ವಾಟ್ಸಾಪ್‌, ಫೇಸ್‌ಬುಕ್‌ ಮೂಲಕ ಶಸ್ತ್ರಾಸ್ತ್ರ ಮಾರಾಟ; ಏಳು ಮಂದಿ ಬಂಧನ
x
ಸಾಂದರ್ಭಿಕ ಚಿತ್ರ

ವಾಟ್ಸಾಪ್‌, ಫೇಸ್‌ಬುಕ್‌ ಮೂಲಕ ಶಸ್ತ್ರಾಸ್ತ್ರ ಮಾರಾಟ; ಏಳು ಮಂದಿ ಬಂಧನ

ಮುಜಾಫರ್‌ನಗರದಲ್ಲಿ ಖರೀದಿದಾರರಿಗೆ ರಿವಾಲ್ವರ್ ತಲುಪಿಸುವ ವೇಳೆ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ ಮೂರು ವಿದೇಶಿ ಪಿಸ್ತೂಲ್, 5 ಸ್ವದೇಶಿ ನಿರ್ಮಿತ ಗನ್, 24ಕ್ಕೂ ಹೆಚ್ಚು ಬುಲೆಟ್ಗಳು, ಒಂದು ಕಾರು ಮತ್ತು ಬೈಕ್ ಜಪ್ತಿ ಮಾಡಿದ್ದಾರೆ.

ಫೇಸ್‌ಬುಕ್‌, ವಾಟ್ಸಾಪ್ ಮತ್ತು ಇನ್ಸ್ಟಾಗ್ರಾಂ ಮೂಲಕ ಶಸ್ತ್ರಾಸ್ತ್ರ ಮಾರಾಟ ಮಾಡುತ್ತಿದ್ದ ಜಾಲವನ್ನು ಉತ್ತರ ಪ್ರದೇಶ ಪೊಲೀಸರು ಬೇಧಿಸಿದ್ದು, ಏಳು ಮಂದಿ ಆರೋಪಿಗಳಿಗೆ ಹೆಡೆಮುರಿ ಕಟ್ಟಿದ್ದಾರೆ.

ಮುಜಾಫರ್‌ನಗರದಲ್ಲಿ ಖರೀದಿದಾರರಿಗೆ ರಿವಾಲ್ವರ್ ತಲುಪಿಸುವ ವೇಳೆ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ ಮೂರು ವಿದೇಶಿ ಪಿಸ್ತೂಲ್, 5 ಸ್ವದೇಶಿ ನಿರ್ಮಿತ ಗನ್, 24ಕ್ಕೂ ಹೆಚ್ಚು ಬುಲೆಟ್ಗಳು, ಒಂದು ಕಾರು ಮತ್ತು ಬೈಕ್ ಜಪ್ತಿ ಮಾಡಿದ್ದಾರೆ.

ಉತ್ತರಪ್ರದೇಶದಲ್ಲಿ ಶಸ್ತ್ರಾಸ್ತ್ರ ಪೂರೈಕೆ ಜಾಲದ ಮೇಲೆ ನಿಗಾ ಇರಿಸಿರುವ ಪೊಲೀಸರು, ವಾಟ್ಸಾಪ್, ಫೇಸ್‌ಬುಕ್‌ ಹಾಗೂ ಇನ್ಸ್ಟಾಗ್ರಾಂ ಮೂಲಕ ಶಸ್ತ್ರಾಸ್ತ್ರ ಮಾರಾಟದ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳು ಬೇರೆ ಜಿಲ್ಲೆಗಳ ಗ್ಯಾಂಗ್‌ಗಳ ಜತ ಸಂಪರ್ಕ ಇರಿಸಿಕೊಂಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಖರೀದಿದಾರರನ್ನು ಆಕರ್ಷಿಸಲು ಇನ್ಸ್ಟಾಗ್ರಾಂ, ಫೇಸ್‌ಬುಕ್ ಹಾಗೂ ವಾಟ್ಸಾಪ್ನಂತಹ ಆನ್ಲೈನ್ ವೇದಿಕೆಗಳನ್ನು ಬಳಸುತ್ತಿದ್ದರು. ಆನ್ಲೈನ್ನಲ್ಲಿ ಒಪ್ಪಂದ ಮಾಡಿಕೊಂಡು, ಬ್ಯಾಂಕ್‌ ಖಾತೆ ಹಣ ಹಾಕಿದ ಬಳಿಕವಷ್ಟೇ ಶಸ್ತ್ರಾಸ್ತ್ರ ತಲುಪಿಸುತ್ತಿದ್ದರು ಎಂದು ಮುಜಫರ್ನಗರ ಎಸ್ಪಿ (ನಗರ) ಸತ್ಯನಾರಾಯಣ ಪ್ರಜಾಪತ್ ಹೇಳಿದ್ದಾರೆ.

ಶಸ್ತ್ರಾಸ್ತ್ರ ಪೂರೈಕೆಯ ಈ ಗ್ಯಾಂಗ್, ಸ್ವದೇಶಿ ನಿರ್ಮಿತ ಪಿಸ್ತೂಲ್ಗಳನ್ನು 4 ರಿಂದ 5 ಸಾವಿರ ರೂ.ಗಳಿಗೆ ಮಾರಾಟ ಮಾಡುತ್ತಿತ್ತು. ವಿದೇಶಿ ನಿರ್ಮಿತ ಪಿಸ್ತೂಲ್ಗಳನ್ನು 40 ರಿಂದ 50 ಸಾವಿರ ರೂ.ಗಳಂತೆ ಆಮದು ಮಾಡಿಕೊಂಡು ಮಾರಾಟ ಮಾಡುತ್ತಿತ್ತು. ಹಣ ಸ್ವೀಕರಿಸಿದ ಬಳಿಕ ಆರೋಪಿಗಳು ಶಸ್ತ್ರಾಸ್ತ್ರಗಳನ್ನು ಖರೀದಿದಾರರ ಹೇಳುವ ಜಾಗಕ್ಕೆ ತಲುಪಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

Read More
Next Story