
ಮನಮೋಹನ್ ಸಮಲ್( ಎಡ ಬದಿ)
ಒಡಿಶಾದಲ್ಲಿ ಬಿಜೆಪಿ ಏಕಾಂಗಿ ಸ್ಪರ್ಧೆ: ರಾಜ್ಯ ಮುಖ್ಯಸ್ಥ
ಭುವನೇಶ್ವರ, ಮಾ. 22- ಒಡಿಶಾದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಬಿಜೆಪಿ ರಾಜ್ಯ ಮುಖ್ಯಸ್ಥ ಮನಮೋಹನ್ ಸಮಾಲ್ ಶುಕ್ರವಾರ ಹೇಳಿದರು.
ಆಡಳಿತಾರೂಢ ಬಿಜೆಡಿ ಮತ್ತು ಪ್ರತಿಪಕ್ಷ ಬಿಜೆಪಿ ನಡುವೆ ಚುನಾವಣಾ ಪೂರ್ವ ಮೈತ್ರಿ ಮಾತುಕತೆ ನಡೆದಿದೆ. ಅಭಿವೃದ್ಧಿ ಹೊಂದಿದ ದೇಶ ಮತ್ತು ಅಭಿವೃದ್ಧಿ ಹೊಂದಿದ ಒಡಿಶಾವನ್ನು ರೂಪಿಸಲು ಬಿಜೆಪಿ 21 ಲೋಕಸಭೆ ಮತ್ತು 147 ವಿಧಾನಸಭೆ ಸ್ಥಾನಗಳಲ್ಲಿ ಏಕಾಂಗಿಯಾಗಿ ಹೋರಾಡಲಿದೆʼ ಎಂದು ಸಮಲ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
Next Story