Maha Kumbh 2025: ಮಹಾ ಕುಂಭಮೇಳದ ಕುರಿತು ಸುಳ್ಳು ಮಾಹಿತಿ; 13 ಎಫ್ಐಆರ್ ದಾಖಲು
x
ಮುಹಾಕುಂಭ ಮೇಳದ ದೃಶ್ಯ.

Maha Kumbh 2025: ಮಹಾ ಕುಂಭಮೇಳದ ಕುರಿತು ಸುಳ್ಳು ಮಾಹಿತಿ; 13 ಎಫ್ಐಆರ್ ದಾಖಲು

Maha Kumbh 2025: ಮಹಾ ಶಿವರಾತ್ರಿಯ ದಿನ ಮಹಾಕುಂಭ ಮೇಳ ಸಂಪನ್ನವಾಗಲಿದೆ. ಅಂದು ದೊಡ್ಡ ಸಂಖ್ಯೆಯಲ್ಲಿ ಭಕ್ತರು ಬರುವ ಸಾಧ್ಯತೆಗಳಿವೆ. ಹೀಗಾಗಿ ಫೆಬ್ರವರಿ 26ರಂದು ಬಿಗಿ ಬಂದೋಬಸ್ತ್ ಮಾಡಲಾಗುತ್ತಿದೆ ಎಂದು ಡಿಐಜಿ ವೈಭವ್ ಕೃಷ್ಣ ಮಾಹಿತಿ ನೀಡಿದ್ದಾರೆ.


ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದ (Maha Kumbh 2025) ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಜನರ ದಾರಿ ತಪ್ಪಿಸುತ್ತಿರುವ ಹಿನ್ನೆಲೆಯಲ್ಲಿ 140 ಸೋಷಿಯಲ್ ಮೀಡಿಯಾ ಹ್ಯಾಂಡಲ್ ಗಳ ವಿರುದ್ಧ 13 ಎಫ್ಐಆರ್ ದಾಖಲಿಸಲಾಗಿದೆ.

ಮಹಾ ಕುಂಭದ ಡಿಐಜಿ ವೈಭವ್ ಕೃಷ್ಣ ಅವರು ಕೇಸ್ ದಾಖಲಾಗಿರುವ ಕುರಿತು ಮಾಹಿತಿ ನೀಡಿದ್ದಾರೆ. “ಸಾಮಾಜಿಕ ಜಾಲತಾಣಗಳಲ್ಲಿ ಕುಂಭ ಮೇಳದ ಕುರಿತಾಗಿ ತಪ್ಪು ಸಂದೇಶ ಹರಡಿದ್ದ 140 ಸೋಷಿಯಲ್ ಮೀಡಿಯಾ ಹ್ಯಾಂಡಲ್ ಗಳ ವಿರುದ್ಧ 13 ಎಫ್ಐಆರ್ ದಾಖಲಿಸಲಾಗಿದೆ. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಮುಂದೆಯೂ ಈ ರೀತಿ ತಪ್ಪು ಮಾಹಿತಿ ಹರಡಿದವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇವೆ” ಎಂದು ತಿಳಿಸಿದ್ದಾರೆ.

ಮಹಾ ಶಿವರಾತ್ರಿಯ ದಿನ ಮಹಾಕುಂಭ ಮೇಳ ಸಂಪನ್ನವಾಗಲಿದೆ. ಅಂದು ದೊಡ್ಡ ಸಂಖ್ಯೆಯಲ್ಲಿ ಭಕ್ತರು ಬರುವ ಸಾಧ್ಯತೆಗಳಿವೆ. ಹೀಗಾಗಿ ಫೆಬ್ರವರಿ 26ರಂದು ಬಿಗಿ ಬಂದೋಬಸ್ತ್ ಮಾಡಲಾಗುತ್ತಿದೆ ಎಂದು ಡಿಐಜಿ ವೈಭವ್ ಕೃಷ್ಣ ಮಾಹಿತಿ ನೀಡಿದ್ದಾರೆ.

ತ್ರಿವೇಣಿ ಸಂಗಮದಲ್ಲಿ ಭಾನುವಾರವೂ 87 ಲಕ್ಷ ಜನ ಪುಣ್ಯಸ್ನಾನ ಮಾಡಿದ್ದಾರೆ ಎಂದು ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ. ಮಹಾ ಶಿವರಾತ್ರಿಯ ದಿನದಂದು ಮಹಾ ಕುಂಭಮೇಳವು ಸಂಪನ್ನವಾಗಲಿದೆ. ಮಹಾ ಕುಂಭಮೇಳದಿಂದ ಸುಮಾರು 3 ಲಕ್ಷ ಕೋಟಿ ರೂಪಾಯಿ ಆದಾಯ ನಿರೀಕ್ಷಿಸಲಾಗಿದೆ.

Read More
Next Story