HMPV Virus | ಭಾರತದ ಮೊದಲ ಎಚ್‌ಎಂಪಿವಿ ವೈರಸ್‌ ಪ್ರಕರಣ ಬೆಂಗಳೂರಿನಲ್ಲಿ ಪತ್ತೆ
x
HMPV VIrus

HMPV Virus | ಭಾರತದ ಮೊದಲ ಎಚ್‌ಎಂಪಿವಿ ವೈರಸ್‌ ಪ್ರಕರಣ ಬೆಂಗಳೂರಿನಲ್ಲಿ ಪತ್ತೆ

HMPV : ಎಚ್ಎಂಪಿವಿ ಅಥವಾ ಹ್ಯೂಮನ್ ಮೆಟಾನ್ಯುಮೊವೈರಸ್‌ ಸಾಮಾನ್ಯವಾಗಿ 11 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಪತ್ತೆಯಾಗುತ್ತದೆ.


ಚೀನಾದಲ್ಲಿ ಕಾಣಿಸಿಕೊಂಡು ಭಯ ಹುಟ್ಟಿಸಿರುವ ಎಚ್‌ಎಂಪಿವಿ ವೈರಸ್‌ ಬೆಂಗಳೂರಿನಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಮಗುವಿನಲ್ಲಿ ಪತ್ತೆಯಾಗಿದೆ. ಇದು ಭಾರತದ ಮೊದಲ ಪ್ರಕರಣವೂ ಹೌದು. ಬೆಂಗಳೂರಿನ ಉತ್ತರ ಭಾಗದಲ್ಲಿರುವ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.

ಹೊಸ ವೈರಸ್‌ ಪ್ರಕರಣದ ಬಗ್ಗೆ ಸರ್ಕಾರದ ಪ್ರಯೋಗಾಲಯದಿಂದ ಯಾವುದೇ ಮಾಹಿತಿ ಬಂದಿಲ್ಲ ಎಂದು ರಾಜ್ಯ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ. "ವರದಿಗಳು ಖಾಸಗಿ ಆಸ್ಪತ್ರೆಯಿಂದ ಬಂದಿವೆ ಮತ್ತು ಖಾಸಗಿ ಆಸ್ಪತ್ರೆಯ ಪರೀಕ್ಷೆಗಳನ್ನು ಅನುಮಾನಿಸಲು ನಮಗೆ ಯಾವುದೇ ಕಾರಣವಿಲ್ಲ" ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

ಎಚ್ಎಂಪಿವಿ ಅಥವಾ ಹ್ಯೂಮನ್ ಮೆಟಾನ್ಯುಮೊವೈರಸ್‌ ಸಾಮಾನ್ಯವಾಗಿ 11 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಪತ್ತೆಯಾಗುತ್ತದೆ. ಎಲ್ಲಾ ಫ್ಲೂ ಮಾದರಿಗಳಲ್ಲಿ ಸುಮಾರು 0.7 ಪ್ರತಿಶತದಷ್ಟು ಎಚ್ಎಂಪಿವಿ ಪತ್ತೆಯಾಗುತ್ತಿದೆ.

"ಇದು ಯಾವ ರೀತಿಯ ಎಚ್‌ಎಂಪಿವಿ ವೈರಸ್ ಎಂದು ನಮಗೆ ಇನ್ನೂ ತಿಳಿದಿಲ್ಲ, ಏಕೆಂದರೆ ಚೀನಾದಲ್ಲಿ ಪತ್ತೆಯಾದ ವೈರಸ್ನ ಸ್ಟ್ರೈನ್ ಏನು ಎಂಬುದರ ಬಗ್ಗೆ ನಮ್ಮಲ್ಲಿ ದಾಖಲೆ ಇಲ್ಲ" ಎಂದು ಮೂಲಗಳು ತಿಳಿಸಿವೆ.

ಭಾರತ ಸರ್ಕಾರದ ಪ್ರಕಾರ, ಈ ಹಿಂದೆಯೂ ಭಾರತದಲ್ಲಿ ಎಚ್ಎಂಪಿವಿ ಪ್ರಕರಣಗಳು ವರದಿಯಾಗಿವೆ.

Read More
Next Story