ಆಪರೇಷನ್ ಸಿಂಧೂರ್‌ಗೆ ಬೆಚ್ಚಿದ ಪಾಕಿಸ್ತಾನ: ಸೇನಾ ಬದಲಾವಣೆಗಳೇ ಸೋಲಿನ ಸಾಕ್ಷಿ ಎಂದ ಸಿಡಿಎಸ್ ಅನಿಲ್ ಚೌಹಾಣ್!
x
ಭಾರತದ ರಕ್ಷಣಾ ಪಡೆಗಳ ಮುಖ್ಯಸ್ಥ (CDS) ಜನರಲ್ ಅನಿಲ್ ಚೌಹಾಣ್

ಆಪರೇಷನ್ ಸಿಂಧೂರ್‌ಗೆ ಬೆಚ್ಚಿದ ಪಾಕಿಸ್ತಾನ: ಸೇನಾ ಬದಲಾವಣೆಗಳೇ ಸೋಲಿನ ಸಾಕ್ಷಿ ಎಂದ ಸಿಡಿಎಸ್ ಅನಿಲ್ ಚೌಹಾಣ್!

ಭಾರತದ ರಕ್ಷಣಾ ಪಡೆಗಳ ಮುಖ್ಯಸ್ಥ (CDS) ಜನರಲ್ ಅನಿಲ್ ಚೌಹಾಣ್ ಅವರು ಪಾಕಿಸ್ತಾನದ ಇತ್ತೀಚಿನ ಸೇನಾ ಬದಲಾವಣೆಗಳ ಹಿಂದಿನ ಅಸಲಿ ಮುಖವಾಡವನ್ನು ಕಳಚಿದ್ದಾರೆ.


ಭಾರತದ ರಕ್ಷಣಾ ಪಡೆಗಳ ಮುಖ್ಯಸ್ಥ (CDS) ಜನರಲ್ ಅನಿಲ್ ಚೌಹಾಣ್ ಅವರು ಪಾಕಿಸ್ತಾನದ ಇತ್ತೀಚಿನ ಸೇನಾ ಮತ್ತು ಸಾಂವಿಧಾನಿಕ ಬದಲಾವಣೆಗಳ ಕುರಿತು ಸ್ಫೋಟಕ ಮಾಹಿತಿ ನೀಡಿದ್ದಾರೆ. ಭಾರತ ನಡೆಸಿದ 'ಆಪರೇಷನ್ ಸಿಂಧೂರ್' ಕಾರ್ಯಾಚರಣೆಯು ಪಾಕಿಸ್ತಾನದ ರಕ್ಷಣಾ ವ್ಯವಸ್ಥೆಯ ಲೋಪದೋಷಗಳನ್ನು ಜಗತ್ತಿನ ಮುಂದೆ ಅನಾವರಣ ಮಾಡಿದ್ದು, ಅದನ್ನೇ ಮರೆಮಾಚಲು ಪಾಕ್ ಈಗ ಹೆಣಗಾಡುತ್ತಿದೆ ಎಂದು ಅವರು ಹೇಳಿದ್ದಾರೆ.

ಭಾರತದ 'ಆಪರೇಷನ್ ಸಿಂಧೂರ್' ಕಾರ್ಯಾಚರಣೆಯ ನಂತರ ಪಾಕಿಸ್ತಾನವು ತನ್ನ ಸಂವಿಧಾನಕ್ಕೆ ತುರ್ತು ತಿದ್ದುಪಡಿ ತಂದಿರುವುದು ಮತ್ತು ಸೇನಾ ವ್ಯವಸ್ಥೆಯನ್ನು ಮರುಸಂಘಟಿಸಿರುವುದು ಆ ದೇಶದ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದು ಜನರಲ್ ಅನಿಲ್ ಚೌಹಾಣ್ ತಿಳಿಸಿದ್ದಾರೆ. ಶುಕ್ರವಾರ ಪುಣೆಯಲ್ಲಿ ನಡೆದ 'ಪುಣೆ ಪಬ್ಲಿಕ್ ಪಾಲಿಸಿ ಫೆಸ್ಟಿವಲ್'ನಲ್ಲಿ ಮಾತನಾಡಿದ ಅವರು, ಪಾಕಿಸ್ತಾನದ ಈ ಆತುರದ ನಿರ್ಧಾರಗಳು ಅಲ್ಲಿನ ರಕ್ಷಣಾ ವ್ಯವಸ್ಥೆಯಲ್ಲಿದ್ದ ಗಂಭೀರ ಲೋಪದೋಷಗಳನ್ನು ಎತ್ತಿ ತೋರಿಸಿವೆ ಎಂದರು.

ಆಪರೇಷನ್ ಸಿಂಧೂರ್ ಪ್ರಭಾವ

2025ರ ಮೇ ತಿಂಗಳಲ್ಲಿ ನಡೆದ 'ಆಪೇಷನ್ ಸಿಂಧೂರ್' ಪಾಕಿಸ್ತಾನವನ್ನು ಬೆಚ್ಚಿಬೀಳಿಸಿತ್ತು. ಆ ಕಾರ್ಯಾಚರಣೆಯಲ್ಲಿ ತಾನು ಎದುರಿಸಿದ ಹಿನ್ನಡೆಯನ್ನು ಮರೆಮಾಚಲು ಪಾಕಿಸ್ತಾನವು ಈಗ ತನ್ನ ರಕ್ಷಣಾ ರಚನೆಯನ್ನೇ ಬದಲಿಸಿದೆ. ಜನರಲ್ ಚೌಹಾಣ್ ಅವರ ಪ್ರಕಾರ, "ಆಪರೇಷನ್ ಸಿಂಧೂರ್ ಸದ್ಯಕ್ಕೆ ಸ್ಥಗಿತಗೊಂಡಿದೆಯೇ ಹೊರತು ಸಂಪೂರ್ಣ ಮುಕ್ತಾಯವಾಗಿಲ್ಲ” ಎಂದರು

ಪಾಕಿಸ್ತಾನದ ಸಂವಿಧಾನ ತಿದ್ದುಪಡಿ

ಪಾಕಿಸ್ತಾನವು ತನ್ನ ಸಂವಿಧಾನದ 243ನೇ ವಿಧಿಗೆ ತಿದ್ದುಪಡಿ ತಂದು, 'ಚೇರ್ಮನ್ ಆಫ್ ಜಂಟಿ ಚೀಫ್ಸ್ ಆಫ್ ಸ್ಟಾಫ್ ಕಮಿಟಿ' ಹುದ್ದೆಯನ್ನು ರದ್ದುಗೊಳಿಸಿದೆ. ಅದರ ಬದಲಿಗೆ 'ಚೀಫ್ ಆಫ್ ಡಿಫೆನ್ಸ್ ಫೋರ್ಸಸ್' (CDF) ಎಂಬ ಹೊಸ ಹುದ್ದೆಯನ್ನು ಸೃಷ್ಟಿಸಿದೆ.

ವಿಶೇಷವೆಂದರೆ, ಪಾಕಿಸ್ತಾನದ ಈ ಹೊಸ 'CDF' ಹುದ್ದೆಯನ್ನು ಅಲ್ಲಿನ ಸೇನಾ ಮುಖ್ಯಸ್ಥರು ಮಾತ್ರ ನೇಮಿಸಬಹುದಾಗಿದೆ. ಇದು ಭೂಸೇನೆ, ಜಂಟಿ ಕಾರ್ಯಾಚರಣೆ ಮತ್ತು ಪರಮಾಣು ಶಸ್ತ್ರಾಸ್ತ್ರಗಳ ಮೇಲೆ ಒಬ್ಬನೇ ವ್ಯಕ್ತಿಯ ಹಿಡಿತ ಸಾಧಿಸಲು ದಾರಿ ಮಾಡಿಕೊಟ್ಟಿದೆ. ಇದು ಪಾಕಿಸ್ತಾನದ 'ಭೂಸೇನಾ ಕೇಂದ್ರಿತ' ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಚೌಹಾಣ್ ವಿಶ್ಲೇಷಿಸಿದ್ದಾರೆ.

ಆಪರೇಷನ್ ಸಿಂಧೂರ್

2025ರ ಏಪ್ರಿಲ್‌ನಲ್ಲಿ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಅಮಾಯಕ ಪ್ರವಾಸಿಗರ ಮೇಲೆ ಪಾಕ್ ಪ್ರೇರಿತ ಉಗ್ರರು ದಾಳಿ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ಭಾರತೀಯ ವಾಯುಪಡೆ ಮತ್ತು ಭೂಸೇನೆ ಮೇ ತಿಂಗಳಲ್ಲಿ ಪಾಕಿಸ್ತಾನದ ಒಳಗೆ ನುಗ್ಗಿ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿತ್ತು. ಈ ಕಾರ್ಯಾಚರಣೆಗೆ 'ಆಪರೇಷನ್ ಸಿಂಧೂರ್' ಎಂದು ಹೆಸರಿಡಲಾಗಿತ್ತು. ಈ ದಾಳಿಯು ಪಾಕಿಸ್ತಾನದ ಮಿಲಿಟರಿ ಗುಪ್ತಚರ ಮತ್ತು ರಕ್ಷಣಾ ವ್ಯವಸ್ಥೆಯ ವೈಫಲ್ಯವನ್ನು ಜಗತ್ತಿನ ಮುಂದೆ ಅನಾವರಣ ಮಾಡಿತ್ತು.

ಪಾಕಿಸ್ತಾನದಲ್ಲಿ ಬದಲಾದದ್ದೇನು?

ಭಾರತದ ದಾಳಿಗೆ ತತ್ತರಿಸಿದ ಪಾಕಿಸ್ತಾನ, ತನ್ನ ಮೂರೂ ಪಡೆಗಳ ನಡುವೆ ಸಮನ್ವಯದ ಕೊರತೆ ಇರುವುದನ್ನು ಅರಿತುಕೊಂಡಿತು. ಈ ಕೊರತೆಯನ್ನು ನೀಗಿಸಲು ಹಳೆಯ ಹುದ್ದೆಗಳನ್ನು ರದ್ದುಗೊಳಿಸಿ 'ಚೀಫ್ ಆಫ್ ಡಿಫೆನ್ಸ್ ಫೋರ್ಸಸ್' ಮತ್ತು 'ನ್ಯಾಷನಲ್ ಸ್ಟ್ರಾಟಜಿ ಕಮಾಂಡ್' ಎಂಬ ಹೊಸ ವಿಭಾಗಗಳನ್ನು ಸೃಷ್ಟಿಸಿದೆ. ಆದರೆ, ಇವೆಲ್ಲವೂ ಸೇನಾ ಮುಖ್ಯಸ್ಥರ ಅಡಿಯಲ್ಲೇ ಇರುವುದರಿಂದ ಇದು ನಿಜವಾದ ಜಂಟಿ ಕಾರ್ಯಾಚರಣೆಯ ಬದಲಿಗೆ ಅಧಿಕಾರ ಕೇಂದ್ರೀಕರಣವಾಗಿದೆ ಎಂಬುದು ಭಾರತದ ವಾದ.

Read More
Next Story