10 ನಿಮಿಷಗಳಲ್ಲಿ ಆಂಬ್ಯುಲೆನ್ಸ್ ಸೇವೆ; ಬ್ಲಿಂಕಿಟ್‌ನಿಂದ ಹೊಸ ಸೇವೆ
ಈ ಆಂಬ್ಯುಲೆನ್ಸ್‌ಗಳಿಗೆ ಆಮ್ಲಜನಕ ಸಿಲಿಂಡರ್‌ಗಳು, ಎಇಡಿ , ಸ್ಟ್ರೆಚರ್, ಮಾನಿಟರ್, ಸಕ್ಷನ್ ಯಂತ್ರ ಮತ್ತು ಅಗತ್ಯ ತುರ್ತು ಔಷಧಗಳು ಮತ್ತು ಚುಚ್ಚುಮದ್ದುಗಳು ಸೇರಿದಂತೆ ಅಗತ್ಯ ಜೀವ ಉಳಿಸುವ ಉಪಕರಣಗಳನ್ನು ಸಜ್ಜುಗೊಳಿಸಲಾಗಿದೆ.
ತ್ವರಿತ ವಾಣಿಜ್ಯ ಸೇವೆ ದೈತ್ಯ ಕಂಪನಿಯಾಗಿರುವ ಬ್ಲಿಂಕಿಟ್ ಗುರುವಾರ ಗುರುಗ್ರಾಮದ ಆಯ್ದ ಪ್ರದೇಶಗಳಲ್ಲಿ ಪ್ರಾಯೋಗಿಕ ಯೋಜನೆಯಾಗಿ 10 ನಿಮಿಷಗಳ ಆಂಬ್ಯುಲೆನ್ಸ್ ಸೇವೆಯನ್ನು ಪ್ರಾರಂಭಿಸಿದೆ. ಬ್ಲಿಂಕಿಟ್ ಅಪ್ಲಿಕೇಶನ್‌ನಲ್ಲಿ ಆಂಬ್ಯುಲೆನ್ಸ್ ಕರೆ ಮಾಡುವ ಆಯ್ಕೆಯನ್ನು ಬಳಕೆದಾರಿಗೆ ನೀಡಲಾಗಿದೆ ಎಂದು ಕಂಪನಿಯ ಹೇಳಿಕೆ ತಿಳಿಸಿದೆ.
ಈ ಆಂಬ್ಯುಲೆನ್ಸ್‌ಗಳಿಗೆ ಆಮ್ಲಜನಕ ಸಿಲಿಂಡರ್‌ಗಳು, ಎಇಡಿ (ಸ್ವಯಂಚಾಲಿತ ಬಾಹ್ಯ ಡಿಫಿಬ್ರಿಲೇಟರ್), ಸ್ಟ್ರೆಚರ್, ಮಾನಿಟರ್, ಸಕ್ಷನ್ ಯಂತ್ರ ಮತ್ತು ಅಗತ್ಯ ತುರ್ತು ಔಷಧಗಳು ಮತ್ತು ಚುಚ್ಚುಮದ್ದುಗಳು ಸೇರಿದಂತೆ ಅಗತ್ಯ ಜೀವ ಉಳಿಸುವ ಉಪಕರಣಗಳನ್ನು ಸಜ್ಜುಗೊಳಿಸಲಾಗಿದೆ. ಅಗತ್ಯವಿರುವವರನ್ನು ಸುರಕ್ಷಿತವಾಗಿ ಸಾಗಿಸಲು ಅವರಿಗೆ ಸ್ಕೂಪ್ ಸ್ಟ್ರೆಚರ್ ಮತ್ತು ಗಾಲಿಕುರ್ಚಿಯನ್ನು ಸಹ ನೀಡಲಾಗುವುದು" ಎಂದು ಅದು ಹೇಳಿದೆ.
ಪ್ರತಿ ವಾಹನವನ್ನು ಅರೆವೈದ್ಯಕೀಯ, ಕರ್ತವ್ಯ ಸಹಾಯಕ ಮತ್ತು ತರಬೇತಿ ಪಡೆದ ಚಾಲಕ ನಿರ್ವಹಿಸಲಿದ್ದಾರೆ. ಈ ಸೇವೆಯನ್ನು ಶೀಘ್ರದಲ್ಲೇ ಹೆಚ್ಚಿನ ಪ್ರದೇಶಗಳಿಗೆ ವಿಸ್ತರಿಸಲಾಗುವುದು ಎಂದು ಅವರು ಹೇಳಿದ್ದಾರೆ.
"ನಮ್ಮ ನಗರಗಳಲ್ಲಿ ತ್ವರಿತ ಮತ್ತು ವಿಶ್ವಾಸಾರ್ಹ ಆಂಬ್ಯುಲೆನ್ಸ್ ಸೇವೆ ಒದಗಿಸುವ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ನಾವು ನಮ್ಮ ಮೊದಲ ಹೆಜ್ಜೆ ಇಡುತ್ತಿದ್ದೇವೆ. ಮೊದಲ ಐದು ಆಂಬ್ಯುಲೆನ್ಸ್‌ಗಳು ಇಂದಿನಿಂದ ಗುರುಗ್ರಾಮ್‌ನಲ್ಲಿ ರಸ್ತೆಗಿಳಿಯಲಿವೆ" ಎಂದು ಬ್ಲಿಂಕಿಟ್ ಸಿಇಒ ಅಲ್ಬಿಂದರ್ ಧಿಂಡ್ಸಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮುಂದಿನ ಎರಡು ವರ್ಷಗಳಲ್ಲಿ ಎಲ್ಲಾ ಪ್ರಮುಖ ನಗರಗಳಿಗೆ ವಿಸ್ತರಿಸುವ ಗುರಿ ಹೊಂದಲಾಗಿದೆ ಎಂದು ಅವರು ಹೇಳಿದರು.
"ಲಾಭ ಇಲ್ಲಿ ಗುರಿಯಲ್ಲ. ನಾವು ಗ್ರಾಹಕರಿಗೆ ಕೈಗೆಟುಕುವ ವೆಚ್ಚದಲ್ಲಿ ಈ ಸೇವೆ ನೀಡುತ್ತೇವೆ ಮತ್ತು ದೀರ್ಘಾವಧಿಯಲ್ಲಿ ಈ ನಿರ್ಣಾಯಕ ಸಮಸ್ಯೆಯನ್ನು ನಿಜವಾಗಿಯೂ ಪರಿಹರಿಸಲು ಹೂಡಿಕೆ ಮಾಡುತ್ತೇವೆ" ಎಂದು ಅವರು ಹೇಳಿದರು.