ವಯನಾಡು:  ರಾಹುಲ್ ಗಾಂಧಿ ವಿರುದ್ಧ ಸುರೇಂದ್ರನ್ ಕಣಕ್ಕೆ
x

ವಯನಾಡು: ರಾಹುಲ್ ಗಾಂಧಿ ವಿರುದ್ಧ ಸುರೇಂದ್ರನ್ ಕಣಕ್ಕೆ


ತಿರುವನಂತಪುರಂ, ಮಾ.25- ವಯನಾಡ್ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ರಾಜ್ಯ ಮುಖ್ಯಸ್ಥ ಕೆ. ಸುರೇಂದ್ರನ್ ಅವರನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಕಣಕ್ಕಿಳಿಸಿದೆ.

ಕಾಂಗ್ರೆಸ್ ಭದ್ರಕೋಟೆಯಾಗಿರುವ ವಯನಾಡಿನಲ್ಲಿ ಸುರೇಂದ್ರನ್ ಅವರ ಅನಿರೀಕ್ಷಿತ ಉಮೇದುವಾರಿಕೆ ಮೂಲಕ ಬಿಜೆಪಿ ತನ್ನ ಎದುರಾಳಿಗಳಿಗೆ ಪ್ರತ್ಯುತ್ತರ ನೀಡಲು ಪ್ರಯತ್ನಿಸುತ್ತಿದೆ. ಸಿಪಿಐನ ಅನ್ನಿ ರಾಜಾ ಆಡಳಿತಾರೂಢ ಎಡ ಪಕ್ಷಗಳ ಅಭ್ಯರ್ಥಿ. ಈ ಹಿಂದೆ ಶಬರಿಮಲೆಗೆ ಮಹಿಳೆಯರ ಪ್ರವೇಶ ವಿರುದ್ಧ ಕೇಸರಿ ಪಕ್ಷ ನಡೆಸಿದ ತೀವ್ರ ಆಂದೋಲನದಲ್ಲಿದ್ದ ಸುರೇಂದ್ರನ್, 2020 ರಿಂದ ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಶ್ರೀಶಂಕರ ಸಂಸ್ಕೃತ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಕೆ.ಎಸ್. ರಾಧಾಕೃಷ್ಣನ್ ಅವರನ್ನು ಎರ್ನಾಕುಲಂ ಮತ್ತು ನಟ-ರಾಜಕಾರಣಿ ಜಿ.ಕೃಷ್ಣಕುಮಾರ್ ಕೊಲ್ಲಂ ಮತ್ತು ಸರ್ಕಾರಿ ಕಾಲೇಜು ಮಾಜಿ ಪ್ರಾಂಶುಪಾಲ ಟಿ.ಎನ್.ಸರಸು ಅವರು ಉತ್ತರ ಪಾಲಕ್ಕಾಡ್ ಜಿಲ್ಲೆಯ ಆಲತ್ತೂರಿನಿಂದ ಸ್ಪರ್ಧಿಸಲಿದ್ದಾರೆ.

ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮತ್ತು ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್ ಪ್ರಾಬಲ್ಯವನ್ನು ಮುರಿಯಲು ಬಿಜೆಪಿ ಶ್ರಮಿಸುತ್ತಿದೆ. ಪಕ್ಷ 12 ಸ್ಥಾನಗಳಲ್ಲಿ ಹಾಗೂ ಮಿತ್ರ ಪಕ್ಷ ಬಿಡಿಜೆಎಸ್ ನಾಲ್ಕು ಸ್ಥಾನಗಳಲ್ಲಿ ಸ್ಪರ್ಧಿಸಲಿವೆ.

ಭಾರತೀಯ ಜನತಾ ಯುವ ಮೋರ್ಚಾದ ವಯನಾಡ್ ಜಿಲ್ಲಾಧ್ಯಕ್ಷರಾಗಿ ವೃತ್ತಿಜೀವನ ಆರಂಭಿಸಿದ ಕೋಝಿಕೋಡ್ ಜಿಲ್ಲೆ ಉಲ್ಲೆಯೇರಿಯ ಕುನ್ನುಮ್ಮೆಲ್ ಸುರೇಂದ್ರನ್, 2019 ರ ಲೋಕಸಭೆ ಚುನಾವಣೆಯಲ್ಲಿ ಪತ್ತನಂತಿಟ್ಟದಿಂದ ಸ್ಪರ್ಧಿಸಿ ವಿಫಲರಾಗಿದ್ದರು. ಅದೇ ವರ್ಷ ವಿಧಾನಸಭೆ ಉಪಚುನಾವಣೆಯಲ್ಲಿ ಕೊಣ್ಣಿಯಿಂದ ಹಾಗೂ 2016 ರ ವಿಧಾನಸಭೆ ಚುನಾವಣೆಯಲ್ಲಿ ಮಂಜೇಶ್ವರಂ ಕ್ಷೇತ್ರದಲ್ಲಿ ಕೇವಲ 89 ಮತಗಳಿಂದ ಸೋಲುಂಡರು.

ಯುಡಿಎಫ್ ಸರ್ಕಾರದ ಅವಧಿಯಲ್ಲಿ ಕಾಲಡಿಯ ಶ್ರೀ ಶಂಕರ ಸಂಸ್ಕೃತ ವಿಶ್ವವಿದ್ಯಾಲಯದ ಉಪಕುಲಪತಿ, ಲೋಕಸೇವಾ ಆಯೋಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಕೆ.ಎಸ್. ರಾಧಾಕೃಷ್ಣನ್, 2019 ರಲ್ಲಿ ಬಿಜೆಪಿ ಸೇರಿದರು. 2019 ರ ಲೋಕಸಭೆ ಚುನಾವಣೆಯಲ್ಲಿ ಅಲಪ್ಪುಳ ಕ್ಷೇತ್ರದಿಂದ ಸ್ಪರ್ಧಿಸಿ ವಿಫಲರಾಗಿದ್ದರು.

ಜಿ. ಕೃಷ್ಣಕುಮಾರ್(55) ನಟ-ರಾಜಕಾರಣಿ, ಬಿಜೆಪಿಯ ರಾಷ್ಟ್ರೀಯ ಕೌನ್ಸಿಲ್ ಸದಸ್ಯ. 2021 ರಲ್ಲಿ ತಿರುವನಂತಪುರದಿಂದ ವಿಧಾನಸಭೆಗೆ ಸ್ಪರ್ಧಿಸಿದ್ದರು.

Read More
Next Story