ಭೂವಿವಾದ ಹಿನ್ನೆಲೆ: ಹರಿಯಾಣದ ಬಿಜೆಪಿ ನಾಯಕನ ಗುಂಡು ಹಾರಿಸಿ ಹತ್ಯೆ
x

ಭೂವಿವಾದ ಹಿನ್ನೆಲೆ: ಹರಿಯಾಣದ ಬಿಜೆಪಿ ನಾಯಕನ ಗುಂಡು ಹಾರಿಸಿ ಹತ್ಯೆ

ಬಿಜೆಪಿ ನಾಯಕನನ್ನು ಶುಕ್ರವಾರ ರಾತ್ರಿ ಅಟ್ಟಾಡಿಕೊಂಡು ಬಂದ ಪಕ್ಕದ ಮನೆಯ ಮೋನು ಎಂಬ ವ್ಯಕ್ತಿಯು, ಅಂಗಡಿಯೊಂದರಲ್ಲಿ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ. ಈ ಘಟನೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.


ಭೂಮಿ ವಿವಾದದ ಹಿನ್ನೆಲೆಯಲ್ಲಿ ಹರಿಯಾಣದ ಸೋನಿಪತ್​ನಲ್ಲಿ ಬಿಜೆಪಿ ನಾಯಕನೊಬ್ಬನನ್ನು ಪಕ್ಕದ ಮನೆಯ ವ್ಯಕ್ತಿ ಗುಂಡು ಹಾರಿಸಿ ಕೊಂದಿದ್ದಾನೆ. ಸುರೇಂದ್ರ ಜವಾಹರ್ ಎಂಬ ಬಿಜೆಪಿ ನಾಯಕನನ್ನು ಶುಕ್ರವಾರ ರಾತ್ರಿ ಅಟ್ಟಾಡಿಕೊಂಡು ಬಂದ ಪಕ್ಕದ ಮನೆಯ ಮೋನು ಎಂಬ ವ್ಯಕ್ತಿಯು, ಅಂಗಡಿಯೊಂದರಲ್ಲಿ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ. ಈ ಘಟನೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಘಟನೆಯು ಶುಕ್ರವಾರ ರಾತ್ರಿ 9:30 ರ ಸುಮಾರಿಗೆ ನಡೆದಿದೆ. ತುಂಬ ದೂರದಿಂದ ಜವಾಹರ್ ಅವರನ್ನು ಹಿಂಬಾಲಿಸಿದ ಮೋನು, ಅಂಗಡಿಯೊಂದಕ್ಕೆ ನುಗ್ಗಿದ ಜವಾಹರ್ ಮೇಲೆ ಗುಂಡು ಹಾರಿಸಿದ್ದಾನೆ. "ನನ್ನನ್ನು ಸಾಯಿಸುತ್ತಿದ್ದಾನೆ. ಸಹಾಯ ಮಾಡಿ!" ಎಂದು ಬಿಜೆಪಿ ನಾಯಕ ಕೂಗಿದ್ದಾರೆ. ಆಗ ಮೋನುವನ್ನು ಇಬ್ಬರು-ಮೂವರು ಜನರು ಹಿಡಿದು ಎಳೆಯಲು ಯತ್ನಿಸಿದ್ದಾರೆ. ಆದರೆ, ಮೋನು ಗುಂಡು ಹಾರಿಸಿ ಜವಾಹರ್ ಅವರನ್ನು ಕೊಂದಿದ್ದಾನೆ.

ಶನಿವಾರ ಬೆಳಗ್ಗೆ ಪೊಲೀಸರು ಮೋನುವನ್ನು ಬಂಧಿಸಿದ್ದಾರೆ. ಮೋನುವಿನ ಚಿಕ್ಕಪ್ಪ ಮತ್ತು ಚಿಕ್ಕಮ್ಮನವರ ಭೂಮಿಯನ್ನು ಬಿಜೆಪಿ ನಾಯಕ ಜವಾಹರ್ ಖರೀದಿಸಿದ್ದರು. ಇದರಿಂದಾಗಿ ಮೋನು ಜವಾಹರ್ ಮೇಲೆ ಕುಪಿತಗೊಂಡಿದ್ದ. "ನನ್ನ ಚಿಕ್ಕಪ್ಪ-ಚಿಕ್ಕಮ್ಮನವರ ಜಮೀನಿನಲ್ಲಿ ನೀನು ಕಾಲಿಡುವಂತಿಲ್ಲ" ಎಂದು ಮೋನು ಜವಾಹರ್‌ಗೆ ಎಚ್ಚರಿಕೆ ನೀಡಿದ್ದ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಮೋನು ಎಚ್ಚರಿಕೆ ನೀಡಿದ ನಂತರ, ಜವಾಹರ್ ಅವರು ಸಮಸ್ಯೆ ಬಗೆಹರಿಸಿಕೊಳ್ಳಲು ಮೋನುವಿನ ಚಿಕ್ಕಪ್ಪ ಮತ್ತು ಚಿಕ್ಕಮ್ಮನವರನ್ನು ಭೇಟಿಯಾಗಿದ್ದರು. ಆ ಸಮಯದಲ್ಲಿ ಮೋನು ಮತ್ತು ಜವಾಹರ್‌ನ ನಡುವೆ ವಾಗ್ವಾದ ನಡೆದಿದೆ. ಇದರ ನಂತರ, ಮೋನು ಜವಾಹರ್ ಅವರನ್ನು ಅಟ್ಟಾಡಿಕೊಂಡು ಹೋಗಿ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Read More
Next Story