
ರಕ್ಷಣಾ ಇಲಾಖೆಯ ಇಎಂಇ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರೂಪ್ 'ಸಿ' ಮತ್ತು ನಾನ್-ಗೆಜೆಟೆಡ್ ಗ್ರೂಪ್ 'ಬಿ' ಶ್ರೇಣಿಯ ಉದ್ಯೋಗಿಗಳು ಈ ಬೋನಸ್ ಪಡೆಯಲು ಅರ್ಹರಾಗಿರುತ್ತಾರೆ.
ಸಂಕ್ರಾಂತಿ ಬಂಪರ್ ಕೊಡುಗೆ; ಕೇಂದ್ರ ಸರ್ಕಾರಿ ನೌಕರರಿಗೆ 22 ದಿನಗಳ ಬೋನಸ್
ರಕ್ಷಣಾ ಇಲಾಖೆಯ ಇಎಂಇ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರೂಪ್ 'ಸಿ' ಮತ್ತು ನಾನ್-ಗೆಜೆಟೆಡ್ ಗ್ರೂಪ್ 'ಬಿ' ಶ್ರೇಣಿಯ ಉದ್ಯೋಗಿಗಳು ಈ ಬೋನಸ್ ಪಡೆಯಲು ಅರ್ಹರಾಗಿರುತ್ತಾರೆ.
ಮಕರ ಸಂಕ್ರಾಂತಿ ಹಬ್ಬದ ಸಂಭ್ರಮದ ನಡುವೆಯೇ ಕೇಂದ್ರ ಸರ್ಕಾರ ತನ್ನ ನೌಕರರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ರಕ್ಷಣಾ ಇಲಾಖೆಯ ಅಡಿಯಲ್ಲಿ ಬರುವ ಇಎಂಇ (EME) ಕಾರ್ಪ್ಸ್‌ನ ಅರ್ಹ ನಾಗರಿಕ ಉದ್ಯೋಗಿಗಳಿಗೆ 2024-25ನೇ ಸಾಲಿನ ಹಣಕಾಸು ವರ್ಷಕ್ಕೆ ಅನ್ವಯವಾಗುವಂತೆ 22 ದಿನಗಳ ವೇತನಕ್ಕೆ ಸಮನಾದ 'ಕಾರ್ಯಕ್ಷಮತೆ ಆಧಾರಿತ ಬೋನಸ್' (PLB) ಅನ್ನು ಘೋಷಿಸಲಾಗಿದೆ.
ರಕ್ಷಣಾ ಇಲಾಖೆಯ ಇಎಂಇ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರೂಪ್ 'ಸಿ' ಮತ್ತು ನಾನ್-ಗೆಜೆಟೆಡ್ ಗ್ರೂಪ್ 'ಬಿ' ಶ್ರೇಣಿಯ ಉದ್ಯೋಗಿಗಳು ಈ ಬೋನಸ್ ಪಡೆಯಲು ಅರ್ಹರಾಗಿರುತ್ತಾರೆ. ಇಲಾಖೆಯು ನೌಕರರ ಉತ್ಪಾದಕತೆ ಮತ್ತು ಕಾರ್ಯಕ್ಷಮತೆಯನ್ನು ಪರಿಗಣಿಸಿ ಈ ಕೊಡುಗೆಯನ್ನು ನೀಡಿದೆ.
ಬೋನಸ್ ಲೆಕ್ಕಾಚಾರ ಹೇಗೆ?
ಸರ್ಕಾರದ ಆದೇಶದನ್ವಯ, ಬೋನಸ್ ಲೆಕ್ಕಾಚಾರಕ್ಕೆ ಮಾಸಿಕ ವೇತನದ ಗರಿಷ್ಠ ಮಿತಿಯನ್ನು 7,000 ರೂ. ಎಂದು ನಿಗದಿಪಡಿಸಲಾಗಿದೆ. ಸರ್ಕಾರದ ನಿಯಮಾವಳಿಗಳ ಸೂತ್ರದ (Formula) ಪ್ರಕಾರ 22 ದಿನಗಳ ವೇತನವನ್ನು ಲೆಕ್ಕ ಹಾಕಿ ನೌಕರರಿಗೆ ಪಾವತಿಸಲಾಗುತ್ತದೆ. ಈ ಯೋಜನೆಗೆ ಸಂಬಂಧಿಸಿದಂತೆ ಹಿಂದಿನಿಂದ ಜಾರಿಯಲ್ಲಿರುವ ಇತರ ನಿಯಮಗಳು ಮತ್ತು ಷರತ್ತುಗಳು ಯಥಾವತ್ತಾಗಿ ಮುಂದುವರಿಯಲಿವೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಹಣಕಾಸು ನಿರ್ವಹಣೆ
ಸಾಮಾನ್ಯವಾಗಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ರೈಲ್ವೆ ಮತ್ತು ಅಂಚೆ ಇಲಾಖೆ ನೌಕರರಿಗೆ ಬೋನಸ್ ಘೋಷಣೆಯಾಗುತ್ತದೆ. ಇದೀಗ ಸಂಕ್ರಾಂತಿ ವೇಳೆ ರಕ್ಷಣಾ ಸಿಬ್ಬಂದಿಗೆ ಬೋನಸ್ ನೀಡಲಾಗುತ್ತಿದೆ. ಈ ಬೋನಸ್ ಪಾವತಿಗೆ ತಗಲುವ ವೆಚ್ಚವನ್ನು 2025–26ನೇ ಸಾಲಿನ ಆರ್ಥಿಕ ವರ್ಷದ 'ರಕ್ಷಣಾ ಸೇವೆಗಳ ಅಂದಾಜು ಪಟ್ಟಿ'ಯ ಬಜೆಟ್‌ನಿಂದಲೇ ಭರಿಸಲಾಗುತ್ತದೆ. ಇದಕ್ಕಾಗಿ ಪ್ರತ್ಯೇಕವಾಗಿ ಅಥವಾ ಹೆಚ್ಚುವರಿಯಾಗಿ ಯಾವುದೇ ಆರ್ಥಿಕ ಹೊರೆಯನ್ನು ಸರ್ಕಾರ ಹೊರುತ್ತಿಲ್ಲ. ಈಗಾಗಲೇ ಹಂಚಿಕೆಯಾಗಿರುವ ಬಜೆಟ್ ಅನುದಾನದಲ್ಲಿಯೇ ಈ ಹಣ ಬಿಡುಗಡೆಯಾಗಲಿದೆ.

