ಭಾರತ್ ಡೋಜೋ ಯಾತ್ರೆ: ಯುವಜನರಿಗೆ ಸಮರ ಕಲೆ ತರಬೇತಿಗೆ ಮುಂದಾದ ರಾಹುಲ್‌ ಗಾಂಧಿ
x
ಜಿಯು-ಜಿಟ್ಸು ತರಬೇತುದಾರ ಅರುಣ್ ಶರ್ಮಾ ಅವರೊಂದಿಗೆ ರಾಹುಲ್‌ ಗಾಂಧಿ

ಭಾರತ್ ಡೋಜೋ ಯಾತ್ರೆ: ಯುವಜನರಿಗೆ ಸಮರ ಕಲೆ ತರಬೇತಿಗೆ ಮುಂದಾದ ರಾಹುಲ್‌ ಗಾಂಧಿ

ಭಾರತ್ ಡೋಜೋ ಯಾತ್ರೆ ಕುರಿತು ರಾಹುಲ್ ಅವರು ಹೆಚ್ಚಿನ ಮಾಹಿತಿ ಬಹಿರಂಗಪಡಿಸಿಲ್ಲ. ಆದರೆ, ಮುಂದಿನ ತಿಂಗಳಿನಿಂದ ವಿಧಾನಸಭಾ ಚುನಾವಣೆಗಳು ಆರಂಭವಾಗಲಿದೆ. ಇಂಥ ಸಮಯದಲ್ಲಿ ಮಕ್ಕಳಿಗೆ ಸಮರ ಕಲೆಗಳನ್ನು ಕಲಿಸಲು ಮತ್ತೊಂದು ಯಾತ್ರೆಯನ್ನು ಕೈಗೊಳ್ಳಲಿದ್ದಾರೆಯೇ ಎಂಬ ಕುತೂಹಲ ಮೂಡಿದೆ.


ʻಭಾರತ್ ಡೋಜೋ ಯಾತ್ರೆʼಯ ಸಮಗ್ರ ವಿವರ ಇನ್ನೂ ಲಭ್ಯವಿಲ್ಲ. ಆದರೆ, ಎಲ್ಲವೂ ಯೋಜನಾಬದ್ಧವಾಗಿ ನಡೆದರೆ, ರಾಹುಲ್ ಗಾಂಧಿ ಅವರು ವಿವಿಧ ಸಾಂಪ್ರದಾಯಿಕ ಮತ್ತು ಆಧುನಿಕ ಜಪಾನಿ ಸಮರ ಕಲೆಗಳ ಸಂಯೋಜನೆಯಾದ ಜಿಯು-ಜಿಟ್ಸುನಲ್ಲಿ ದೇಶಾದ್ಯಂತ ಯುವಕರ ಗುಂಪುಗಳಿಗೆ ತರಬೇತಿ ನೀಡುವುದನ್ನು ಶೀಘ್ರದಲ್ಲೇ ನೋಡಬಹುದಾಗಿದೆ.

ಜಿಯು-ಜಿಟ್ಸುನಲ್ಲಿ ನೀಲಿ ಬೆಲ್ಟ್ ಗಳಿಸಿರುವ ಮತ್ತು ಕ್ರೀಡೆಗಳಲ್ಲಿ ತೀವ್ರ ಆಸಕ್ತಿಯಿರುವ ರಾಹುಲ್‌ ಗಾಂಧಿ ಅವರು ರಾಷ್ಟ್ರೀಯ ಕ್ರೀಡಾ ದಿನದ (ಆಗಸ್ಟ್ 29)ದಂದು ಈ ಸಂಬಂಧ ಎಕ್ಸ್‌ ನಲ್ಲಿ ಬರೆದಿದ್ದಾರೆ.

ʻಭಾರತ್ ಜೋಡೋ ನ್ಯಾಯ್ ಯಾತ್ರೆ ಸಮಯದಲ್ಲಿ ಸಾವಿರಾರು ಕಿಲೋಮೀಟರ್‌ ಪ್ರಯಾಣಿಸುತ್ತಿದ್ದಾಗ, ನಮ್ಮ ಶಿಬಿರಗಳಲ್ಲಿ ಪ್ರತಿದಿನ ಸಂಜೆ ಜಿಯು-ಜಿಟ್ಸು ಅಭ್ಯಾಸ ಮಾಡುತ್ತಿದ್ದೆವು. ದೈಹಿಕವಾಗಿ ಸಮರ್ಥರಾಗಿರಲು ಆರಂಭಿಸಿದ ಇದು ಕ್ರಮೇಣ ಸಮುದಾಯದ ಚಟುವಟಿಕೆಯಾಗಿ ಬೆಳೆಯಿತು. ನಾವು ಉಳಿದುಕೊಂಡಿದ್ದ ಪಟ್ಟಣಗಳ ಸಮರಕಲೆ ವಿದ್ಯಾರ್ಥಿಗಳು ಹಾಗೂ ಸಹಯಾತ್ರಿಗಳನ್ನು ಒಟ್ಟುಗೂಡಿಸಿತು,ʼ ಎಂದು ಬರೆದಿದ್ದಾರೆ.

ರಾಹುಲ್ ಮತ್ತು ಜಿಯು-ಜಿಟ್ಸು ತರಬೇತುದಾರ ಅರುಣ್ ಶರ್ಮಾ ಅವರು ಸ್ವಯಂಸೇವಕರೊಂದಿಗಿನ ವಿಡಿಯೋ ಒಳಗೊಂಡಿರುವ ಪೋಸ್ಟ್, ʻಇದು ಧ್ಯಾನ, ಜಿಯು-ಜಿಟ್ಸು, ಐಕಿಡೊ ಮತ್ತು ಅಹಿಂಸಾತ್ಮಕ ಸಂಘರ್ಷ ಪರಿಹಾರ ತಂತ್ರಗಳ ಮಿಶ್ರಣ. ಹಿಂಸೆಯನ್ನು ಸೌಮ್ಯತೆಯಾಗಿ ಪರಿವರ್ತಿಸುವ ಮೂಲಕ ಸಹಾನುಭೂತಿ ಮತ್ತು ಸುರಕ್ಷಿತ ಸಮಾಜವನ್ನು ನಿರ್ಮಿಸಲು ಅವರಿಗೆ ಸಾಧನಗಳನ್ನು ನೀಡುತ್ತೇವೆ,ʼ ಎಂದು ಬರೆದಿದ್ದಾರೆ.

ʻನಮ್ಮ ಅನುಭವವನ್ನು ಹಂಚಿಕೊಳ್ಳಲು ಬಯಸುತ್ತೇನೆ. ನಿಮ್ಮಲ್ಲಿ ಕೆಲವರಾದರೂ ಈ ಸೌಮ್ಯ ಕಲೆಯನ್ನು ಅನುಸರಿಸಲು ಪ್ರೇರೇಪಿಸುವ ಆಶಯವಿದೆ ,ʼ ಎಂದಿದ್ದಾರೆ. ಕೊನೆಯಲ್ಲಿ, ʻಪಿಎಸ್: ಭಾರತ್ ದೋಜೋ ಯಾತ್ರೆ ಶೀಘ್ರದಲ್ಲೇ ಬರಲಿದೆʼ ಎಂದು ಬರೆದಿದ್ದಾರೆ.

ಮತ್ತೊಂದು ಯಾತ್ರೆ ಹೊರಟಿದೆಯೇ?

ಜಪಾನಿ ಭಾಷೆಯಲ್ಲಿ ಜು ಅಥವಾ ಜಿಯು ಎಂದರೆ ಸೌಮ್ಯತೆ ಮತ್ತು ಜಿಟ್ಸು ಎಂದರೆ ಕಲೆ. ಡೋಜೋ ಎಂದರೆ ಸಾಂಪ್ರದಾಯಿಕ ಕುಸ್ತಿ ಅಂಕಣ. ಅಂಕಣದಲ್ಲಿ ಮಣ್ಣು ಮತ್ತು ಮರಳಿನ ಬದಲು ಚಾಪೆಗಳಿರುತ್ತದೆ.

ಭಾರತ್ ಡೋಜೋ ಯಾತ್ರೆ ಕುರಿತು ರಾಹುಲ್ ಅವರು ಹೆಚ್ಚಿನ ಮಾಹಿತಿ ಬಹಿರಂಗಪಡಿಸಿಲ್ಲ. ಆದರೆ, ಮುಂದಿನ ತಿಂಗಳಿನಿಂದ ವಿಧಾನಸಭಾ ಚುನಾವಣೆಗಳು ಆರಂಭವಾಗಲಿದೆ. ಇಂಥ ಸಮಯದಲ್ಲಿ ಮಕ್ಕಳಿಗೆ ಸಮರ ಕಲೆಗಳನ್ನು ಕಲಿಸಲು ಮತ್ತೊಂದು ಯಾತ್ರೆಯನ್ನು ಕೈಗೊಳ್ಳಲಿದ್ದಾರೆಯೇ ಎಂಬ ಕುತೂಹಲ ಮೂಡಿದೆ.

ʻಈ ನವೀನ ಸಾರ್ವಜನಿಕ ಸಂಪರ್ಕ ಕಾರ್ಯಕ್ರಮಕ್ಕೆ ಅವರು ಯಾವುದೇ ಕಾಲದ ಚೌಕಟ್ಟು ವಿಧಿಸಿಲ್ಲʼ ಎಂದು ಕಾಂಗ್ರೆಸ್ ಮೂಲಗಳು ದಿ ಫೆಡರಲ್‌ಗೆ ತಿಳಿಸಿವೆ. .

'ಮೋಜಿನ ಉಪಕ್ರಮ'

: ʻಈ ಉಪಕ್ರಮವು ಭಾರತ್ ಜೋಡೋ ಯಾತ್ರೆ ಅಥವಾ ಭಾರತ್ ಜೋಡೋ ನ್ಯಾಯ್ ಯಾತ್ರೆಯಂತೆ ಇರುವುದಿಲ್ಲ. ಯಾವುದೇ ನಿಶ್ಚಿತ ಮಾರ್ಗ ಅಥವಾ ಕಾಲದ ಪರಿಮಿತಿ ಒಳಗೊಂಡಿರುವುದಿಲ್ಲ.ಜಿಯು-ಜಿಟ್ಸು ತರಬೇತಿ ಶಿಬಿರ ನಡೆಸಲು ಕಾಂಗ್ರೆಸ್ ನಾಯಕರು ಮತ್ತು ಸ್ವಯಂಸೇವಕರ ಪರಿವಾರದೊಂದಿಗೆ ನಗರದಿಂದ ನಗರಕ್ಕೆ ಅವರು ಪ್ರಯಾಣಿಸುವುದಿಲ್ಲ,ʼಎಂದು ಕಾಂಗ್ರೆಸ್‌ನ ಹಿರಿಯ ಕಾರ್ಯಕಾರಿ ಮತ್ತು ರಾಹುಲ್‌ನ ಆಪ್ತರೊಬ್ಬರು ಹೇಳಿದ್ದಾರೆ.

ʻರಾಹುಲ್ ಒಂದು ದಿನಕ್ಕಿಂತ ಹೆಚ್ಚು ಕಾಲ ಯಾವುದೇ ರಾಜ್ಯಕ್ಕೆ ಭೇಟಿ ನೀಡಿದಾಗ, ಅವರ ತಂಡ ಮತ್ತು ಸ್ಥಳೀಯ ಕಾಂಗ್ರೆಸ್ ಘಟಕಗಳು ಶಾಲೆಗೆ ಹೋಗುವ ಮಕ್ಕಳು ಸೇರಿದಂತೆ ಯುವಜನರಿಗೆ ಶಿಬಿರವನ್ನು ಆಯೋಜಿಸುವ ಸಾಧ್ಯತೆಯಿದೆ. ಯಾವುದೇ ನಿಗದಿತ ಕಾಲಮಿತಿಯಿಲ್ಲ ದೀರ್ಘಕಾಲೀನ ಉಪಕ್ರಮವಾಗಿದೆ,ʼ ಎಂದರು.

ʻಈ ಮೋಜಿನ ಉಪಕ್ರಮವು ದೇಶಾದ್ಯಂತದ ವಿವಿಧ ಯುವಕರ ಗುಂಪುಗಳನ್ನು ಭೇಟಿ ಮಾಡಲು ಮತ್ತು ಸಂವಾದಿಸಲು, ಸಮರ ಕಲೆಗಳ ಮೂಲಕ ಅವರೊಂದಿಗೆ ಬಾಂಧವ್ಯವನ್ನು ಬೆಳೆಸಲು ಅವಕಾಶ ನೀಡುತ್ತದೆ. ಇದೇ ಸಮಯದಲ್ಲಿ ರಾಹುಲ್‌ ತಮ್ಮ ದೃಷ್ಟಿಕೋನವನ್ನು ಹಂಚಿಕೊಳ್ಳುತ್ತಾರೆ ಮತ್ತು ಯುವಜನರು ಏನು ಹೇಳುತ್ತಾರೆ ಎಂದು ಕೇಳಿಸಿಕೊಳ್ಳುತ್ತಾರೆ,ʼ ಎಂದರು.

ಸುರಕ್ಷತೆ, ಸಂಘರ್ಷ ಪರಿಹಾರ

ಶಿಬಿರಗಳು ಮಹಿಳೆಯರು ಮತ್ತು ಬಾಲಕಿಯರಿಗೆ ಮುಕ್ತವಾಗಿರುತ್ತವೆ. ಈ ಅಧಿವೇಶನಗಳಲ್ಲಿ ಕೇವಲ ಜಿಯು-ಜಿಟ್ಸು ಮಾತ್ರವಲ್ಲದೆ, ಮಹಿಳೆಯರ ಸುರಕ್ಷತೆ, ಲಿಂಗ ಸಂವೇದನೆ, ಆತ್ಮರಕ್ಷಣೆ ಮತ್ತು ಸಂಘರ್ಷ ಪರಿಹಾರ ಕುರಿತು ತಿಳಿಸಿಕೊಡಲಾಗುತ್ತದೆ.

ʻರಾಹುಲ್‌ ಭಾರತ್ ಜೋಡೋ ಯಾತ್ರೆ(ಸೆಪ್ಟೆಂಬರ್ 2022 ಮತ್ತು ಜನವರಿ 2023 ರ ನಡುವೆ)ಯನ್ನು ಪ್ರಾರಂಭಿಸಿದಾಗ ಜನಸಾಮಾನ್ಯರು ಮತ್ತು ದೇಶದ ರಾಜಕಾರಣಿಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ಬಯಸುವುದಾಗಿ ಹೇಳಿದ್ದರು. ಅಂದಿನಿಂದ, ಅವರ ಧ್ಯೇಯ ಒಂದೇ; ಬಿಜೆವೈ, ನ್ಯಾಯ್ ಯಾತ್ರೆ ಅಥವಾ ವಿದ್ಯಾರ್ಥಿಗಳು, ರೈತರು, ಲೋಕೋ ಪೈಲಟ್‌ಗಳು ಮತ್ತು ಇತರರೊಂದಿಗೆ ಅವರ ಸಂವಾದ ಆಗಿರಲಿ; ರಾಹುಲ್ ನಿರಂತರವಾಗಿ ಜನರೊಂದಿಗೆ ತೊಡಗಿಸಿಕೊಂಡಿದ್ದಾರೆ,ʼ ಎಂದು ಕಾಂಗ್ರೆಸ್ ಮಾಧ್ಯಮ ತಂಡದ ಅಂಶುಲ್ ತ್ರಿವೇದಿ ದ ಫೆಡರಲ್‌ಗೆ ತಿಳಿಸಿದರು.

ರಾಹುಲ್ ಅವರ ಜೊತೆಗೆ ನಡೆದ 100 ಕ್ಕೂ ಹೆಚ್ಚು ಭಾರತ್ ಯಾತ್ರಿಗಳ ಪೈಕಿ ಒಬ್ಬರಾದ ತ್ರಿವೇದಿ, ʻಅವರ ವಿಡಿಯೋ ನೋಡಿದ ಯಾರಾದರೂ, ಅವರು ರಾಜಕಾರಣಿಗಳ ಸಹವಾಸಕ್ಕಿಂತ ಹೆಚ್ಚು ಜನರ ನಡುವೆ ಇರುತ್ತಾರೆ ಎಂದು ಹೇಳಬಹುದು. ಭಾರತ್ ಡೋಜೋ ಯಾತ್ರೆಯು ಹೆಚ್ಚು ಮೋಜಿನ ಸಂಗತಿಯಂತೆ ಕಾಣುತ್ತದೆ. ರಾಹುಲ್ ಗಾಂಧಿ ಅವರನ್ನು ಸಮರ ಕಲೆ ಗುರುವಾಗಿ ಹೊಂದುವ ಅವಕಾಶವನ್ನು ಯಾರು ಕಳೆದುಕೊಳ್ಳಲು ಬಯಸುತ್ತಾರೆ?ʼ ಎಂದು ಪ್ರಶ್ನಿಸುತ್ತಾರೆ.

Read More
Next Story