ಬಿಜೆಪಿಯಿಂದ ಸಿಎಎ ಮುಂದೊತ್ತುವಿಕೆ: ಎನ್‌ಡಿಎ ಪಾಲುದಾರರಿಗೆ ಇಕ್ಕಟ್ಟು
x

ಬಿಜೆಪಿಯಿಂದ ಸಿಎಎ ಮುಂದೊತ್ತುವಿಕೆ: ಎನ್‌ಡಿಎ ಪಾಲುದಾರರಿಗೆ ಇಕ್ಕಟ್ಟು


ದೇಶದೆಲ್ಲೆಡೆ ಚುನಾವಣೆ ಬಿಸಿ ಹೆಚ್ಚುತ್ತಿದೆ. ಆಡಳಿತಾರೂಢ ಬಿಜೆಪಿಯು ಪೌರತ್ವ ತಿದ್ದುಪಡಿ ಕಾಯಿದೆ(ಸಿಎಎ) ಅನುಷ್ಠಾನದ ಬಗ್ಗೆ ಪ್ರಚಾರ ಮುಂದುವರಿಸುತ್ತಿರುವುದರಿಂದ, ಅದರ ಮಿತ್ರಪಕ್ಷಗಳು ಇಕ್ಕಟ್ಟಿನಲ್ಲಿ ಸಿಲುಕಿವೆ.

ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟದ ಪಾಲುದಾರನಾದ ಜೆಡಿಯು, ಸಿಎಎ ಅನುಷ್ಠಾನ ಮಾಡುವುದಿಲ್ಲಿ ಎಂದು ನಿರ್ಧರಿಸಿದೆ. ʻಬಿಜೆಪಿ ಸಿಎಎ ಅನುಷ್ಠಾನದ ಬಗ್ಗೆ ಪ್ರಚಾರ ಮುಂದುವರಿಸಬಹುದು ಎಂಬುದು ನಮಗೆ ಗೊತ್ತಿದೆ. ಆದರೆ, ಅದನ್ನು ಬಿಹಾರದಲ್ಲಿ ಜಾರಿಗೆ ತರಲಾಗುವುದಿಲ್ಲ. ಮುಖ್ಯಮಂತ್ರಿ ನಿತೀಶ್ ಕುಮಾರ್ ಈಗಾಗಲೇ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಬಿಹಾರದ ಜನರಿಗೆ ಉತ್ತಮ ಆಡಳಿತ ಖಚಿತಪಡಿಸುವುದು ನಮ್ಮ ಗುರಿ,ʼ ಎಂದು ಜೆಡಿಯು ಮಾಜಿ ಸಂಸದ ಮಹಾಬಲಿ ಸಿಂಗ್ ʻಫೆಡರಲ್‌ʼಗೆ ತಿಳಿಸಿದರು.

ಜೆಡಿಯು ಅಸಮ್ಮತಿ:

ʻಬಿಜೆಪಿ ಮತ್ತು ಜೆಡಿಯು ಮಿತ್ರಪಕ್ಷಗಳು. ಆದರೆ, ಜೆಡಿಯು ಸ್ವತಂತ್ರ ರಾಜಕೀಯ ಪಕ್ಷ. ಈ ವಿಷಯದ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಸೀಟು ಹಂಚಿಕೆ ಮಾಡಿಕೊಂಡಿದ್ದೇವೆ ಮತ್ತು ಎನ್‌ಡಿಎ ಪಾಲುದಾರರಾಗಿ ಒಟ್ಟಾಗಿ ಸ್ಪರ್ಧಿಸುತ್ತೇವೆʼ ಎಂದು ಹೇಳಿದರು.

ನಿತೀಶ್ ಕುಮಾರ್ ಸಮಸ್ಯೆಯೇನೆಂದರೆ, ಬಿಹಾರದಲ್ಲಿ ಸುಮಾರು ಶೇ.18 ಮುಸ್ಲಿಂ ಜನಸಂಖ್ಯೆ ಇದೆ. ಸಮುದಾಯವು ವಿಧಾನಸಭೆ ಚುನಾವಣೆಯಲ್ಲಿ ಜೆಡಿಯುಗೆ ಮತ ಹಾಕಿದೆ. ಬಿಜೆಪಿ ಸಿಎಎ ಅನುಷ್ಠಾನ ಮಾಡುವುದಾಗಿ ಹೇಳುತ್ತಿರುವುದರಿಂದ, ಮುಸ್ಲಿಂ ಮತಗಳು ಕಾಂಗ್ರೆಸ್ ಮತ್ತು ಆರ್‌ಜೆಡಿಗೆ ವರ್ಗಾವಣೆ ಆಗುತ್ತದೆ ಎಂದು ಜೆಡಿಯು ನಾಯಕರು ಭಯಪಡುತ್ತಿದ್ದಾರೆ.

ಈಶಾನ್ಯದ ಮಿತ್ರ ಪಕ್ಷಗಳ ಭಿನ್ನ ನಿಲುವು: ಈಶಾನ್ಯ ರಾಜ್ಯಗಳ ಎನ್‌ಡಿಎ ಮೈತ್ರಿಕೂಟದ ಹಲವು ಸದಸ್ಯರು ತಾವು ಸಿಎಎ ಅನುಷ್ಠಾನದ ಪರವಾಗಿಲ್ಲ ಎಂದು ಬಿಜೆಪಿಗೆ ತಿಳಿಸಿದ್ದಾರೆ. ಮೇಘಾಲಯದ ನ್ಯಾಶನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ),ʻ ಮಣಿಪುರ ಸಹಜ ಸ್ಥಿತಿಗೆ ಮರಳುವುದು ನಮ್ಮ ಆದ್ಯತೆ. ಇದು ಬಹಳ ಸಮಯ ತೆಗೆದುಕೊಳ್ಳುತ್ತಿದೆ. ಸಿಎಎ ನಮ್ಮ ಆದ್ಯತೆಯಲ್ಲ. ಏಕೆಂದರೆ, ಮೇಘಾಲಯದಲ್ಲಿ ಗಣನೀಯ ಸಂಖ್ಯೆಯ ಕ್ರಿಶ್ಚಿಯನ್ನರು ಇದ್ದಾರೆ. ಆದ್ದರಿಂದ ಸಿಎಎ ಅನುಷ್ಠಾನಕ್ಕೆ ಎನ್‌ಪಿಪಿ ಒಪ್ಪುವುದಿಲ್ಲʼ ಎಂದು ಮಣಿಪುರದ ಮಾಜಿ ಉಪಮುಖ್ಯಮಂತ್ರಿ ಯುಮ್ನಮ್ ಜಾಯ್ ಕುಮಾರ್ ʻಫೆಡರಲ್‌ʼಗೆ ತಿಳಿಸಿದರು.

ಈಶಾನ್ಯ ಭಾಗದ ಬಹುತೇಕ ಎನ್‌ಡಿಎ ಪಾಲುದಾರರಿಗೆ ಸಿಎಎ ಅನುಷ್ಠಾನ ಕಳವಳದ ವಿಷಯವಾಗಿದೆ. ಮಣಿಪುರದಲ್ಲಿ ಶಾಂತಿಗೆ ಆದ್ಯತೆ ನೀಡಬೇಕು ಎಂದು ಈಶಾನ್ಯ ಭಾಗದ ಎನ್‌ಡಿಎ ನಾಯಕರು ಕೇಂದ್ರ ಸರ್ಕಾರ ಮತ್ತು ಬಿಜೆಪಿ ನಾಯಕರಿಗೆ ಸ್ಪಷ್ಟವಾಗಿ ಹೇಳಿದ್ದಾರೆ. ʻಮಿಜೋರಾಂನಲ್ಲಿ ಸಿಎಎ ಜಾರಿಗೆ ತರಲಾಗುವುದಿಲ್ಲ ಎಂದು ಹೇಳಿದ್ದೇವೆ. ಇತರ ರಾಜ್ಯಗಳಲ್ಲಿ ಜಾರಿಗೆ ತಂದರೆ ಸಮಸ್ಯೆ ಇಲ್ಲ ʼ ಎಂದು ರಾಜ್ಯಸಭೆ ಸದಸ್ಯ ಮತ್ತು ಮಿಜೋ ನ್ಯಾಷನಲ್ ಫ್ರಂಟ್ (ಎಂಎನ್‌ಎಫ್) ನ ಹಿರಿಯ ನಾಯಕ ಕೆ. ವನ್‌ಲಾಲ್ವೆನಾ ʻಫೆಡರಲ್‌ʼಗೆ ತಿಳಿಸಿದರು.

ಬಿಜೆಪಿಗೆ ಸವಾಲಿನ ಸಮಯ: ಬಹುತೇಕ ಎನ್‌ಡಿಎ ಪಾಲುದಾರರು ಬಿಜೆಪಿಯ ಎರಡು ನಿರ್ಣಾಯಕ ನಿರ್ಧಾರಗಳನ್ನು ವಿರೋಧಿಸಿ ದ್ದಾರೆ. ಸಿಎಎ ಅಲ್ಲದೆ ಎನ್‌ಡಿಎ ಪಾಲುದಾರರನ್ನು ಕಾಡುತ್ತಿರುವ ಮತ್ತೊಂದು ವಿಷಯ, ಏಕರೂಪ ನಾಗರಿಕ ಸಂಹಿತೆ(ಯುಸಿಸಿ) ಅನುಷ್ಠಾನ.

ಬಿಜೆಪಿಯ ಸಿಎಎ ಪರ ನಿಲುವು ಅದನ್ನು ಒಕ್ಕೂಟದಲ್ಲಿ ಪಕ್ಷವನ್ನು ಒಂಟಿಯಾಗಿಸಬಹುದು ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ. ʻಬಿಜೆಪಿಯು ಸಿಎಎ ಪರ ಇರುವ ಏಕೈಕ ಪಕ್ಷ. ಬಿಜೆಪಿಗೆ ಈ ವಿಷಯದಲ್ಲಿ ಮೈತ್ರಿಕೂಟದ ಪಾಲುದಾರರಿಂದ ಬೆಂಬಲ ಸಿಗುತ್ತಿಲ್ಲ. ಎನ್‌ಡಿಎ ಪಾಲುದಾರರು ಸಿಎಎ ವಿರುದ್ಧ ಗಟ್ಟಿ ಧ್ವನಿಯಲ್ಲಿ ಮಾತನ್ನಾಡಿಲ್ಲ; ಏಕೆಂದರೆ, ಅವರು ಬಿಜೆಪಿಯನ್ನು ಅವಲಂಬಿಸಿದ್ದಾರೆ. ಆದರೆ, ರಾಜ್ಯ ಗಳಲ್ಲಿ ಬೆಂಬಲದ ಕೊರತೆ ಗೋಚರಿಸುತ್ತದೆ ”ಎಂದು ಸಿಎಸ್‌ಡಿಎಸ್‌ನ ಪ್ರಾಧ್ಯಾಪಕ ಅಭಯ್ ಕುಮಾರ್ ದುಬೆ ʻಫೆಡರಲ್‌ʼಗೆ ತಿಳಿಸಿದರು.

Read More
Next Story