ಅಮೃತಸರದಲ್ಲಿ ಶಂಕಿತ ಉಗ್ರ ಸ್ಫೋಟದಲ್ಲಿ ಸಾವು
x

ಅಮೃತಸರದಲ್ಲಿ ಶಂಕಿತ ಉಗ್ರ ಸ್ಫೋಟದಲ್ಲಿ ಸಾವು

ಭಾರೀ ಸ್ಫೋಟದ ಸದ್ದು ಕೇಳಿದ ನಂತರ ಪ್ರದೇಶದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿತ್ತು. ಪೊಲೀಸರು ಈ ಪ್ರದೇಶವನ್ನು ಸಂಪೂರ್ಣವಾಗಿ ಸುತ್ತುವರಿದು ಆತಂಕ ನಿವಾರಿಸಿದ್ದಾರೆ.


ಪಂಜಾಬ್‌ನ ಅಮೃತಸರದ ಮಜಿಠಾ ರಸ್ತೆ ಬಳಿ ಮಂಗಳವಾರ ನಡೆದ ಸ್ಫೋಟದಲ್ಲಿ ಶಂಕಿತ ಉಗ್ರವಾದಿಯೊಬ್ಬ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತಪಟ್ಟ ವ್ಯಕ್ತಿ ಯಾವ ಸಂಘಟನೆಗೆ ಸೇರಿದವ ಎಂಬುದರ ಕುರಿತು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಮೃತಸರ ಗ್ರಾಮೀಣ ವಲಯದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಮಣೀಂದರ್ ಸಿಂಗ್ ಘಟನೆ ಬಗ್ಗೆ ಮಾಹಿತಿ ನೀಡಿ, "ಈ ವ್ಯಕ್ತಿ ಸ್ಫೋಟಕ ವಸ್ತುವನ್ನು ಸಾಗಿಸುತ್ತಿದ್ದಾಗ ಸ್ಫೋಟ ಸಂಭವಿಸಿದ್ದು, ಆತನಿಕಗೆ ಅಪಾಯಕಾರಿ ವಸ್ತುಗಳನ್ನು ಸರಿಯಾಗಿ ನಿರ್ವಹಿಸುವ ತರಬೇತಿಯ ಕೊರತೆ ಇರಬಹುದು," ಎಂದು ತಿಳಿಸಿದ್ದಾರೆ. "ಮೃತಪಟ್ಟವ ಒಬ್ಬ ಸಾಮಾನ್ಯ ಉಗ್ರನಾಗಿದ್ದು, ಸ್ಫೋಟಕ ವಸ್ತುವನ್ನು ತೆಗೆದುಕೊಂಡು ಹೋಗಲು ಬಂದಿದ್ದ" ಎಂದು ಅವರು ಹೇಳಿದರು.

ಪೊಲೀಸ್ ಕಾರ್ಯಾಚರಣೆ ಮತ್ತು ಭದ್ರತಾ ಕಳವಳ

ಪೊಲೀಸರು ಸ್ಫೋಟ ಸಂಭವಿಸಿದ ಸ್ಥಳವನ್ನು ಸಂಪೂರ್ಣವಾಗಿ ನಿಗಾದಲ್ಲಿ ಇಟ್ಟಿದ್ದಾರೆ. ವಿಧಿ ವಿಜ್ಱಆನ ಪ್ರಯೋಗಾಲಯ(FSL) ತಂಡವು ಸ್ಫೋಟಕ ವಸ್ತುವಿನ ಮಾದರಿಗಳನ್ನು ಸಂಗ್ರಹಿಸಲು ಸ್ಥಳದಲ್ಲಿದೆ. ಭಾರೀ ಸ್ಫೋಟದ ಸದ್ದು ಕೇಳಿದ ನಂತರ ಪ್ರದೇಶದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿತ್ತು. ಪೊಲೀಸರು ಈ ಪ್ರದೇಶವನ್ನು ಸಂಪೂರ್ಣವಾಗಿ ಸುತ್ತುವರಿದು ಆತಂಕ ನಿವಾರಿಸಿದ್ದಾರೆ.

Read More
Next Story