ತೀವ್ರ ಉಷ್ಣದ ಅಲೆ: ಸಾವಿನ ಸಂಖ್ಯೆ 143 ಕ್ಕೆ ಹೆಚ್ಚಳ
x

ತೀವ್ರ ಉಷ್ಣದ ಅಲೆ: ಸಾವಿನ ಸಂಖ್ಯೆ 143 ಕ್ಕೆ ಹೆಚ್ಚಳ

ದೇಶದ ಹೆಚ್ಚಿನ ಭಾಗಗಳಲ್ಲಿ ಶಾಖದ ಅಲೆ ತೀವ್ರಗೊಂಡಿದ್ದು,ಸಾವಿನ ಸಂಖ್ಯೆ 143 ಕ್ಕೆ ಏರಿದೆ. ಆದರೆ, ರಾಜ್ಯಗಳು ಮತ್ತು ಆರೋಗ್ಯ ಸೌಲಭ್ಯಗಳಿಂದ ಅಂಕಿಅಂಶ ಬರಬೇಕಿರುವುದರಿಂದ, ಸಾವಿನ ಸಂಖ್ಯೆ ಹೆಚ್ಚಾಗಬಹುದು.


ದೇಶದ ಹೆಚ್ಚಿನ ಭಾಗಗಳನ್ನು ಕಾಡುತ್ತಿರುವ ದೀರ್ಘಕಾಲೀನ ಉಷ್ಣಅಲೆಯಿಂದ ಸಾವಿಗೀಡಾದವರ ಸಂಖ್ಯೆ 143 ಕ್ಕೆ ಏರಿದೆ. ಆದರೆ, ರಾಜ್ಯಗಳು ಮತ್ತು ಹಲವು ಆರೋಗ್ಯ ಸೌಲಭ್ಯಗಳಿಂದ ಅಂಕಿಅಂಶ ಇನ್ನೂ ಬರಬೇಕಿರುವುದರಿಂದ, ವಾಸ್ತವಿಕ ಸಂಖ್ಯೆ ಹೆಚ್ಚಿರುವ ಸಾಧ್ಯತೆಯಿದೆ.

ಮಾರ್ಚ್ 1 ಮತ್ತು ಜೂನ್ 20 ರ ನಡುವೆ 143 ಸಾವು ದಾಖಲಾಗಿದೆ ಮತ್ತು 41,789 ಜನರು ಶಾಖದ ಹೊಡೆತದಿಂದ ಬಳಲುತ್ತಿದ್ದಾರೆ. ಸಾವಿನ ಪ್ರಮಾಣ ಹೆಚ್ಚು ಇದೆ ಎಂದು ಆರೋಗ್ಯ ಸಚಿವಾಲಯದ ಮೂಲಗಳು ಶುಕ್ರವಾರ (ಜೂನ್ 21) ಹೇಳಿವೆ.

ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ( ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್, ಎನ್‌ಸಿಡಿಸಿ)ವು ತಾಪಮಾನ ಸಂಬಂಧಿತ ಅನಾ ರೋಗ್ಯ ಮತ್ತು ಸಾವಿನ ಸರ್ವೇಕ್ಷಣೆಯಡಿ ಸಂಗ್ರಹಿಸಿದ ಅಂಕಿಅಂಶಗಳು ರಾಜ್ಯಗಳಿಂದ ನವೀಕರಿಸಿದ ಮಾಹಿತಿ ಒಳಗೊಳ್ಳದ ಕಾರಣ ಸಾವಿನ ಪ್ರಮಾಣ ಇದಕ್ಕಿಂತ ಹೆಚ್ಚು ಇರುತ್ತದೆ ಎಂದು ನಿರೀಕ್ಷಿಸಲಾಗಿದೆ. ಹಲವು ಆಸ್ಪತ್ರೆಗಳು ಶಾಖದ ಅಲೆಗಳ ಸಾವಿನ ಸಂಖ್ಯೆಯ ಮಾಹಿತಿಯನ್ನು ನೀಡಬೇಕಿದೆ.

ಅಧಿಕೃತ ಅಂಕಿಅಂಶಗಳ ಪ್ರಕಾರ, ಜೂನ್ 20 ರಂದು ಶಾಖದ ಆಘಾತದಿಂದ 14 ಸಾವು ಮತ್ತು ಶಂಕಿತ ಶಾಖದ ಆಘಾತದಿಂದ ಒಂಬತ್ತು ಸಾವು ಸಂಭವಿಸಿದೆ. ಮಾರ್ಚ್-ಜೂನ್ ಅವಧಿಯಲ್ಲಿ ಸಾವಿನ ಸಂಖ್ಯೆ 114 ರಿಂದ 143 ಕ್ಕೆ ಹೆಚ್ಚಿದೆ. ಉತ್ತರ ಪ್ರದೇಶ 35, ದೆಹಲಿ 21, ಬಿಹಾರ ಮತ್ತು ರಾಜಸ್ಥಾನ (ತಲಾ 17) ಸಾವು ಸಂಭವಿಸಿದೆ.

ವಿಶೇಷ ಶಾಖ ತರಂಗ ಘಟಕ: ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ, ರೋಗಿಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆಯೇ ಎಂದು ಪರಿಶೀಲಿಸಲು ಮತ್ತು ಶಾಖದ ಹೊಡೆತದಿಂದ ಸಾವನ್ನಪ್ಪಿದವರ ಸಂಖ್ಯೆಯನ್ನು ನಿರ್ಣಯಿಸಲು ಕೇಂದ್ರೀಯ ಆಸ್ಪತ್ರೆಗಳಿಗೆ ಭೇಟಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಉತ್ತರ ಮತ್ತು ಪೂರ್ವ ಭಾರತದ ಹಲವು ಪ್ರದೇಶಗಳು ದೀರ್ಘಕಾಲ ಶಾಖದ ಅಲೆಯ ಹಿಡಿತದಲ್ಲಿ ಸಿಲುಕಿವೆ. ಶಾಖದ ಆಘಾತದಿಂದ ಸಾವುನೋವು ಹೆಚ್ಚಲಿದೆ. ಅಂತಹ ರೋಗಿಗಳನ್ನು ಉಪಚರಿಸಲು ವಿಶೇಷ ಘಟಕ ಸ್ಥಾಪಿಸಲು ಆಸ್ಪತ್ರೆಗಳಿಗೆ ಕೇಂದ್ರ ಸಲಹೆ ನೀಡಿದೆ. ಉಷ್ಣತೆಯಿಂದ ಅನಾರೋಗ್ಯಕ್ಕೆ ಒಳಗಾಗುವವರನ್ನು ಉಪಚರಿಸಲು ಕೇಂದ್ರ ಸರ್ಕಾರಿ ಆಸ್ಪತ್ರೆಗಳಲ್ಲಿ ವಿಶೇಷ ಶಾಖ ತರಂಗ ಘಟಕ ಸ್ಥಾಪಿಸುವಂತೆ ನಡ್ಡಾ ಬುಧವಾರ ನಿರ್ದೇಶನ ನೀಡಿದ್ದಾರೆ.

ಶಿಫಾರಸುಗಳು: ಕೇಂದ್ರ ಆರೋಗ್ಯ ಸಚಿವರ ನಿರ್ದೇಶನದ ಮೇರೆಗೆ ರಾಜ್ಯ ಆರೋಗ್ಯ ಇಲಾಖೆಗೆ 'ಉಷ್ಣ ಅಲೆಗಳ ಋತು 2024' ಕುರಿತು ಆರೋಗ್ಯ ಸಚಿವಾಲಯ ಸಲಹೆಗಳನ್ನು ನೀಡಿದೆ.

ಹವಾಮಾನ ಬದಲಾವಣೆ ಮತ್ತು ಮಾನವ ಆರೋಗ್ಯದ ರಾಷ್ಟ್ರೀಯ ಕಾರ್ಯಕ್ರಮ (ಎನ್‌ಪಿಸಿಸಿಎಚ್‌ಎಚ್‌ ) ದಡಿ ಮಾ.1 ರಿಂದ ಉಷ್ಣತೆ ಸಂಬಂಧಿತ ಅನಾರೋಗ್ಯ ಮತ್ತು ಸಾವಿನ ವರದಿ ಮಾಡುವುದರ ಜೊತೆಗೆ ಬಿಸಿಲಿನಿಂದ ಆಘಾತ ಪ್ರಕರಣಗಳು ಮತ್ತು ಸಾವಿನ ಸಂಖ್ಯೆಯ ಅಂಕಿಅಂಶಗಳನ್ನು ಪ್ರತಿದಿನ ಸಲ್ಲಿಸಲು ರಾಜ್ಯ ನೋಡಲ್ ಅಧಿಕಾರಿಗಳಿಗೆ ಸಲಹೆ ನೀಡಿದೆ.

ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೊರಡಿಸಿದ ಶಾಖದ ಅಲೆ ಕುರಿತ ಪ್ರಕಟಣೆಯನ್ನು ಮತ್ತು ಮುಂದಿನ ನಾಲ್ಕು ದಿನಗಳ ಮುನ್ಸೂಚನೆಯನ್ನು ಆಸ್ಪತ್ರೆಗಳು ಮತ್ತು ಹಾನಿಗೀಡಾಗಬಹುದಾದ ಜನರಿಗೆ ಪ್ರಸಾರ ಮಾಡಬೇಕು ಎಂದು ಹೇಳಿದೆ.

ತೀವ್ರತರವಾದ ಶಾಖ ಸಂಬಂಧಿತ ಕಾಯಿದೆ(ಎಚ್‌ಆರ್‌ಐ) ತಡೆಗಟ್ಟುವಿಕೆ ಮತ್ತು ನಿರ್ವಹಣೆಗೆ ಆರೋಗ್ಯ ಸೌಲಭ್ಯದ ಸನ್ನದ್ಧತೆ, ಎಲೆಕ್ಟ್ರೋ ಲೈಟ್ ಅಸಮತೋಲನದ ನಿರ್ವಹಣೆಗೆ ಒಆರ್‌ಎಸ್ ಪೊಟ್ಟಣ, ಅಗತ್ಯ ಔಷಧ, ಐವಿ ದ್ರವ, ಐಸ್ ಪ್ಯಾಕ್‌ ಮತ್ತು ಉಪಕರಣಗಳನ್ನು ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹಿಸಿಕೊಳ್ಳಬೇಕೆಂದು ನಿರ್ದೇಶನ ನೀಡಿದೆ.

ಎಲ್ಲ ಆರೋಗ್ಯ ಸೌಲಭ್ಯಗಳಲ್ಲಿ ಕುಡಿಯುವ ನೀರು, ಚಿಕಿತ್ಸೆ ಪ್ರದೇಶದಲ್ಲಿ ತಂಪಾಗಿಸುವ ಉಪಕರಣದ ಲಭ್ಯತೆ ಇರುವಂತೆ ಹಾಗೂ ಶಂಕಿತ ಉಷ್ಣತೆ ಪ್ರಕರಣಗಳನ್ನು ತ್ವರಿತವಾಗಿ ನಿರ್ಣಯಿಸಬೇಕು ಎಂದು ಹೇಳಿದೆ.

Read More
Next Story