ಆಂಧ್ರ ಪ್ರದೇಶ | ಲೈಂಗಿಕ ಕಿರುಕುಳ ಆರೋಪ: ಸತ್ಯವೇಡು ಶಾಸಕ ಅಮಾನತು
x
ಟಿಡಿಪಿ ಪಕ್ಷದ ಶಾಸಕ ಕೆ ಆದಿಮುಲಂ ಅವರನ್ನು ಅಮಾನತುಗೊಳಿಸಿದೆ.

ಆಂಧ್ರ ಪ್ರದೇಶ | ಲೈಂಗಿಕ ಕಿರುಕುಳ ಆರೋಪ: ಸತ್ಯವೇಡು ಶಾಸಕ ಅಮಾನತು

ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಟಿಡಿಪಿ ಪಕ್ಷ, ಶಾಸಕ ಕೆ ಆದಿಮುಲಂ ಅವರನ್ನು ಅಮಾನತುಗೊಳಿಸಿದೆ.


Click the Play button to hear this message in audio format

ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ತೆಲುಗು ದೇಶಂ ಪಕ್ಷದ ಶಾಸಕ ಕೆ ಆದಿಮುಲಂ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ.

ತೆಲುಗು ದೇಶಂ ಪಕ್ಷ(ಟಿಡಿಪಿ)ದ ರಾಜ್ಯಾಧ್ಯಕ್ಷ ಪಿ ಶ್ರೀನಿವಾಸ್ ರಾವ್ ಅವರು ಶಾಸಕ ಕೆ ಆದಿಮುಲಂ ಅವರನ್ನು ಪಕ್ಷದಿಂದ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಆದಿಮೂಲಂ ಎಸ್‌ಸಿ-ಮೀಸಲು ಸತ್ಯವೇಡು ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ.

"ಕೋನೇಟಿ ಆದಿಮುಲಂ (ಸತ್ಯವೇಡು ಶಾಸಕ) ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪಗಳು ವಿವಿಧ ವೇದಿಕೆಗಳಲ್ಲಿ ಹೊರಹೊಮ್ಮುತ್ತಿದ್ದು, ಪಕ್ಷ (ಟಿಡಿಪಿ) ಈ ಆರೋಪಗಳನ್ನು ಪರಿಗಣಿಸಿ ಅವರನ್ನು ಅಮಾನತುಗೊಳಿಸಿದೆ" ಎಂದು ಗುರುವಾರ ಟಿಡಿಪಿ ಬಿಡುಗಡೆ ಮಾಡಿರುವ ಅಮಾನತು ಆದೇಶದಲ್ಲಿ ಹೇಳಲಾಗಿದೆ.

ಹೈದರಾಬಾದ್‌ನ ಸೋಮಾಜಿಗುಡಾ ಪ್ರೆಸ್ ಕ್ಲಬ್‌ನಲ್ಲಿ ಗುರುವಾರ ಮಹಿಳೆಯೊಬ್ಬರು ಪತ್ರಿಕಾಗೋಷ್ಠಿ ನಡೆಸಿ, ಆದಿಮೂಲಂ ವಿರುದ್ಧ ಲೈಂಗಿಕ ಕಿರುಕುಳ ಆರೋಪಗಳನ್ನು ಮಾಡಿದ್ದರು.

Read More
Next Story