ಏರ್​ಪೋರ್ಟ್​ ರಸ್ತೆಯ ಸಾದಹಳ್ಳಿ ಟೋಲ್​.

ಬೆಂಗಳೂರು ಏರ್​ಪೋರ್ಟ್​ ರಸ್ತೆಯ ಟೋಲ್​​ ಗಳಿಕೆಯಲ್ಲಿ ದಕ್ಷಿಣ ಭಾರತದಲ್ಲಿಯೇ ನಂಬರ್​ 1

ಕೇಂದ್ರ ಸರ್ಕಾರ ಹಂಚಿಕೊಂಡ ಮಾಹಿತಿಯ ಪ್ರಕಾರ, ರಾಷ್ಟ್ರೀಯ ಹೆದ್ದಾರಿ 44 ರಲ್ಲಿರುವ ಬೆಂಗಳೂರು ವಿಮಾನ ನಿಲ್ದಾಣದ ಟೋಲ್ ಬೂತ್ 2023-24ರಲ್ಲಿ 308 ಕೋಟಿ ರೂಪಾಯಿ ಗಳಿಸಿದೆ.


ಬೆಂಗಳೂರು ವಿಮಾನ ನಿಲ್ದಾಣದ ಬಳಿಯ ಟೋಲ್ ಪ್ಲಾಜಾ (ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ) 2023-24ರಲ್ಲಿ ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಟೋಲ್ ಸಂಗ್ರಹ ಬೂತ್ ಆಗಿ ಹೊರಹೊಮ್ಮಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಇತ್ತೀಚೆಗೆ ರಾಜ್ಯಸಭೆಯಲ್ಲಿ ನೀಡಿದ ಮಾಹಿತಿಯಲ್ಲಿ ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ಹಂಚಿಕೊಂಡ ಮಾಹಿತಿಯ ಪ್ರಕಾರ, ರಾಷ್ಟ್ರೀಯ ಹೆದ್ದಾರಿ 44 ರಲ್ಲಿರುವ ಬೆಂಗಳೂರು ವಿಮಾನ ನಿಲ್ದಾಣದ ಟೋಲ್ ಬೂತ್ (ಸಾದಹಳ್ಳಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ) 2023-24ರಲ್ಲಿ 308 ಕೋಟಿ ರೂಪಾಯಿ ಸಂಗ್ರಹಿಸಿದೆ. ಬೆಂಗಳೂರಿನಿಂದ ಸುಮಾರು 35 ಕಿಲೋಮೀಟರ್ ದೂರದಲ್ಲಿರುವ ದೇವನಹಳ್ಳಿಯ ಸಾದಹಳ್ಳಿಯಲ್ಲಿ ಈ ಟೋಲ್ ಪ್ಲಾಜಾ ಇದೆ. ವಿಮಾನ ನಿಲ್ದಾಣಕ್ಕೆ ಹೋಗುವ ಈ ರಸ್ತೆಯ ವಾಹನ ಬಳಕೆದಾರರು 24 ಗಂಟೆಗಳ ಒಳಗೆ ಒಂದು ಟ್ರಿಪ್​ಗೆ 115 ರೂ ಮತ್ತು ಹಿಂತಿರುಗುವ ಪ್ರಯಾಣಕ್ಕೆ 170 ರೂ ಟೋಲ್ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಕಳೆದ ಒಂದು ದಶಕದಲ್ಲಿ, ಈ ಟೋಲ್ ಪ್ಲಾಜಾದಲ್ಲಿ ಟೋಲ್ ಶುಲ್ಕ ಸಂಗ್ರಹವು 1,577 ಕೋಟಿ ರೂ.ಗಳಾಗಿದೆ ಎಂದು ಸರ್ಕಾರದ ಅಂಕಿ ಅಂಶಗಳು ತಿಳಿಸಿವೆ.

ನಂತರದ ಸ್ಥಾನವನ್ನು ತಮಿಳುನಾಡಿನ ಕೃಷ್ಣಗಿರಿಯ ಟೋಲ್ ಹೊಂದಿದೆ. ಇದು ಕಳೆದ 2023-24 ರಲ್ಲಿ 269 ಕೋಟಿ ರೂಪಾಯಿ ಸಂಗ್ರಹಿಸಿದೆ. ಇದು ಕೂಡ ಬೆಂಗಳೂರಿಗೆ ತಮಿಳುನಾಡಿನಿಂದ ಸಂಪರ್ಕಿಸುವ ಪ್ರಮುಖ ರಸ್ತೆಯಾಗಿದೆ. ಆಂಧ್ರಪ್ರದೇಶದ ವೇಂಪಡು ಟೋಲ್​ 219 ಕೋಟಿ ರೂಪಾಯಿ, ತೆಲಂಗಾಣದ ಪಟಂಗಿ 206 ಕೋಟಿ ರೂಪಾಯಿ ಹಾಗೂ ಕೇರಳದ ಪಣಿಯಕ್ಕರ ಟೋಲ್ 186 ಕೋಟಿ ರೂಪಾಯಿ ಟೋಲ್ ಗಳಿಸಿದೆ. ​

ದಕ್ಷಿಣ ಭಾರತದ ಟಾಪ್ 5 ಟೋಲ್ ಗಳ ಮಾಹಿತಿ ಇಲ್ಲಿದೆ (ರಾಜ್ಯಸಭೆಯಲ್ಲಿ ಸಚಿವ ನಿತಿನ್ ಗಡ್ಕರಿ ಅವರ ಉತ್ತರ)








Read More
Next Story