ದೆಹಲಿ ಸಿಆರ್‌ಪಿಎಫ್ ಘಟಕದ ಬಳಿ ಭಾರೀ ಸ್ಫೋಟ
ಭಾನುವಾರ (ಅಕ್ಟೋಬರ್ 20) ಬೆಳಗ್ಗೆ ದೆಹಲಿಯ ರೋಹಿಣಿ, ಪ್ರಶಾಂತ್ ವಿಹಾರ್‌ನಲ್ಲಿರುವ ಸಿಆರ್‌ಪಿಎಫ್ (ಕೇಂದ್ರ ಮೀಸಲು ಪೊಲೀಸ್ ಪಡೆ) ತರಬೇತಿ ಘಟಕದ ಬಳಿ ನಿಗೂಢ ಸ್ಫೋಟ ಸಂಭವಿಸಿದೆ.
ಯಾವುದೇ ಸಾವು-ನೋವುಗಳು ವರದಿಯಾಗಿಲ್ಲವಾದರೂ, ಸ್ಫೋಟವು ತರಬೇತಿ ಶಾಲೆಯ ಗೋಡೆಯ ಹತ್ತಿರ ನಿಲ್ಲಿಸಿದ ವಾಹನಗಳ ಗಾಜುಗಳನ್ನು ಪುಡಿಮಾಡುವಷ್ಟು ತೀವ್ರವಾಗಿತ್ತು. ಶಾಲೆಯ ಗೋಡೆಯ ಬಳಿ ಬಿಳಿ ಪುಡಿಯಂತಹ ವಸ್ತು ಪತ್ತೆಯಾಗಿದ್ದು. ಅವು ಸ್ಫೋಟಕಗಳ ಕುರುಹುಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ..
ಅಗ್ನಿಶಾಮಕ ವಾಹನಗಳು, ಬಾಂಬ್ ನಿಷ್ಕ್ರಿಯ ದಳ, ವಿಧಿ ವಿಜ್ಞಾನ ಪ್ರಯೋಗಾಲಯ ಅಧಿಕಾರಿಗಳು, ಸೆಕ್ಟರ್ 14 ರ ಸಿಆರ್‌ಪಿಎಫ್ ತರಬೇತಿ ಶಾಲೆಯ ಬಳಿಯ ಘಟನಾ ಸ್ಥಳಕ್ಕೆ ಧಾವಿಸಿ ಸ್ಫೋಟದ ಬಗ್ಗೆ ಮಾಹಿತಿ ಕಲೆಹಾಕಿವೆ.
ಶಾಲೆಯ ಗೋಡೆ, ಸಮೀಪದ ಅಂಗಡಿಗಳು ಮತ್ತು ಕಾರಿಗೆ ಹಾನಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿಎಫ್‌ಎಸ್ (ಡಿವಿಷನಲ್ ಫಾರೆನ್ಸಿಕ್ ಸೆಂಟರ್) ಅಧಿಕಾರಿಗಳು, "ಬೆಳಿಗ್ಗೆ 7.50 ಕ್ಕೆ ಸಿಆರ್‌ಪಿಎಫ್ ಶಾಲೆಯ ಆವರಣ ಗೋಡೆಯ ಬಳಿ ಸ್ಫೋಟ ನಡೆದ ಕುರಿತು ನಮಗೆ ಕರೆ ಬಂದಿತು. ನಾವು ತಕ್ಷಣ ಎರಡು ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕ ರವಾನೆ ಮಾಡಿದ್ದೇವೆ. ಸ್ಫೋಟದಿಂದಾಗಿ ಯಾರಿಗೂ ಗಾಯವಾಗಿಲ್ಲ, ಕ್ರೈಂ ಬ್ರಾಂಚ್, ವಿಶೇಷ ದಳ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿದ್ದಾರೆ ಎಂದು ಹೇಳಿದ್ದಾರೆ.
"ಸ್ಫೋಟದ ಸ್ಥಳದಿಂದ ಮಾದರಿಗಳನ್ನು ಸಂಗ್ರಹಿಸಲು ನಮ್ಮ ವಿಧಿವಿಜ್ಞಾನ ತಂಡ ಮತ್ತು ಅಪರಾಧ ಘಟಕವು ಸ್ಥಳದಲ್ಲಿದೆ. ಇದು ಪಟಾಕಿ ಆಗಿರುವ ಸಾಧ್ಯತೆಯೂ ಇದೆ., ಆದರೆ ನಾವು ಎಲ್ಲಾ ಕೋನಗಳಿಂದ ಸಂಪೂರ್ಣ ವಿಷಯವನ್ನು ತನಿಖೆ ಮಾಡುತ್ತಿದ್ದೇವೆ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಸ್ಫೋಟವನ್ನು ಪ್ರತ್ಯಕ್ಷವಾಗಿ ನೋಡಿದ ಕೆಲವರು ಅದನ್ನು ತಮ್ಮ ಫೋನ್‌ಗಳಲ್ಲಿ ರೆಕಾರ್ಡ್ ಮಾಡಿದ್ದಾರೆ. ಇನ್ನು ಕೆಲವರು ತಮಗೆ ದೊಡ್ಡ ಶಬ್ದ ಕೇಳಿಸಿತು ಮತ್ತು ಸ್ಫೋಟ ಸಂಭವಿಸಿದ ಸ್ಥಳದಿಂದ ಹೊಗೆಯ ಮೋಡವು ಹೊರಹೊಮ್ಮುವುದನ್ನು ನೋಡಿದೆ ಎಂದು ಹೇಳಿದ್ದಾರೆ. ಏನು ಮಾಡಬಹುದು ಎಂಬುದು ಇಲ್ಲಿದೆ
"ಇಂದು 07:47 ಗಂಟೆಗೆ, CRPF ಶಾಲೆಯ ಸೆಕ್ಟರ್ 14 ರೋಹಿಣಿ ಬಳಿ ಸಾಕಷ್ಟು ಶಬ್ದದೊಂದಿಗೆ ಸ್ಫೋಟ ಸಂಭವಿಸಿದೆ ಎಂದು ಕರೆ ಮಾಡಿದವರು ಮಾಹಿತಿ ನೀಡಿದರು.ಘಟನಾ ಸ್ಥಳಕ್ಕೆ ಕ್ರೈಂ ಟೀಮ್, ಎಫ್‌ಎಸ್‌ಎಲ್ ತಂಡ ಮತ್ತು ಬಾಂಬ್ ನಿಷ್ಕ್ರಿಯ ದಳವನ್ನು ಕರೆಸಲಾಗಿದ್ದು, ಅಪರಾಧ ಸ್ಥಳವನ್ನು ಸುತ್ತುವರಿದಿದೆ. ಅಗ್ನಿಶಾಮಕ ದಳದ ತಂಡವು ಸ್ಥಳದಲ್ಲಿದೆ," ಎಂದು ಪೊಲೀಸರು ತಿಳಿಸಿದ್ದಾರೆ.