ಬಾಡಿಗೆ ತಾಯ್ತನ: 6 ತಿಂಗಳ ಹೆರಿಗೆ ರಜೆಗೆ  ಕೇಂದ್ರ ನಿರ್ಧಾರ
x

ಬಾಡಿಗೆ ತಾಯ್ತನ: 6 ತಿಂಗಳ ಹೆರಿಗೆ ರಜೆಗೆ ಕೇಂದ್ರ ನಿರ್ಧಾರ

ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆದ ಮಹಿಳಾ ಸರ್ಕಾರಿ ನೌಕರರಿಗೆ ಹೆರಿಗೆ ರಜೆ ನೀಡುವ ನಿಯಮ ಇಲ್ಲಿಯವರೆಗೆ ಇರಲಿಲ್ಲ


50 ವರ್ಷಗಳ ಹಿಂದಿನ ನಿಯಮಕ್ಕೆ ಕೇಂದ್ರ ಸರ್ಕಾರ ತಿದ್ದುಪಡಿ ತಂದಿದ್ದು, ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆಯುವ ಮಹಿಳಾ ಸರ್ಕಾರಿ ನೌಕರರು 180 ದಿನಗಳ ಹೆರಿಗೆ ರಜೆ ತೆಗೆದುಕೊಳ್ಳಬಹುದು ಎಂದು ಹೇಳಿದೆ.

ಕೇಂದ್ರ ನಾಗರಿಕ ಸೇವೆಗಳು (ರಜೆ) ನಿಯಮಗಳು 1972ಕ್ಕೆ ಮಾಡಿದ ಬದಲಾವಣೆಗಳ ಪ್ರಕಾರ, ನಿಯೋಜಿತ ಮಹಿಳೆ(ಬಾಡಿಗೆ ತಾಯ್ತನದ ಮೂಲಕ ಜನಿಸಿದ ಮಗುವಿನ ತಾಯಿ)ಗೆ 180 ದಿನಗಳ ತಾಯ್ತನದ ರಜೆಯಲ್ಲದೆ, ಮಗುವಿನ ತಂದೆಗೆ 15 ದಿನಗಳ ಪಿತೃತ್ವ ರಜೆಗೆ ಅನುಮತಿ ನೀಡಿದೆ.

ʻಬಾಡಿಗೆ ತಾಯ್ತನದ ಸಂದರ್ಭದಲ್ಲಿ ಬಾಡಿಗೆ ತಾಯಿ ಮಾತ್ರವಲ್ಲದೆ ಎರಡಕ್ಕಿಂತ ಕಡಿಮೆ ಮಕ್ಕಳನ್ನು ಹೊಂದಿರುವ ನಿಯೋಜಿತ ತಾಯಿಗೆ, ಒಂದು ವೇಳೆ ಇಬ್ಬರಲ್ಲಿ ಒಬ್ಬರು ಅಥವಾ ಇಬ್ಬರೂ ಸರ್ಕಾರಿ ನೌಕರರಾಗಿದ್ದರೆ, 180 ದಿನಗಳ ಹೆರಿಗೆ ರಜೆ ನೀಡಬಹುದು,ʼ ಎಂದು ಸಿಬ್ಬಂದಿ ಸಚಿವಾಲಯದ ತಿದ್ದುಪಡಿ ನಿಯಮಗಳು ಹೇಳುತ್ತವೆ.

ಬಾಡಿಗೆ ತಾಯ್ತನದ ಮೂಲಕ ಮಗು ಜನಿಸಿದರೆ, ಮಹಿಳಾ ಸರ್ಕಾರಿ ನೌಕರರಿಗೆ ಹೆರಿಗೆ ರಜೆ ನೀಡಲು ಇದುವರೆಗೆ ಯಾವುದೇ ನಿಯಮ ಇರಲಿಲ್ಲ.

ʻಬಾಡಿಗೆ ತಾಯ್ತನದ ಮೂಲಕ ಜನಿಸಿದ ಮಗುವಿನ ತಂದೆಗೆ ಮಗುವಿನ ಹೆರಿಗೆಯ ದಿನಾಂಕದಿಂದ 6 ತಿಂಗಳೊಳಗೆ 15 ದಿನಗಳ ಪಿತೃತ್ವ ರಜೆ ನೀಡಬಹುದುʼ ಎಂದು ಜೂನ್‌ 18ರ ಕೇಂದ್ರ ನಾಗರಿಕ ಸೇವೆಗಳ (ರಜೆ) (ತಿದ್ದುಪಡಿ) ನಿಯಮಗಳು 2024 ಹೇಳಿದೆ.

ಅಸ್ತಿತ್ವದಲ್ಲಿರುವ ನಿಯಮಗಳ ಪ್ರಕಾರ, ʻಮಹಿಳಾ ಸರ್ಕಾರಿ ಸಿಬ್ಬಂದಿ ಮತ್ತು ಒಂಟಿ ಪುರುಷ ಸರ್ಕಾರಿ ನೌಕರರಿಗೆ ಶಿಶುಪಾಲನೆಗೆ ಅವರ ಸಂಪೂರ್ಣ ಸೇವಾವಧಿಯಲ್ಲಿ ಗರಿಷ್ಠ 730 ದಿನ ರಜೆಯ ಅವಕಾಶ ನೀಡುತ್ತದೆʼ.

ಬಾಡಿಗೆ ತಾಯಿ ಎಂದರೆ ಮಗುವನ್ನು ಹೆರುವ ಮಹಿಳೆ ಮತ್ತು ನಿಯೋಜಿತ ತಂದೆ ಎಂದರೆ ಇಂಥ ಮಗುವಿನ ಸಾಕುವ ಮಹಿಳೆಯ ಪತಿ ಎಂದು ಸಿಬ್ಬಂದಿ ಸಚಿವಾಲಯ ಸ್ಪಷ್ಟಪಡಿಸಿದೆ.

Read More
Next Story