ಸಂವಿಧಾನ ಬದಲಿಸುವ  ಧೈರ್ಯ ಬಿಜೆಪಿಗೆ ಇಲ್ಲ: ರಾಹುಲ್ ಗಾಂಧಿ
x
ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಟ್ಟಿಗೆ 'ನ್ಯಾಯ ಸಂಕಲ್ಪ ಪಾದಯಾತ್ರೆ'ಯಲ್ಲಿ ಪಾಲ್ಗೊಂಡಿದ್ದ ತುಷಾರ್‌ ಗಾಂಧಿ

ಸಂವಿಧಾನ ಬದಲಿಸುವ ಧೈರ್ಯ ಬಿಜೆಪಿಗೆ ಇಲ್ಲ: ರಾಹುಲ್ ಗಾಂಧಿ


ಭಾನುವಾರ (ಮಾ.17): ಆಡಳಿತಾರೂಢ ಬಿಜೆಪಿ ಬರೀ ʻಬಹಳ ಗದ್ದಲʼ ಮಾಡುತ್ತದೆಯೇ ಹೊರತು ಪಕ್ಷಕ್ಕೆ ಸಂವಿಧಾನವನ್ನು ಬದಲಾವಣೆ ಮಾಡುವ ಧೈರ್ಯ ಇಲ್ಲ. ಸತ್ಯ ಮತ್ತು ದೇಶದ ಜನರು ತಮ್ಮ ಪರವಾಗಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಇತ್ತೀಚೆಗೆ ನೀಡಿದ ಹೇಳಿಕೆಯನ್ನು ಖಂಡಿಸಿದ ಅವರು, ಕಾಂಗ್ರೆಸ್ ಮಾಡಿದ ವಿರೂಪಗಳು ಮತ್ತು ಅನಗತ್ಯ ಸೇರ್ಪಡೆಗಳನ್ನು ಸರಿಪಡಿಸಲು ಸಂವಿಧಾನಕ್ಕೆ ತಿದ್ದುಪಡಿ ಮಾಡಲು ಸಂಸತ್ತಿನ ಉಭಯ ಸದನಗಳಲ್ಲಿ ಪಕ್ಷಕ್ಕೆ ಮೂರನೇ ಎರಡರಷ್ಟು ಬಹುಮತದ ಅಗತ್ಯವಿದೆ ಎಂಬ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಅವರ ಹೇಳಿಕೆಯನ್ನು ಅವರು ಖಂಡಿಸಿದರು.

ಬಿಜೆಪಿ ಹೆಗ್ಡೆಯವರ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದ್ದು, ಇದು ಅವರ ವೈಯಕ್ತಿಕ ಅಭಿಪ್ರಾಯ ಎಂದು ಹೇಳಿದೆ.

ಮಹಾತ್ಮ ಗಾಂಧಿಯವರ ಮನೆಯಾದ ಮಣಿ ಭವನದಿಂದ ಆಗಸ್ಟ್ ಕ್ರಾಂತಿ ಮೈದಾನಕ್ಕೆ ‘ನ್ಯಾಯ ಸಂಕಲ್ಪ ಪಾದಯಾತ್ರೆ’ ಕೈಗೊಂಡ ನಂತರ ಮುಂಬೈನ ಸಭಾಂಗಣವೊಂದರಲ್ಲಿ ಮಾತನಾಡಿದರು.

ʻಬಿಜೆಪಿಯವರು ಗಲಾಟೆ ಮಾಡುತ್ತಾರೆಯೇ ಹೊರತು ಅವರಿಗೆ ಸಂವಿಧಾನವನ್ನು ಬದಲಾಯಿಸುವ ಧೈರ್ಯವಿಲ್ಲ. ಪ್ರಸ್ತುತ ಹೋರಾಟ ಇರುವುದು ಕೇವಲ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಅಲ್ಲ; ಬದಲಾಗಿ ಎರಡು ಅಭಿವ್ಯಕ್ತಿಗಳ ನಡುವೆʼ ಎಂದು ಹೇಳಿದರು.

ʻಸಕಲ ಜ್ಞಾನವನ್ನು ಹೊಂದಿರುವ ದೇಶವನ್ನುವ್ಯಕ್ತಿಯೊಬ್ಬರು ಕೇಂದ್ರೀಯವಾಗಿ ನಡೆಸಬೇಕು ಎನ್ನುತ್ತಾರೆ. ಆದರೆ, ನಾವು ಅಧಿಕಾರ ವಿಕೇಂದ್ರೀಕರಣವಾಗಬೇಕು ಮತ್ತು ಜನರ ಧ್ವನಿ ಕೇಳಬೇಕು ಎನ್ನುತ್ತೇವೆ. ಐಐಟಿ ಪದವಿ ಪಡೆದ ಮಾತ್ರಕ್ಕೆ ವ್ಯಕ್ತಿ ರೈತನಿಗಿಂತ ಹೆಚ್ಚು ಜ್ಞಾನಿಯಾಗುವುದಿಲ್ಲ. ಆದರೆ, ಬಿಜೆಪಿ ಈ ರೀತಿ ಭಾವಿಸುತ್ತದೆ,ʼ ಎಂದು ಹೇಳಿದರು.

ʻಪ್ರಧಾನಿ ಮತ್ತು ಆರ್‌ಎಸ್‌ಎಸ್‌ ಜ್ಞಾನ ವ್ಯಕ್ತಿ ಬಳಿ ಇರುತ್ತದೆ ಎಂಬ ದೃಷ್ಟಿಕೋನ ಹೊಂದಿವೆ. ರೈತರು, ಕಾರ್ಮಿಕರು ಮತ್ತು ನಿರುದ್ಯೋಗಿ ಯುವಕರಿಗೆ ಜ್ಞಾನವಿಲ್ಲಎಂದು ಭಾವಿಸಿವೆʼ ಎಂದು ಹೇಳಿದರು.

ಮುಂಬೈಯಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಅವರ ಸ್ಮಾರಕ 'ಚೈತ್ಯಭೂಮಿ'ಗೆ ನಮನ ಸಲ್ಲಿಸುವ ಮೂಲಕ ಮತ್ತು ಸಂವಿಧಾನದ ಮುನ್ನುಡಿಯನ್ನು ಓದುವ ಮೂಲಕ 63 ದಿನಗಳ 'ಭಾರತ್ ಜೋಡೋ ನ್ಯಾಯ್ ಯಾತ್ರೆ' ಮುಕ್ತಾಯಗೊಂಡಿತು. ಯಾತ್ರೆ ಜನವರಿ 14 ರಂದು ಮಣಿಪುರದಿಂದ ಪ್ರಾರಂಭವಾಯಿ

Read More
Next Story