Actor Chiranjeevi: ರಾಮ್‌ಚರಣ್‌ಗೆ ಮತ್ತೆ ಹೆಣ್ಣುಮಗುವಾಗುತ್ತಾ ಎಂಬ ಭಯ, ನನಗೆ ಮೊಮ್ಮಗ ಬೇಕು: ವಿವಾದ ಸೃಷ್ಟಿಸಿದ ಚಿರಂಜೀವಿ
x
ರಾಮ್​ ಚರಣ್​.

Actor Chiranjeevi: ರಾಮ್‌ಚರಣ್‌ಗೆ ಮತ್ತೆ ಹೆಣ್ಣುಮಗುವಾಗುತ್ತಾ ಎಂಬ ಭಯ, ನನಗೆ ಮೊಮ್ಮಗ ಬೇಕು: ವಿವಾದ ಸೃಷ್ಟಿಸಿದ ಚಿರಂಜೀವಿ

Actor Chiranjeevi : ಬ್ರಹ್ಮ ಆನಂದಮ್ ಸಿನಿಮಾದ ಪ್ರೀರಿಲೀಸ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವೇಳೆ ಚಿರಂಜೀವಿ ಅವರು ಈ ಹೇಳಿಕೆ ನೀಡಿದ್ದಾರೆ.


ಹೈದರಾಬಾದ್: ನನ್ನ ಮೊಮ್ಮಕ್ಕಳೆಲ್ಲ ಹೆಣ್ಣು ಮಕ್ಕಳು. "ನನ್ನ ವಂಶೋದ್ಧಾರ ಮಾಡಲು ಮೊಮ್ಮಗ ಬೇಕು". ಎಂದು ಮೆಗಾ ಸ್ಟಾರ್​ ಚಿರಂಜೀವಿ (Actor Chiranjeevi) ನೀಡಿದ ಹೇಳಿಕೆಯೊಂದು ವಿವಾದಕ್ಕೆ ಕಾರಣವಾಗಿದೆ.

ಮೊಮ್ಮಕ್ಕಳೆಲ್ಲ ಹೆಣ್ಣುಮಕ್ಕಳಾಗಿರುವ ಕಾರಣ ನನ್ನ ಮನೆ ಲೇಡೀಸ್ ಹಾಸ್ಟೆಲ್‌ನಂತೆ ಭಾಸವಾಗುತ್ತಿದೆ ಎಂಬ ಹೇಳಿಕೆಯೂ ಭಾರೀ ವಿವಾದಕ್ಕೆ ಕಾರಣವಾಗಿದೆ. ಇದೊಂದು "ಲಿಂಗಾಧರಿತ" ಹೇಳಿಕೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

''ಬ್ರಹ್ಮ ಆನಂದಮ್'' ಸಿನಿಮಾದ ಪ್ರೀರಿಲೀಸ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅವರು ಈ ರೀತಿಯ ಅನಪೇಕ್ಷಿತ ಹೇಳಿಕೆ ನೀಡಿದ್ದಾರೆ. "ನನಗೆ ಮನೆಯಲ್ಲಿದ್ದಾಗ, ನನ್ನ ಸುತ್ತಲೂ ಮೊಮ್ಮಕ್ಕಳು ತುಂಬಿರುವ ಕಾರಣ ನನಗೆ ಲೇಡೀಸ್ ಹಾಸ್ಟೆಲ್‌ನಲ್ಲಿದ್ದಂತೆ ಭಾಸವಾಗುತ್ತದೆ. ನಾನು ಆ ಹಾಸ್ಟೆಲ್‌ನ ವಾರ್ಡನ್‌ನಂತೆ ಅನಿಸುತ್ತದೆ. ನಾನು ಚರಣ್(ರಾಮ್ ಚರಣ್)ಗೆ, ಕನಿಷ್ಠ ಈ ಬಾರಿಯಾದರೂ ಗಂಡು ಮಗುವನ್ನು ಕೊಡು ಎಂದು ಕೇಳಿಕೊಳ್ಳುತ್ತಿದ್ದೇನೆ. ನನ್ನ ವಂಶ ಉದ್ಧಾರ ಮಾಡಲು ಗಂಡು ಮಗು ಬೇಕು. ಮತ್ತೆ ರಾಮ್‌ಚರಣ್ ಎಲ್ಲಿ ಹೆಣ್ಣು ಮಗುವನ್ನೇ ಕೊಡುತ್ತಾನೋ ಎಂಬ ಭಯ ಶುರುವಾಗಿದೆ" ಎಂದಿದ್ದಾರೆ.

ಪುರುಷಾಹಂಕಾರದ ಮಾತು ಎಂದ ನೆಟ್ಟಿಗರು

ಚಿರಂಜೀವಿ ಅವರ ಈ ಹೇಳಿಕೆಯ ಟ್ವೀಟರ್‌ನಲ್ಲಿ ಹಂಚಿಕೊಂಡು ಲೇವಡಿ ಮಾಡಿದ್ದಾರೆ. "ಚಿರಂಜೀವಿಗೆ ತಮ್ಮ ಮಗ ರಾಮ್ ಚರಣ್‌ಗೆ ಮತ್ತೆ ಹೆಣ್ಣುಮಗು ಆಗುತ್ತೋ ಎಂಬ ಭಯವಂತೆ . 2025ರಲ್ಲಿದ್ದರೂ ಗಂಡು ಮಕ್ಕಳೇ ಬೇಕೆಂಬ, ಪುರುಷ ಅಹಂಕಾರ ಅವರದ್ದು. ಅವರ ಹೇಳಿಕೆ ನಿರಾಸೆ ಮೂಡಿಸಿತು. ಅಂದ ಹಾಗೆ, ನನಗೂ ಇರುವುದು ಒಂದು ಹೆಣ್ಣುಮಗು. ಮುಂದಿನ ಬಾರಿಯಾದರೂ ಗಂಡಾಗಲಿ ಎಂದು ನೂರಾರು ಮಂದಿ ಒತ್ತಡ ಹಾಕುವುದು ನೋಡಿ ಅಸಹ್ಯ ಎನಿಸುತ್ತದೆ" ಎಂದು ಬರೆದುಕೊಂಡಿದ್ದಾರೆ.

ಇನ್ನೊಬ್ಬರು ಪ್ರತಿಕ್ರಿಯಿಸಿ, ಚಿರಂಜೀವಿ, ಅವರ ಪ್ರಭಾವ ನೋಡಿದರೆ ಅವರು ಸಮಾನತೆಯನ್ನು ಪ್ರತಿಪಾದಿಸಬೇಕಾಗುತ್ತದೆ. ಈ ಪೂರ್ವಗ್ರಹಪೀಡಿತ ಮನಸ್ಥಿತಿಯನ್ನು ಮುರಿಯಬಹುದು. ಲಿಂಗ ಭೇದ ಹೊರತುಪಡಿಸಿ ಪ್ರತಿ ಮಗುವೂ ಒಂದು ಅನುಗ್ರಹ ಎಂಬುದನ್ನು ಅವರು ಜನರಿಗೆ ಮನವರಿಕೆ ಮಾಡಬೇಕಾಗಿತ್ತು ಎಂದು ಅವರು ಹೇಳಿದ್ದಾರೆ.

ಚಿರಂಜೀವಿ ಅವರಿಗೆ ಶ್ರೀಜಾ ಕೋನಿಡೆಲಾ ಮತ್ತು ಸುಷ್ಮಿತಾ ಕೋನಿಡೆಲಾ ಎಂಬ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಶ್ರೀಜಾಗೆ ನವಿಷ್ಕಾ, ನಿವ್ರತಿ ಎಂಬ ಇಬ್ಬರು ಹೆಣ್ಣುಮಕ್ಕಳಿದ್ದರೆ, ಸುಷ್ಮಿತಾಗೆ ಸಮಾರಾ ಮತ್ತು ಸಂಹಿತ ಎಂಬ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಚಿರಂಜೀವಿ ಪುತ್ರ ರಾಮ್‌ಚರಣ್ ಮತ್ತು ಉಪಾಸನಾ ದಂಪತಿ ಕೂಡ 2023ರಲ್ಲಿ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ಆಗ ಚಿರಂಜೀವಿ ಅವರು, "ಪುಟಾಣಿ ಮೆಗಾ ರಾಜಕುಮಾರಿಗೆ ಸ್ವಾಗತ! ನಿನ್ನ ಆಗಮನದ ಮೂಲಕ ನಮ್ಮ ಮೆಗಾ ಕುಟುಂಬದಲ್ಲಿ ಸಂತೋಷದ ನಗೆ ಚಿಮ್ಮಿದೆ" ಎಂದು ಬರೆದುಕೊಂಡಿದ್ದರು.

Read More
Next Story