ರಾಮಲಲ್ಲಾ ವಿಗ್ರಹ ಶಿಲ್ಪಿ ಅರುಣ್ ಯೋಗಿರಾಜ್‌ಗೆ ಅಮೆರಿಕ ವೀಸಾ ನಿರಾಕರಣೆ
x

ರಾಮಲಲ್ಲಾ ವಿಗ್ರಹ ಶಿಲ್ಪಿ ಅರುಣ್ ಯೋಗಿರಾಜ್‌ಗೆ ಅಮೆರಿಕ ವೀಸಾ ನಿರಾಕರಣೆ

ಯೋಗಿರಾಜ್ ಅವರು ವರ್ಜೀನಿಯಾದ ರಿಚ್‌ಮಂಡ್‌ನಲ್ಲಿ ಆಗಸ್ಟ್ 30 ರಿಂದ ಸೆಪ್ಟೆಂಬರ್ 1 ರವರೆಗೆ ನಡೆಯಲಿರುವ 12 ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸಲು ವೀಸಾಗಾಗಿ ಅರ್ಜಿ ಸಲ್ಲಿಸಿದ್ದರು ಎಂದು ವರದಿಯಾಗಿದೆ.


ಅಯೋಧ್ಯೆಯ ರಾಮ ಜನ್ಮಭೂಮಿ ದೇವಸ್ಥಾನದಲ್ಲಿ ಪ್ರತಿಷ್ಠಾಪನೆಯಾದ ರಾಮ ಲಲ್ಲಾ ವಿಗ್ರಹದ ಶಿಲ್ಪಿ ಅರುಣ್ ಯೋಗಿರಾಜ್ ಅವರ ವೀಸಾ ಅರ್ಜಿಯನ್ನು ಅಮೆರಿಕ ತಿರಸ್ಕರಿಸಿದೆ ಎಂದು ವರದಿಯಾಗಿದೆ.

ಸಂಬಂಧಿತ ದಾಖಲೆಗಳನ್ನು ಸಲ್ಲಿಸಿದ್ದರೂ, ಅವರಿಗೆ ವೀಸಾ ಏಕೆ ನಿರಾಕರಿಸಲಾಗಿದೆ ಎಂದು ತಿಳಿದುಬಂದಿಲ್ಲ.

ಆಗಸ್ಟ್ 30 ರಿಂದ ಸೆಪ್ಟೆಂಬರ್ 1 ರವರೆಗೆ ವರ್ಜೀನಿಯಾದ ರಿಚ್‌ಮಂಡ್‌ನಲ್ಲಿರುವ ಗ್ರೇಟರ್ ರಿಚ್‌ಮಂಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯ ಲಿರುವ 12 ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನ (ಡಬ್ಲ್ಯುಕೆಸಿ 2024)ದಲ್ಲಿ ಭಾಗವಹಿಸಲು ಯೋಗಿರಾಜ್ ವೀಸಾಗೆ ಅರ್ಜಿ ಸಲ್ಲಿಸಿದ್ದರು.

ವಿಶ್ವ ಅಕ್ಕ ಕನ್ನಡ ಸಮ್ಮೇಳನವು ಸಮುದಾಯದ ಸದಸ್ಯರ ಸಾಧನೆಗಳನ್ನು ಆಚರಿಸಲು ಮತ್ತು ಭಾಷೆ ಹಾಗೂ ಸಂಸ್ಕೃತಿಯನ್ನು ಸಂರಕ್ಷಿಸಲು ಅಮೆರಿಕದಲ್ಲಿ ನಡೆಯುವ ಕಾರ್ಯಕ್ರಮವಾಗಿದೆ.

ಮೈಸೂರಿನ ಅಗ್ರಹಾರ ಮೂಲದ ಯೋಗಿರಾಜ್ ಅವರು ಸುಭಾಷ್ ಚಂದ್ರ ಬೋಸ್ ಅವರ 30 ಅಡಿ ಪ್ರತಿಮೆ, ಕೇದಾರನಾಥದ 12 ಅಡಿ ಆದಿ ಶಂಕರಾಚಾರ್ಯರ ಪ್ರತಿಮೆ, ಕೆ.ಆರ್. ನಗರದಲ್ಲಿ 21 ಅಡಿ ಹನುಮಾನ್ ಪ್ರತಿಮೆ ಮತ್ತು ಡಾ.ಬಿ. ಆರ್. ಅಂಬೇಡ್ಕರ್ ಅವರ 15 ಅಡಿ ಪ್ರತಿಮೆ ಸೇರಿದಂತೆ ಹಲವು ಶಿಲ್ಪಗಳಿಗೆ ಹೆಸರುವಾಸಿಯಾಗಿದ್ದಾರೆ.

ಅವರದ್ದು ಐದು ತಲೆಮಾರುಗಳ ಶಿಲ್ಪಿ ಪರಂಪರೆಯ ಕುಟುಂಬವಾಗಿದೆ.

Read More
Next Story