
ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಪ್ರಕಟ; ಬಾಲಕಿಯರ ಮೇಲುಗೈ
ಈ ವರ್ಷ ಒಟ್ಟಾರೆ ಶೇಕಡಾ 88.39 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಳೆದ ವರ್ಷ ಈ ಪ್ರಮಾಣ ಶೇಕಡಾ 87.98 ರಷ್ಟಿತ್ತು. ಬಾಲಕಿಯರ ಉತ್ತೀರ್ಣ ಪ್ರಮಾಣ ಶೇಕಡಾ 91.64 ರಷ್ಟಿದ್ದರೆ, ಬಾಲಕರ ಪ್ರಮಾಣ ಶೇಕಡಾ 85.70 ರಷ್ಟಿದೆ.
ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್‌ಇ) 12ನೇ ತರಗತಿ ಬೋರ್ಡ್ ಪರೀಕ್ಷೆಯ ಫಲಿತಾಂಶವನ್ನು ಮಂಗಳವಾರ ಪ್ರಕಟಿಸಿದ್ದು, ಬಾಲಕಿಯರು ಬಾಲಕರಿಗಿಂತ ಶೇಕಡಾ ಐದರಷ್ಟು ಹೆಚ್ಚಿನ ಅಂಕಗಳೊಂದಿಗೆ ಮೇಲುಗೈ ಸಾಧಿಸಿದ್ದಾರೆ ಎಂದು ಪರೀಕ್ಷಾ ನಿಯಂತ್ರಕ ಸನ್ಯಮ್ ಭಾರದ್ವಾಜ್ ತಿಳಿಸಿದ್ದಾರೆ.
ಈ ವರ್ಷ ಒಟ್ಟಾರೆ ಶೇಕಡಾ 88.39 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಳೆದ ವರ್ಷ ಈ ಪ್ರಮಾಣ ಶೇಕಡಾ 87.98 ರಷ್ಟಿತ್ತು. ಬಾಲಕಿಯರ ಉತ್ತೀರ್ಣ ಪ್ರಮಾಣ ಶೇಕಡಾ 91.64 ರಷ್ಟಿದ್ದರೆ, ಬಾಲಕರ ಪ್ರಮಾಣ ಶೇಕಡಾ 85.70 ರಷ್ಟಿದೆ. ವಿಶೇಷವೆಂದರೆ, ತೃತೀಯಲಿಂಗಿ ಅಭ್ಯರ್ಥಿಗಳು ಶೇಕಡಾ 100 ರಷ್ಟು ಉತ್ತೀರ್ಣತೆ ದಾಖಲಿಸಿದ್ದಾರೆ.
ಒಟ್ಟು 1,11,544 ವಿದ್ಯಾರ್ಥಿಗಳು ಶೇಕಡಾ 90 ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದರೆ, 24,867 ವಿದ್ಯಾರ್ಥಿಗಳು ಶೇಕಡಾ 95 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿದ್ದಾರೆ. 1.29 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಕಂಪಾರ್ಟ್‌ಮೆಂಟ್‌ಗೆ ಇರಿಸಲಾಗಿದೆ. ಈ ಬಾರಿ ಒಟ್ಟು 16,92,794 ಅಭ್ಯರ್ಥಿಗಳು 12ನೇ ತರಗತಿ ಬೋರ್ಡ್ ಪರೀಕ್ಷೆಗೆ ಹಾಜರಾಗಿದ್ದರು.