ಫೆಬ್ರವರಿ 10 ರವರೆಗೆ ಬಜೆಟ್‌ ಅಧಿವೇಶನ ವಿಸ್ತರಣೆ: ಸ್ವೀಕರ್
x
ಜನವರಿ 31 ರಂದು ಆರಂಭವಾದ ಬಜೆಟ್ ಅಧಿವೇಶನವು ಫೆಬ್ರವರಿ 10 ರಂದು ಕೊನೆಗೊಳ್ಳಲಿದೆ

ಫೆಬ್ರವರಿ 10 ರವರೆಗೆ ಬಜೆಟ್‌ ಅಧಿವೇಶನ ವಿಸ್ತರಣೆ: ಸ್ವೀಕರ್

ಪ್ರಸ್ತುತ ನಡೆಯುತ್ತಿರುವ ಬಜೆಟ್ ಅಧಿವೇಶನವನ್ನು ಫೆಬ್ರವರಿ 10 ರವರೆಗೆ ವಿಸ್ತರಿಸಲಾಗಿದೆ ಎಂದು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಬುಧವಾರ ತಿಳಿಸಿದ್ದಾರೆ.


Click the Play button to hear this message in audio format

ಹೊಸದಿಲ್ಲಿ: ಬಜೆಟ್ ಅಧಿವೇಶನವನ್ನು ಫೆಬ್ರವರಿ 10 ರವರೆಗೆ ವಿಸ್ತರಿಸಲಾಗಿದೆ ಎಂದು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಬುಧವಾರ ತಿಳಿಸಿದ್ದಾರೆ.

ಜನವರಿ 31 ರಂದು ಆರಂಭಗೊಂಡಿರುವ ಬಜೆಟ್‌ ಅಧಿವೇಶನ ಫೆಬ್ರವರಿ 9 ರಂದು ಕೊನೆಗೊಳ್ಳಬೇಕಿದ್ದು, ಇದೀಗ ಅಧಿವೇಶನವನ್ನು ಫೆಬ್ರವರಿ 10 ರವರೆಗೆ ವಿಸ್ತರಿಸಲಾಗಿದೆ.

ಬಿಜೆಪಿ ಅಧಿಕಾರಕ್ಕೆ ಬಂದ 2014ಕ್ಕೆ ಮೊದಲು ಮತ್ತು ನಂತರದ ಆರ್ಥಿಕ ಸ್ಥಿತಿಗಳನ್ನು ಹೋಲಿಸಿ, ಶ್ವೇತಪತ್ರವನ್ನು ಸರಕಾರ ಮಂಡಿಸಲಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಮಂಗಳವಾರ ಹೇಳಿದ್ದಾರೆ. ಹಣಕಾಸು ಮಸೂದೆ, ಬಜೆಟ್ ಚರ್ಚೆ ಮತ್ತು ಅನುದಾನದ ಬೇಡಿಕೆಯಂತಹ ಅಜೆಂಡಾಗಳನ್ನು ಇನ್ನೂ ಕೈಗೆತ್ತಿಗೊಂಡಿಲ್ಲ.ಇದಲ್ಲದೆ ಶ್ವೇತಪತ್ರವನ್ನು ಸಹ ಮಂಡಿಸಬೇಕಾಗಿರುವುದರಿಂದ ಅಧಿವೇಶನದ ಅವಧಿಯನ್ನು ಒಂದು ದಿನ ವಿಸ್ತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸಾಮಾನ್ಯವಾಗಿ ಸಂಸತ್ತು ವಾರಾಂತ್ಯದಲ್ಲಿ ಕಾರ್ಯನಿರ್ವಹಿಸುವುದಿಲ್ಲ ಆದರೆ, ಈ ಹಿಂದೆ ಸದನಗಳು ಶನಿವಾರದಂದೂ ನಡೆದ ಉದಾಹರಣೆಗಳಿವೆ.

Read More
Next Story