ದೆಹಲಿ ವಾಯು ಮಾಲಿನ್ಯ | ವಕೀಲರಿಗೆ ವರ್ಚುಯಲ್‌ ಹಾಜರಿ ಆಯ್ಕೆ ನೀಡಿದ ಸಿಜೆಐ
x
CJI says judges asked to allow virtual hearings wherever possible

ದೆಹಲಿ ವಾಯು ಮಾಲಿನ್ಯ | ವಕೀಲರಿಗೆ ವರ್ಚುಯಲ್‌ ಹಾಜರಿ ಆಯ್ಕೆ ನೀಡಿದ ಸಿಜೆಐ

ಸಿಜೆಐ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರನ್ನೊಳಗೊಂಡ ನ್ಯಾಯಪೀಠದ ಮುಂದೆ, ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಅಧ್ಯಕ್ಷ ಕಪಿಲ್ ಸಿಬಲ್ ಸೇರಿದಂತೆ ವಕೀಲರು ದೆಹಲಿ ಮತ್ತು ಉಪನಗರದಲ್ಲಿ ಹದಗೆಡುತ್ತಿರುವ ವಾಯು ಮಾಲಿನ್ಯದ ವಿಚಾರವನ್ನು ಗಮನಕ್ಕೆ ತಂದರು


ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತೀವ್ರ ವಾಯು ಮಾಲಿನ್ಯದ ಉಂಟಾಗಿರುವುದನ್ನು ಗಮನದಲ್ಲಿಟ್ಟುಕೊಂಡು ಸಾಧ್ಯವಾದಷ್ಟು ವರ್ಚುವಲ್ ವಿಚಾರಣೆಗಳಿಗೆ ಅವಕಾಶ ನೀಡುವಂತೆ ಎಲ್ಲ ನ್ಯಾಯಾಧೀಶರಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮಂಗಳವಾರ (ನವೆಂಬರ್‌19) ಹೇಳಿದ್ದಾರೆ.

ಸಿಜೆಐ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರನ್ನೊಳಗೊಂಡ ನ್ಯಾಯಪೀಠದ ಮುಂದೆ, ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಅಧ್ಯಕ್ಷ ಕಪಿಲ್ ಸಿಬಲ್ ಸೇರಿದಂತೆ ವಕೀಲರು. ದೆಹಲಿ ಮತ್ತು ಉಪನಗರದಲ್ಲಿ ಹದಗೆಡುತ್ತಿರುವ ವಾಯು ಮಾಲಿನ್ಯದ ವಿಚಾರವನ್ನು ಗಮನಕ್ಕೆ ತಂದರು. ಅದನ್ನು ಎದುರಿಸಲು ತಕ್ಷಣದ ಕ್ರಮಗಳನ್ನು ಕೋರಿದರು.

ಈ ಸಿಜೆಐ "ಸಾಧ್ಯವಾದಷ್ಟು ವರ್ಚುವಲ್ ವಿಚಾರಣೆಗಳಿಗೆ ಅವಕಾಶ ನೀಡುವಂತೆ ನಾವು ಎಲ್ಲಾ ನ್ಯಾಯಾಧೀಶರಿಗೆ ಹೇಳಿದ್ದೇವೆ" ಎಂದು ಭರವಸೆ ಕೊಟ್ಟರು. ಆದರೆ ಸರ್ವೋಚ್ಛ ನ್ಯಾಯಾಲಯವು ಸಂಪೂರ್ಣವಾಗಿ ಆನ್‌ಲೈನ್‌ ಮಾದರಿಯಲ್ಲಿ ನಡೆಯಲಿ ಎಂಬ ಮನವಿಗೆ ಸಿಜೆಐ ಅವಕಾಶ ನೀಡಲಿಲ್ಲ, ವರ್ಚುಯಲ್‌ ಮೂಲಕ ಹಾಜರಾಗುವ ಆಯ್ಕೆಯನ್ನು ವಕೀಲರು ಹೊಂದಿದ್ದಾರೆ ಎಂದು ಪುನರುಚ್ಚರಿಸಿದರು.

ಮಾಲಿನ್ಯವು ನಿಯಂತ್ರಣ ಮಟ್ಟ ಮೀರುತ್ತಿರುವುದರಿಂದ ರಾಷ್ಟ್ರ ರಾಜಧಾನಿಯ ಇತರ ನ್ಯಾಯಾಲಯಗಳು ಮತ್ತು ನ್ಯಾಯಮಂಡಳಿಗಳಿಗೆ ಸಂದೇಶ ಕಳುಹಿಸುವ ಅಗತ್ಯವಿದೆ ಎಂದು ಸಿಬಲ್ ಹೇಳಿದರು. ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ಗೋಪಾಲ್ ಶಂಕರನಾರಾಯಣನ್ ಸೇರಿದಂತೆ ವಿವಿಧ ವಕೀಲರು ಅದಕ್ಕೆ ಬೆಂಬಲ ವ್ಯಕ್ತಪಡಿಸಿದರು.

10,000ಕ್ಕಿಂತಲೂ ಅಧಿಕ ವಕೀಲರಿಂದ ಸ್ವಂತ ವಾಹನ ಬಳಕೆ

ಪ್ರತಿದಿನ ಸುಮಾರು 10,000 ವಕೀಲರು ತಮ್ಮ ಸ್ವಂತ ವಾಹನಗಳನ್ನು ಬಳಸಿಕೊಂಡು ಸುಪ್ರೀಂ ಕೋರ್ಟ್‌ಗೆ ಬರುತ್ತಾರೆ ಎಂದು ಶಂಕರನಾರಾಯಣನ್ ಗಮನ ಸೆಳೆದರು. ವಕೀಲರ ಗುಮಾಸ್ತರು ಸಹ ಆಗಾಗ್ಗೆ ವೈಯಕ್ತಿಕ ವಾಹನಗಳನ್ನು ಬಳಸುತ್ತಾರೆ ಎಂದು ವಿವರಿಸಿದರು.

"ವಿಷಯವನ್ನು ನಾವು ಸಂಬಂಧಪಟ್ಟ ವಕೀಲರಿಗೆ ಬಿಡುತ್ತೇವೆ. ನಾವು ಅವರಿಗೆ ಆ ಸೌಲಭ್ಯ ನೀಡಿದ್ದೇವೆ. ನೀವು ವರ್ಚುವಲ್ ಆಗಿ ಹಾಜರಾಗಲು ಬಯಸಿದಾಗ ನೀವು ಹಾಗೆ ಮಾಡಬಹುದು" ಎಂದು ಸಿಜೆಐ ಈ ವೇಳೆ ಹೇಳಿದರು.

ದೆಹಲಿ-ಎನ್‌ಸಿಆರ್‌ನಲ್ಲಿ ಗ್ರ್ಯಾಪ್ -4 ನಿರ್ಬಂಧಗಳನ್ನು ಜಾರಿಗೆ ತರಲಾಗಿದೆ. ನಗರದ ನ್ಯಾಯಾಲಯಗಳಿಗೆ ಅಂತಹ ಯಾವುದೇ ನಿರ್ದಿಷ್ಟ ಸೂಚನೆಗಳಿಲ್ಲ ಎಂದು ಶಂಕರನಾರಾಯಣನ್ ಹೇಳಿದರು.

ಸೋಮವಾರ, ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) 'ತೀವ್ರ' ವರ್ಗಕ್ಕೆ ಪ್ರವೇಶಿಸಿದೆ ಎಂಬ ಅಂಶವನ್ನು ಗಮನಿಸಿದ ಸುಪ್ರೀಂ ಕೋರ್ಟ್, ಮಾಲಿನ್ಯ ವಿರೋಧಿ ಜಿಆಎಆರ್‌ಪಿ 4 ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ತಕ್ಷಣವೇ ತಂಡಗಳನ್ನು ರಚಿಸುವಂತೆ ಎಲ್ಲಾ ದೆಹಲಿ-ಎನ್ಸಿಆರ್ ರಾಜ್ಯಗಳಿಗೆ ನಿರ್ದೇಶನ ನೀಡಿತು.delhi pollution,delhi air pollution,delhi pollution news,air pollution in delhi,delhi ncr pollution,delhi air pollution levels,air pollution delhi,delhi air pollution latest news,new delhi air pollution,pollution in delhi,delhi pollution today,pollution level in delhi,delhi pollution solution,pollution delhi,delhi air pollution news,air pollution in delhi solution,delhi ncr air pollution,delhi air quality,delhi pollution news today

ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ಸೋಮವಾರ ಬೆಳಿಗ್ಗೆ 8 ಗಂಟೆಗೆ 484 ಕ್ಕೆ ದಾಖಲಾಗಿದ್ದು, ಇದು ಈ ಋತುವಿನ ಅತ್ಯಂತ ಕಳಪೆ. ಕೆಲವು ಪ್ರದೇಶಗಳಲ್ಲಿ ಎಕ್ಯೂಐ ಕೂಡ 500 ರ ಗಡಿಯನ್ನು ದಾಟಿದೆ.

ರಾಷ್ಟ್ರ ರಾಜಧಾನಿಯಲ್ಲಿ ಅಪಾಯಕಾರಿ ಮಾಲಿನ್ಯ ಮಟ್ಟದ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸುವಂತೆ ತನ್ನ ಸಿಬ್ಬಂದಿಗೆ ಸಲಹೆ ನೀಡುವ ಸುತ್ತೋಲೆಯನ್ನು ಸುಪ್ರೀಂ ಕೋರ್ಟ್ ಸೋಮವಾರ ಹೊರಡಿಸಿದೆ.

" ಪ್ರತಿಯೊಬ್ಬರೂ ಮಾಸ್ಕ್ ಧರಿಸಬೇಕು ಹಾಗೂ ಆರೋಗ್ಯ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಲಾಗಿದೆ " ಎಂದು ಸುಪ್ರೀಂ ಕೋರ್ಟ್ ಸಹಾಯಕ ರಿಜಿಸ್ಟ್ರಾರ್ ಹೊರಡಿಸಿದ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

Read More
Next Story