
ಪ್ರಾತಿನಿಧಿಕ ಚಿತ್ರ
ಕರ್ನಾಟಕವೂ ಸೇರಿ ಏಳು ಹೈಕೋರ್ಟ್ ನ್ಯಾಯಮೂರ್ತಿಗಳ ವರ್ಗಾವಣೆ, ಕೊಲಿಜಿಯಂ ಆದೇಶ
ನ್ಯಾಯಾಲಯದ ಆಡಳಿತ ಬಲಪಡಿಸಿ ವೈವಿಧ್ಯತೆಯನ್ನು ತರುವ ದೃಷ್ಟಿಯಿಂದ ಕೊಲಿಜಿಯಂ, ಕರ್ನಾಟಕ ಹೈಕೋರ್ಟ್ನ ನ್ಯಾಯಾಧೀಶರು ಸೇರಿದಂತೆ ಒಟ್ಟು ಏಳು ನ್ಯಾಯಮೂರ್ತಿಗಳನ್ನು ವರ್ಗಾವಣೆಗೊಳಿಸಿದೆ.
ಕರ್ನಾಟಕದ ನಾಲ್ಕು ನ್ಯಾಯಮೂರ್ತಿಗಳು ಸೇರಿದಂತೆ ನಾನಾ ಹೈಕೋರ್ಟ್ಗಳ ಏಳು ನ್ಯಾಯಾಧೀಶರನ್ನು ಬೇರೆ ಬೇರೆ ಹೈಕೋರ್ಟ್ಗಳಿಗೆ ವರ್ಗಾವಣೆ ಮಾಡಿ ಸುಪ್ರಿಂ ಕೋರ್ಟ್ ಕೊಲಿಜಿಯಂ ಸೋಮವಾರ (ಏಪ್ರಿಲ್ 21) ಆದೇಶ ಹೊರಡಿಸಿದೆ.
ಕರ್ನಾಟಕ ಹೈಕೋರ್ಟ್ಬ ನ್ಯಾ. ಹೇಮಂತ್ ಚಂದನಗೌಡರ್ ಮದ್ರಾಸ್ ಹೈಕೋರ್ಟ್ಗೆ, ನ್ಯಾ. ಕೃಷ್ಣ ನಟರಾಜನ್ ಕೇರಳ ಹೈಕೋರ್ಟ್ಗೆ, ನ್ಯಾ. ನೆರನಹಳ್ಳಿ ಶ್ರೀನಿವಾಸನ್ ಸಂಜಯ್ ಗೌಡ ಗುಜರಾತ್ ಹೈಕೋರ್ಟ್ಗೆ, ನ್ಯಾ. ದೀಕ್ಷಿತ್ ಕೃಷ್ಣ ಶ್ರೀಪಾದ್ ಒಡಿಶಾ ಹೈಕೋರ್ಟ್ಗೆ ವರ್ಗಾವಣೆಗೊಂಡಿದ್ದಾರೆ.
ಇನ್ನುಳಿದಂತೆ ತೆಲಂಗಾಣ ಹೈಕೋರ್ಟ್ನ ನ್ಯಾ. ಕಾಸೋಜು ಸುರಂದರ್ ಅವರನ್ನು ಮದ್ರಾಸ್ ಹೈಕೋರ್ಟ್ಗೆ ನ್ಯಾ. ಪೆರುಗು ಶ್ರೀ ಸುಧಾ ಹಾಗೂ ಆಂಧ್ರಪ್ರದೇಶದ ನ್ಯಾ. ಡಾ. ಕುಂಬಜದಲ ಮನ್ಮದ ರಾವ್ ಅವರನ್ನು ಕರ್ನಾಟಕ ಹೈಕೋರ್ಟ್ಗೆ ವರ್ಗಾವಣೆ ಮಾಡಿ ಕೊಲಿಜಿಯಂ ಆದೇಶಿಸಿದೆ.
ಏನಿದು ಕೊಲಿಜಿಯಂ:
ಕೊಲಿಜಿಯಂ ಎಂಬುದು ಸುಪ್ರಿಂ ಕೋರ್ಟ್ ನೇಮಿಸಿದಂತಹ ಹಿರಿಯ ನ್ಯಾಯಾಧೀಶರ ತಂಡವಾಗಿದ್ದು ಮುಖ್ಯ ನ್ಯಾಯಾಧೀಶರು ಸೇರಿದಂತೆ ಐವರು ನ್ಯಾಯಾಧೀಶರನ್ನು ಒಳಗೊಂಡಿದೆ. ಇದು ನ್ಯಾಯಾಧೀಶರ ನೇಮಕ, ವರ್ಗಾವಣೆ ಹಾಗೂ ಪದೋನ್ನತಿ ನೀಡುವ ಕೆಲಸ ನಿರ್ವಹಿಸುತ್ತದೆ.
ಪ್ರಸ್ತುತ ಕೊಲಿಜಿಯಂ ಸಮಿತಿಯಲ್ಲಿ ಸುಪ್ರಿ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ, ಹಿರಿಯ ನ್ಯಾಯಮೂರ್ತಿಗಳಾದ ನ್ಯಾ. ಬಿ. ಆರ್. ಗವಾಯಿ, ನ್ಯಾ. ಸೂರ್ಯಕಾಂತ್, ನ್ಯಾ. ಎ. ಎಸ್. ಓಕಾ, ಹಾಗೂ ನ್ಯಾ. ವಿಕ್ರಮ್ ನಾಥ್ ಸಮಿತಿಯಲ್ಲಿರುವ ಇತರ ನ್ಯಾಯಾಧೀಶರಾಗಿದ್ದಾರೆ.