Kolkata rape-murder: ದೆಹಲಿಯಲ್ಲಿ ಬಂಗಾಳದ ರಾಜ್ಯಪಾಲ, ರಾಷ್ಟ್ರಪತಿ ಭೇಟಿ ಸಾಧ್ಯತೆ
x
ಕೋಲ್ಕತ್ತಾದ ರಾಜಭವನದಲ್ಲಿ ಪಶ್ಚಿಮ ಬಂಗಾಳದ ಗವರ್ನರ್ ಸಿವಿ ಆನಂದ ಬೋಸ್ ಅವರಿಗೆ LGBTQ+ ಸಮುದಾಯದವರು ರಾಖಿಗಳನ್ನು ಕಟ್ಟಿದರು

Kolkata rape-murder: ದೆಹಲಿಯಲ್ಲಿ ಬಂಗಾಳದ ರಾಜ್ಯಪಾಲ, ರಾಷ್ಟ್ರಪತಿ ಭೇಟಿ ಸಾಧ್ಯತೆ


ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ. ಆನಂದ ಬೋಸ್ ಅವರು ದೆಹಲಿ ತಲುಪಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಬಿಜೆಪಿ ಹಿರಿಯ ನಾಯಕರನ್ನು ಭೇಟಿ ಮಾಡುವ ಸಾಧ್ಯತೆಯಿದೆ.

ಕೋಲ್ಕತ್ತಾದ ಆರ್‌.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯೆಯ ಅತ್ಯಾಚಾರ-ಕೊಲೆ, ತನಿಖೆ ಮತ್ತು ಮರೆಮಾಚುವಿಕೆ ಆರೋಪದ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ಮತ್ತು ದೇಶಾದ್ಯಂತ ಬೃಹತ್ ಪ್ರತಿಭಟನೆ ಹಾಗೂ ವೈದ್ಯರ ಮುಷ್ಕರಗಳು ನಡೆದಿವೆ. ರಾಜ್ಯಪಾ ಲರು ಗುರುವಾರ (ಆಗಸ್ಟ್ 15) ಆಸ್ಪತ್ರೆಗೆ ಭೇಟಿ ನೀಡಿ, ಧರಣಿ ನಿರತ ಕಿರಿಯ ವೈದ್ಯರೊಂದಿಗೆ ಮಾತನಾಡಿ ನ್ಯಾಯ ದೊರಕಿಸಿಕೊಡುವ ಭರವಸೆ ನೀಡಿದರು.

ಬದಲಾವಣೆ ಅಗತ್ಯ: ಕೋಲ್ಕತ್ತಾದ ರಾಜಭವನದಲ್ಲಿ ನಡೆದ ರಾಖಿ ಕಾರ್ಯಕ್ರಮದಲ್ಲಿ ವೈದ್ಯೆಯರು ಮತ್ತು ಇತರರು ರಾಜ್ಯಪಾಲರಿಗೆ ರಾಖಿ ಕಟ್ಟಿದರು. ಮಹಿಳೆಯರಿಗೆ ಸುರಕ್ಷಿತ ವಾತಾವರಣ ಕಲ್ಪಿಸುವ ಪ್ರಯತ್ನಗಳನ್ನು ಬೆಂಬಲಿಸುವುದಾಗಿ ವಾಗ್ದಾನ ಮಾಡಿದರು.

ʻಪಶ್ಚಿಮ ಬಂಗಾಳದಲ್ಲಿ ಪ್ರಜಾಪ್ರಭುತ್ವ ಅವನತಿ ಹೊಂದುತ್ತಿದೆ. ಮಹಿಳೆಯರ ರಕ್ಷಣೆಗೆ ಸಾಮೂಹಿಕ ಕ್ರಮ ಕೈಗೊಳ್ಳಬೇಕು. ಇಂದು ನಾವು ಹೆಣ್ಣುಮಕ್ಕಳು, ಸಹೋದರಿಯರನ್ನು ರಕ್ಷಿಸುವ ಪ್ರತಿಜ್ಞೆ ತೆಗೆದುಕೊಳ್ಳಬೇಕಿದೆ. ನಮ್ಮ ಸಮಾಜ ಮಹಿಳೆಯರು ಸಂತೋಷ ಮತ್ತು ಸುರಕ್ಷತೆಯನ್ನು ಅನುಭವಿಸುವ ಸ್ಥಳವಾಗಬೇಕು. ಇದರಲ್ಲಿ ನಾವು ವಿಫಲರಾಗಿದ್ದೇವೆ. ಇದು ಸುಸಂಸ್ಕೃತ ಸಮಾಜ ಮಾಡಬೇಕಾದ ಕನಿಷ್ಠ ಕೆಲಸ,ʼ ಎಂದು ಹೇಳಿದರು.

ʻರಾಜ್ಯಪಾಲನಾಗಿ ಜನರ ಸೇವೆ ಮಾಡುವುದು ನನ್ನ ಜವಾಬ್ದಾರಿ. ಗುರಿ ದೂರವಿದೆ ಮತ್ತು ರಸ್ತೆ ದೀರ್ಘವಾಗಿದೆ ಎಂದು ನನಗೆ ತಿಳಿದಿದೆ. ಆದರೆ ನಡಿಗೆ ಆರಂಭವಾಗಿದೆ. ನಾವು ಖಂಡಿತವಾಗಿಯೂ ನಮ್ಮ ಗುರಿ ತಲುಪುತ್ತೇವೆ. ನಾನು ನಿಮ್ಮೊಂದಿಗಿದ್ದೇನೆ,ʼ ಎಂದು ಹೇಳಿದರು.

Read More
Next Story