯಾಹ್ನ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯು ಎಕ್ಸ್ ನಲ್ಲಿ ಹಂಚಿಕೊಂಡಿದೆ. ʻಸುಳ್ಳು ಅಫಿಡವಿಟ್‌ಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ, ಇಸಿ ವೀಕ್ಷಕರಿಗೆ ದೂರು ಸಲ್ಲಿಸಲಾಗಿದೆ. ರಾಜೀವ್ ಕೇವಲ 36 ಕೋಟಿ ರೂ. ಆಸ್ತಿ ಘೋಷಿಸಿದ್ದಾರೆ. ಅವರು ಕೋಟ್ಯಧಿಪತಿ ಎಂಬುದು ಇಡೀ ಜಗತ್ತಿಗೆ ಗೊತ್ತು.ಅವರ ಅಫಿಡವಿಟ್‌ನಲ್ಲಿ ಸ್ಪಷ್ಟ ತಪ್ಪುಗಳಿವೆʼ ಎಂದು ಕಾಂಗ್ರೆಸ್ ದೂರಿದೆ.

ʻಬೆಂಗಳೂರಿನ ಕೋರಮಂಗಲ 3ನೇ ಬ್ಲಾಕ್‌ನ #408 ಮತ್ತು #445 ರ ನೂರಾರು ಕೋಟಿ ರೂ. ಮೌಲ್ಯದ ಎರಡು ಆಸ್ತಿಯನ್ನು ಘೋಷಿಸಿಲ್ಲ. 49,000 ಚದರ ಅಡಿ ವಿಸ್ತೀರ್ಣದ ಮಹಲು ರಾಜೀವ್ ಚಂದ್ರಶೇಖರ್ ಅವರ ಹೆಸರಿನಲ್ಲಿದೆ ಎಂಬುದನ್ನು ತೋರಿಸುವ 2017-18ರ ಆಸ್ತಿ ತೆರಿಗೆ ರಶೀದಿಗಳಿವೆ,ʼ ಎಂದು ಹೇಳಿದೆ.

ಏ.26 ರಂದು ನಡೆಯಲಿರುವ ಚುನಾವಣೆಯಲ್ಲಿ ಸಂಸದ ಶಶಿ ತರೂರ್ ಮತ್ತು ಸಿಪಿಐ ಹಿರಿಯ ಮುಖಂಡ ಪನ್ನಿಯನ್ ರವೀಂದ್ರನ್ ವಿರುದ್ಧ ಚಂದ್ರಶೇಖರ್ ಸ್ಪರ್ಧಿಸುತ್ತಿದ್ದಾರೆ.

Read More
Next Story