
ಜಾರ್ಖಂಡ್: ಚಂಪೈ ಸೊರೆನ್ ಬಿಜೆಪಿ ಸೇರ್ಪಡೆ
ರಾಂಚಿ: ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಚಂಪೈ ಸೊರೆನ್ ಅವರು ಜೆಎಂಎಂ ತೊರೆದ ಎರಡು ದಿನಗಳ ನಂತರ ಶುಕ್ರವಾರ (ಆಗಸ್ಟ್ 30) ಬಿಜೆಪಿಗೆ ಸೇರ್ಪಡೆಗೊಂಡರು.
ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಸಮ್ಮುಖದಲ್ಲಿ ಸೊರೆನ್ ತಮ್ಮ ಬೆಂಬಲಿಗರೊಂದಿಗೆ ಕೇಸರಿ ಪಾಳಯವನ್ನು ಸೇರಿದರು.
ಜೆಎಂಎಂ ಮುಖ್ಯಸ್ಥ ಶಿಬು ಸೊರೆನ್ ಅವರ ಆಪ್ತರಾಗಿದ್ದ ಚಂಪೈ( 67) ಅವರ ಸೇರ್ಪಡೆಯಿಂದ ಪಕ್ಷಕ್ಕೆ ಪರಿಶಿಷ್ಟ ಪಂಗಡಗಳ ಬೆಂಬಲ ಹೆಚ್ಚಲಿದೆ ಎಂದು ಬಿಜೆಪಿ ಹೇಳಿದೆ.
ರಾಜ್ಯ ಸರ್ಕಾರದ ಕಾರ್ಯವೈಖರಿ ಮತ್ತು ಅದರ ನೀತಿಗಳಿಂದಾಗಿ ಪಕ್ಷವನ್ನು ಬಿಡಬೇಕಾಯಿತು ಎಂದು ಬುಧವಾರ ಹೇಳಿದ್ದರು. 1990 ರ ದಶಕದಲ್ಲಿ ಪ್ರತ್ಯೇಕ ರಾಜ್ಯ ಹೋರಾಟಕ್ಕೆ ನೀಡಿದ ಕೊಡುಗೆಯಿಂದಾಗಿ ಚಂಪೈ ಅವರಿಗೆ 'ಜಾರ್ಖಂಡದ ಹುಲಿ' ಎಂಬ ಅಡ್ಡಹೆಸರು ಬಂದಿದೆ. 81 ಸದಸ್ಯ ಬಲದ ವಿಧಾನಸಭೆಗೆ ಈ ವರ್ಷದ ಕೊನೆಯಲ್ಲಿ ಚುನಾವಣೆ ನಡೆಯಲಿದೆ.
Next Story