NEET-UG 2024 ತೀರ್ಪು: ರಾಹುಲ್ ಗಾಂಧಿ ಕ್ಷಮೆಯಾಚಿಸುವರೇ?- ಬಿಜೆಪಿ
x

NEET-UG 2024 ತೀರ್ಪು: ರಾಹುಲ್ ಗಾಂಧಿ ಕ್ಷಮೆಯಾಚಿಸುವರೇ?- ಬಿಜೆಪಿ

ʻರಾಹುಲ್ ಪರೀಕ್ಷೆ ವ್ಯವಸ್ಥೆ ಮೇಲೆ ದಾಳಿ ನಡೆಸಲು ವಂಚನೆ ಎಂಬ ಪದ ಬಳಸಿದರು. ಈಗ ನ್ಯಾಯಾಲಯ ಪರೀಕ್ಷೆಯ ಪಾವಿತ್ರ್ಯದ ಉಲ್ಲಂಘನೆಯಾಗಿಲ್ಲ ಎಂದಿದೆ. ರಾಹುಲ್ ಗಾಂಧಿ ಈಗ ಕ್ಷಮೆ ಕೇಳುತ್ತಾರಾ...’ ಎಂದು ಪ್ರಶ್ನಿಸಿದರು.


ನೀಟ್-ಯುಜಿ ಮರುಪರೀಕ್ಷೆ ಇಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದ ಬಳಿಕ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಭಾರತದ ಪರೀಕ್ಷಾ ವ್ಯವಸ್ಥೆಯಲ್ಲಿ ಅಪನಂಬಿಕೆಯನ್ನು ಪ್ರೋತ್ಸಾಹಿಸಿದರು ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ಸುಪ್ರೀಂ ಕೋರ್ಟ್‌ ತೀರ್ಪಿನ ನಂತರ ರಾಹುಲ್ ಅವರು ಕ್ಷಮೆಯಾಚಿಸುವರೇ ಎಂದು ಬುಧವಾರ (ಜುಲೈ 24) ಬಿಜೆಪಿ ಪ್ರಶ್ನಿಸಿದೆ.

ನೀಟ್‌ ಪರೀಕ್ಷೆ ರದ್ದು ಮತ್ತು ಮರು ಪರೀಕ್ಷೆ ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ಮಂಗಳವಾರ ವಜಾಗೊಳಿಸಿದ ಸುಪ್ರೀಂ ಕೋರ್ಟ್‌, ಪರೀಕ್ಷೆಯ ಪಾವಿತ್ರ್ಯಕ್ಕೆ ಧಕ್ಕೆಯಾಗಿದೆ ಎಂದು ತೀರ್ಮಾನಿಸಲು ಯಾವುದೇ ಪುರಾವೆಗಳಿಲ್ಲ ಎಂದು ಹೇಳಿದೆ.

ಪರೀಕ್ಷೆಯ ದೂಷಣೆ: ಬಿಜೆಪಿ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು ತೀರ್ಪಿನ ನಂತರ ಪ್ರತಿಪಕ್ಷಗಳನ್ನು, ವಿಶೇಷವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಟೀಕಿಸಿದರು. ʻರಾಹುಲ್ ಅವರು ಬಳಸಿದ ಪದಗಳು ಸಂಸತ್ತಿನ ಘನತೆ ಮತ್ತು ಪ್ರತಿಪಕ್ಷ ನಾಯಕನ ಕಚೇರಿಯ ಘನತೆಗೆ ಧಕ್ಕೆ ತಂದಿದೆ,ʼ ಎಂದು ಪ್ರಸಾದ್ ಹೇಳಿದರು.

ಬಜೆಟ್ ಬಗ್ಗೆ ರಾಹುಲ್ ಅವರ ಟೀಕೆ ʻಕುರ್ಸಿ ಬಚಾವೋ ಬಜೆಟ್ʼಯನ್ನು ತಳ್ಳಿಹಾಕಿದ ಪ್ರಸಾದ್‌, ಚುನಾವಣೆಯಲ್ಲಿ ಜನರು ಅವರನ್ನು ಮತ್ತು ಅವರ ಪಕ್ಷವನ್ನು ಪದೇಪದೇ ತಿರಸ್ಕರಿಸಿದರೆ ಅದು ಬಿಜೆಪಿಯ ತಪ್ಪಲ್ಲ ಎಂದು ಹೇಳಿದರು.

ಸಿಬಿಐ ತನಿಖೆ: ʻಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿದೆ. 155 ಪರೀಕ್ಷಾರ್ಥಿಗಳ ಉಮೇದುವಾರಿಕೆಯನ್ನು ರದ್ದುಗೊಳಿಸಲಾಗಿದೆ. 57 1 ನಗರಗಳ 4,750 ಕೇಂದ್ರಗಳಲ್ಲಿ 23.5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದಾರೆ,ʼ ಎಂದು ಅವರು ಪರೀಕ್ಷೆಯ ಅಗಾಧತೆಯನ್ನು ಎತ್ತಿ ತೋರಿಸಿದರು.

ʻಪರೀಕ್ಷೆ ಮೇಲೆ ದಾಳಿ ನಡೆಸಲು ರಾಹುಲ್ ವಂಚನೆ ಎಂಬ ಪದ ಬಳಸಿದರು. ಈಗ ನ್ಯಾಯಾಲಯವು ಪರೀಕ್ಷೆಯ ಪಾವಿತ್ರ್ಯದ ಉಲ್ಲಂಘನೆಯಾಗಿಲ್ಲ ಎಂದಿದೆ. ರಾಹುಲ್ ಗಾಂಧಿ ಕ್ಷಮೆ ಕೇಳುತ್ತಾರಾ...’ ಎಂದು ಪ್ರಶ್ನಿಸಿದರು.

ʻಕಾಂಗ್ರೆಸ್ ನೇತೃತ್ವದ ಸರ್ಕಾರಗಳ ಅವಧಿಯಲ್ಲೂ ಪ್ರಶ್ನೆಪತ್ರಿಕೆಗಳು ಸೋರಿಕೆ ಆಗುತ್ತಿದ್ದವು. ಪ್ರಶ್ನೆಪೇಪರ್ ಸೋರಿಕೆ ವಿರುದ್ಧ ಮೋದಿ ಸರ್ಕಾರ ಬಲವಾದ ಕಾನೂನನ್ನು ಜಾರಿಗೆ ತಂದಿದೆ,ʼ ಎಂದು ಹೇಳಿದರು.

Read More
Next Story