IPL 2024|  RCB vs CSK ಪಂದ್ಯದ ಮೇಲೆ ಮಳೆ ಪರಿಣಾಮ ಬೀರಲಿದೆಯೇ?
x

IPL 2024| RCB vs CSK ಪಂದ್ಯದ ಮೇಲೆ ಮಳೆ ಪರಿಣಾಮ ಬೀರಲಿದೆಯೇ?

ಇಂದು ಮಧ್ಯಾಹ್ನ 1 ಗಂಟೆಗೆ ಬೆಂಗಳೂರಿನ ಕೆಲವೆಡೆ ತುಂತುರು ಮಳೆಯಾಗಿದೆ. ಆದರೆ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಳೆಯಾಗಿಲ್ಲ


ಮೇ 18: ಐಪಿಎಲ್ 2024 ರಲ್ಲಿ ಶನಿವಾರ ದೊಡ್ಡ ದಿನವಾಗಿದೆ. ನಗರದಲ್ಲಿ ಮಳೆಯ ಭೀತಿ ನಡುವೆಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ. ಪಂದ್ಯ ಶನಿವಾರ ಸಂಜೆ 7:30ಕ್ಕೆ ಆರಂಭವಾಗಲಿದೆ.

ಆರ್‌ ಸಿಬಿ ಮತ್ತು ಸಿಎಸ್‌ಕೆ ಅಭಿಮಾನಿಗಳು ಮಳೆ ದೇವರು ಬೆಂಗಳೂರಿನಿಂದ ದೂರವಿರಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಆದರೆ, ಭಾರತೀಯ ಹವಾಮಾನ ಇಲಾಖೆ (ಐಎಂಡಿ) ವಾರಾಂತ್ಯದಲ್ಲಿ ನಗರಕ್ಕೆ ಆರೆಂಜ್ ಅಲರ್ಟ್ ನೀಡಿದೆ.

ಬೆಂಗಳೂರಿನ ಕೆಲವೆಡೆ ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ತುಂತುರು ಮಳೆಯಾಗಿದೆ. ಆದರೆ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಳೆಯಾಗಲಿಲ್ಲ.

ಹವಾಮಾನ ವೆಬ್‌ಸೈಟ್ ಆಕ್ಯುವೆದರ್ ಪ್ರಕಾರ, ಬೆಂಗಳೂರಿನಲ್ಲಿ ಮಧ್ಯಾಹ್ನ 2 ಗಂಟೆಗೆ ಶೇ.65 ರಷ್ಟು ಮಳೆಯಾಗುವ ಸಾಧ್ಯತೆಯಿದೆ. ಅವರ ಹವಾಮಾನ ಮುನ್ಸೂಚನೆ ನೋಡಿದರೆ, ಇದು ಪಂದ್ಯದ ಅವಧಿಯಲ್ಲ(ಸಂಜೆ 7 ರಿಂದ ರಾತ್ರಿ 11). ರಾತ್ರಿ 11 ಗಂಟೆಗೆ ಗುಡುಗುಸಹಿತ ಬಿರುಗಾಳಿ ಇರಲಿದ್ದು, ಶೇ.51ರಷ್ಟು ಮಳೆಯಾಗುವ ಸಾಧ್ಯತೆ ಇದೆ. ಇದರ ಪ್ರಕಾರ, ಪಂದ್ಯದ ಬಹುಪಾಲು ಮೇಲೆ ಪರಿಣಾಮ ಬೀರಲಾರದು.

ಪಂದ್ಯದ ಮುನ್ನಾದಿನವಾದ ಶುಕ್ರವಾರದಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಳೆ ಆಗಿಲ್ಲ. ಉಭಯ ತಂಡಗಳ ಆಟಗಾರರು ಅಭ್ಯಾಸ ನಡೆಸಿದರು. ನೂರಾರು ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರರನ್ನು ವೀಕ್ಷಿಸಲು ಆಗಮಿಸಿದ್ದರು. ಆದರೆ, ಭಾರೀ ಭದ್ರತೆಯ ಕಾರಣ ಕ್ರೀಡಾಂಗಣದ ಒಳಗೆ ಬಿಡಲಿಲ್ಲ.

Read More
Next Story