ಚುನಾವಣೆ 2024: ಸೋತ ಪ್ರಮುಖ ಮುಖಂಡರು
x

ಚುನಾವಣೆ 2024: ಸೋತ ಪ್ರಮುಖ ಮುಖಂಡರು


ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರನ್ನು 1.5 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ ಕಾಂಗ್ರೆಸ್‌ನ ಅಮೇಥಿ ಲೋಕಸಭೆ ಅಭ್ಯರ್ಥಿ ಕಿಶೋರಿ ಲಾಲ್ ಶರ್ಮಾ ಅವರು ಮಹತ್ತರ ಸಾಧನೆ ಮಾಡಿದ್ದಾರೆ. 2019ರಲ್ಲಿ ಈ ಕ್ಷೇತ್ರದಿಂದ ರಾಹುಲ್ ಗಾಂಧಿಯನ್ನು ಇರಾನಿ ಅವರು ಸೋಲಿಸಿದ್ದರು. ಚುನಾವಣೆ ಆಯೋಗದ ಅಂಕಿಅಂಶಗಳ ಪ್ರಕಾರ, ಶರ್ಮಾ 5,39,228 ಮತ ಹಾಗೂ ಇರಾನಿ 3,72,032 ಮತ ಪಡೆದಿದ್ದಾರೆ.

ಪಶ್ಚಿಮ ಬಂಗಾಳದ ಬಹರಂಪುರ ಕ್ಷೇತ್ರದಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿದ್ದ ತೃಣಮೂಲ ಕಾಂಗ್ರೆಸ್‌ನ ಯೂಸುಫ್ ಪಠಾಣ್ ಅವರು ಕಾಂಗ್ರೆಸ್ ಹಿರಿಯ ನಾಯಕ ಅಧೀರ್ ರಂಜನ್ ಚೌಧರಿ ಅವರನ್ನು ಪರಾಜಯಗೊಳಿಸಿದ್ದಾರೆ. ಮಾಜಿ ಕ್ರಿಕೆಟಿಗ ಪಠಾಣ್‌, 17 ನೇ ಲೋಕಸಭೆಯಲ್ಲಿ ಪಕ್ಷದ ನಾಯಕ ಮತ್ತು ಆರು ಬಾರಿ ಸಂಸದ ಚೌಧರಿ ಅವರನ್ನು 85,022 ಮತಗಳಿಂದ ಸೋಲಿಸಿದರು.

ಉತ್ತರ ಪ್ರದೇಶದಲ್ಲಿ ಕೇಂದ್ರ ಸಚಿವ ಮತ್ತು ಖೇರಿಯಿಂದ ಎರಡು ಬಾರಿ ಸಂಸದರಾಗಿದ್ದ ಅಜಯ್ ಕುಮಾರ್ ತೇನಿ ಅವರು ಸಮಾಜವಾದಿ ಪಕ್ಷದ (ಎಸ್‌ಪಿ) ಉತ್ಕರ್ಷ್ ವರ್ಮಾ ಮಧುರ್ ವಿರುದ್ಧ 34,329 ಮತಗಳಿಂದ ಸೋತಿದ್ದಾರೆ.

ಬಿಜೆಪಿಯ ಹಿರಿಯ ನಾಯಕಿ ಮತ್ತು ಮಾಜಿ ಕೇಂದ್ರ ಸಚಿವೆ ಮೇನಕಾ ಗಾಂಧಿ ಅವರು ಸುಲ್ತಾನ್‌ಪುರ ಕ್ಷೇತ್ರದಲ್ಲಿ ಎಸ್‌ಪಿ ಅಭ್ಯರ್ಥಿ ರಾಮ್‌ಭುವಲ್ ನಿಶಾದ್ ವಿರುದ್ಧ 43,174 ಮತಗಳಿಂದ ಸೋಲುಂಡಿದ್ದಾರೆ.

ಬಿಜೆಪಿಯ ತಮಿಳುನಾಡು ಅಧ್ಯಕ್ಷ ಅಣ್ಣಾಮಲೈ ಕುಪ್ಪುಸಾಮಿ ಕೊಯಮತ್ತೂರಿನಲ್ಲಿ ಡಿಎಂಕೆಯ ಪಿ. ಗಣಪತಿ ರಾಜ್‌ಕುಮಾರ್ ವಿರುದ್ಧ 1,18,068 ಮತಗಳಿಂದ ಸೋತಿದ್ದಾರೆ.

Read More
Next Story