ಉತ್ತರ ಪ್ರದೇಶ, ಪಂಜಾಬ್, ಕೇರಳದ ಆಯ್ದ ಸ್ಥಾನಗಳ ಉಪಚುನಾವಣೆ ನ. 13 ರಿಂದ 20 ಕ್ಕೆ ಮುಂದೂಡಿಕೆ
x
ಸಾಂದರ್ಭಿಕ ಚಿತ್ರ

ಉತ್ತರ ಪ್ರದೇಶ, ಪಂಜಾಬ್, ಕೇರಳದ ಆಯ್ದ ಸ್ಥಾನಗಳ ಉಪಚುನಾವಣೆ ನ. 13 ರಿಂದ 20 ಕ್ಕೆ ಮುಂದೂಡಿಕೆ

ಕೇರಳದ ಪಾಲಕ್ಕಾಡ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯನ್ನು ಮರು ನಿಗದಿಪಡಿಸಲಾಗಿದ್ದು, ಚೆಲಕ್ಕರ ವಿಧಾನಸಭಾ ಮತ್ತು ವಯನಾಡ್ ಲೋಕಸಭಾ ಸ್ಥಾನಗಳ ಉಪಚುನಾವಣೆ ಈ ಹಿಂದೆ ನಿಗದಿಪಡಿಸಿದಂತೆ ನವೆಂಬರ್ 13ರಂದು ನಡೆಯಲಿದೆ.


ಉತ್ತರ ಪ್ರದೇಶ, ಪಂಜಾಬ್, ಕೇರಳದ ಆಯ್ದ ಸ್ಥಾನಗಳ ಉಪಚುನಾವಣೆ ನ. 13 ರಿಂದ 20 ಕ್ಕೆ ಮುಂದೂಡಿಕೆಹಬ್ಬಗಳ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಮತ್ತು ಪಂಜಾಬ್‌ನ ಎಲ್ಲಾ 9 ಮತ್ತು 4 ಸ್ಥಾನಗಳಿಗೆ ಹಾಗೂ ಕೇರಳದ ಒಂದು ಸ್ಥಾನದ ವಿಧಾನಸಭಾ ಉಪಚುನಾವಣೆಯನ್ನು ಚುನಾವಣಾ ಆಯೋಗವು ನವೆಂಬರ್ 13ರಿಂದ ನವೆಂಬರ್ 20ರವರೆಗೆ ಮರು ನಿಗದಿಪಡಿಸಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

ಕೇರಳದ ಪಾಲಕ್ಕಾಡ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯನ್ನು ಮರು ನಿಗದಿಪಡಿಸಲಾಗಿದ್ದು, ಚೆಲಕ್ಕರ ವಿಧಾನಸಭಾ ಮತ್ತು ವಯನಾಡ್ ಲೋಕಸಭಾ ಸ್ಥಾನಗಳ ಉಪಚುನಾವಣೆ ಈ ಹಿಂದೆ ನಿಗದಿಪಡಿಸಿದಂತೆ ನವೆಂಬರ್ 13ರಂದು ನಡೆಯಲಿದೆ.

ಕಾಂಗ್ರೆಸ್, ಬಿಜೆಪಿ, ಬಿಎಸ್ಪಿ ಮತ್ತು ಆರ್‌ಎಲ್‌ಡಿ ಸೇರಿದಂತೆ ಪಕ್ಷಗಳು ವಿವಿಧ ಹಬ್ಬಗಳನ್ನು ಗಮನದಲ್ಲಿಟ್ಟುಕೊಂಡು ಉಪಚುನಾವಣೆಯನ್ನು ಮರು ನಿಗದಿಪಡಿಸುವಂತೆ ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದವು. ಕೇರಳದ ಪಾಲಕ್ಕಾಡ್ ವಿಧಾನಸಭಾ ಕ್ಷೇತ್ರದ ಮತದಾರರ ಗಮನಾರ್ಹ ಭಾಗವು ನವೆಂಬರ್ 13 ರಿಂದ 15 ರವರೆಗೆ ʼಕಲ್ಪತಿ ರಥೋತ್ಸವʼವನ್ನು ಆಚರಿಸಲಿದೆ ಎಂದು ಕಾಂಗ್ರೆಸ್ ತಿಳಿಸಿದೆ.

ಪಂಜಾಬ್‌ನಲ್ಲಿ ನವೆಂಬರ್ 15ರಂದು ಶ್ರೀ ಗುರುನಾನಕ್ ದೇವ್ ಅವರ 555 ನೇ ಪ್ರಕಾಶ್ ಪರ್ವ್ ನಡೆಯಲಿದೆ. ನವೆಂಬರ್ 13 ರಿಂದ 'ಅಖಂಡ ಪಥ' ನಡೆಯುತ್ತದೆ ಎಂದು ಪಕ್ಷ ಹೇಳಿದೆ.

ನವೆಂಬರ್ 15 ರಂದು ಆಚರಿಸಲಾಗುವ ಕಾರ್ತಿಕ ಪೂರ್ಣಿಮಾದ ಮುಂಚಿತವಾಗಿ ಉತ್ತರ ಪ್ರದೇಶದಲ್ಲಿ ಜನರು ಮೂರರಿಂದ ನಾಲ್ಕು ದಿನಗಳವರೆಗೆ ಪಾದಯಾತ್ತೆ ಮಾಡುತ್ತಾರೆ ಎಂದು ಬಿಜೆಪಿ, ಬಿಎಸ್‌ಪಿ ಮತ್ತುಆರ್‌ಎಲ್‌ಡಿ ಹೇಳಿದೆ.

ಅಕ್ಟೋಬರ್ 15 ರಂದು ಘೋಷಿಸಲಾದ ಹಿಂದಿನ ವೇಳಾಪಟ್ಟಿ ಪ್ರಕಾರ, ವಯನಾಡ್ ಸಂಸದೀಯ ಸ್ಥಾನ ಮತ್ತು 47 ವಿಧಾನಸಭಾ ಸ್ಥಾನಗಳಿಗೆ ನವೆಂಬರ್ 13 ರಂದು ಉಪಚುನಾವಣೆ ನಡೆಯಬೇಕಿತ್ತು.

ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಮತ್ತು ಜಾರ್ಖಂಡ್ ಚುನಾವಣೆಯ ಎರಡನೇ ಹಂತದ ಜೊತೆಗೆ ನಾಂದೇಡ್ ಲೋಕಸಭಾ ಸ್ಥಾನ ಮತ್ತು ಕೇದಾರನಾಥ ವಿಧಾನಸಭಾ ಕ್ಷೇತ್ರಕ್ಕೆ ನವೆಂಬರ್ 20 ರಂದು ಉಪಚುನಾವಣೆ ನಿಗದಿಯಾಗಿತ್ತು. ಈ ಎರಡು ಉಪಚುನಾವಣೆಗಳಲ್ಲಿ ಯಾವುದೇ ಬದಲಾವಣೆ ಇಲ್ಲ.

ಡೇರಾ ಬಾಬಾ ನಾನಕ್, ಚಬ್ಬೇವಾಲ್, ಗಿಡ್ಡರ್ಬಾಹಾ ಮತ್ತು ಬರ್ನಾಲಾ ಎಂಬ ನಾಲ್ಕು ಪಂಜಾಬ್ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದೆ.

ಮೀರಾಪುರ, ಕುಂದರ್ಕಿ, ಗಾಜಿಯಾಬಾದ್, ಖೈರ್, ಕಾರ್ಹಾಲ್, ಸಿಶಾಮೌ, ಫುಲ್ಪುರ್, ಕಟೇಹರಿ ಮತ್ತು ಮಜವಾನ್ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದೆ.

ನವೆಂಬರ್ 23 ರಂದು ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆಗಳ ಮತ ಎಣಿಕೆಯ ದಿನಾಂಕವು ಬದಲಾಗದೆ ಉಳಿಯಲಿದೆ.

ಈ ಹಿಂದೆಯೂ ಚುನಾವಣಾ ಆಯೋಗವು ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗಳು ಮತ್ತು ಉಪಚುನಾವಣೆಗಳ ಮತದಾನದ ದಿನಾಂಕಗಳನ್ನು ಬದಲಾಯಿಸಿದೆ. ಪಿಟಿಐ

Read More
Next Story