Maha Kumbh 2025: ಕುಂಭ ಮೇಳದಲ್ಲಿ ಕಾಲ್ತುಳಿತ; ಕರ್ನಾಟಕದ ನಾಲ್ಕು  ಮಂದಿ ಸಾವು
x
ದುರಂತ ನಡೆದ ಸ್ಥಳದ ನೋಟ.

Maha Kumbh 2025: ಕುಂಭ ಮೇಳದಲ್ಲಿ ಕಾಲ್ತುಳಿತ; ಕರ್ನಾಟಕದ ನಾಲ್ಕು ಮಂದಿ ಸಾವು

Maha Kumbh 2025: ಕರ್ನಾಟಕದಿಂದ ಭಾರೀ ಪ್ರಮಾಣದ ಭಕ್ತರು ಕುಂಭ ಮೇಳಕ್ಕೆ ಹೋಗಿದ್ದರು. ಅವರಲ್ಲಿ ಕೆಲವರು ಮೃತಪಟ್ಟಿದ್ದರೆ. ಇನ್ನೂ ಹಲವು ಭಕ್ತರು ಗಾಯಗೊಂಡಿದ್ದಾರೆ.


ಉತ್ತರ ಪ್ರದೇಶದ(Uttar Pradesh) ಪ್ರಯಾಗರಾಜ್‌ನಲ್ಲಿ(Prayagraj) ಸಂಭವಿಸಿರುವ ಕಾಲ್ತುಳಿತದಲ್ಲಿ ಕರ್ನಾಟಕದ ಒಟ್ಟು ನಾಲ್ಕು ಮಂದಿ ಮೃತಪಟ್ಟಿದ್ದಾರೆ. ಕುಂಭಮೇಳಕ್ಕೆ (Maha Kumbh 2025) ಮೌನಿ ಅಮಾವಾಸ್ಯೆಯ (Mauni Amavasya) ಹಿನ್ನೆಲೆಯಲ್ಲಿ ಭಾರೀ ಸಂಖ್ಯೆಯ ಭಕ್ತರು ಆಗಮಿಸಿದ ಹಿನ್ನೆಲೆಯಲ್ಲಿ ಕಾಲ್ತುಳಿತ ಸಂಭವಿಸಿದೆ. ಭೀಕರ ದುರಂತರದಲ್ಲಿ 15 ಮಂದಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಇದರಲ್ಲಿ ಬೆಳಗಾವಿಯ ತಾಯಿ ಮತ್ತು ಮಗಳು ಸೇರಿದ್ದಾರೆ. ಜತೆ ಇನ್ಜೊಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಅದೇ ರೀತಿ ಶಿವಾಜಿನಗರ ಒಬ್ಬರು ಮೃತಪಟ್ಟಿದ್ದಾರೆ ಎಂಬುದಾಗಿ ಮಾಹಿತಿ ಬಂದಿದೆ. ನೂರಾರು ಮಂದಿ ತೀವ್ರವಾಗಿ ಗಾಯಗೊಂಡಿದ್ದುಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆಗಳಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ತ್ರಿವೇಣಿ ಸಂಗಮದಲ್ಲಿ ಮಧ್ಯರಾತ್ರಿ 2.30ರ ವೇಳೆಗೆ ಮಾತಿನ ಚಕಮಕಿ, ನೂಕಾಟ- ತಳ್ಳಾಟ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಸ್ಥಳಕ್ಕೆ ರಕ್ಷಣಾ ಪಡೆಗಳು ಧಾವಿಸಿದ್ದು, ಕಾರ್ಯಾಚರಣೆ ನಡೆಯುತ್ತಿದೆ.

'ಎರಡನೇ ಶಾಹಿ ಸ್ನಾನ'ದ ದಿನವಾದ ಮೌನಿ ಅಮಾವಾಸ್ಯೆಯಂದು ಘಾಟ್‌ಗಳು ಮತ್ತು ತ್ರಿವೇಣಿ ಸಂಗಮದಲ್ಲಿ ಮಂಗಳವಾರದಿಂದಲೇ ಭಾರಿ ಸಂಖ್ಯೆ ಜನರು ಜಮಾಯಿಸಿದ್ದರು. ಅವರನ್ನು ನಿರ್ವಹಿಸುವುದು ಅಲ್ಲಿನ ಆಡಳಿತಕ್ಕೆ ಕಷ್ಟವಾಯಿತು. ಬುಧವಾರ ಪವಿತ್ರ ಸ್ನಾನ ಮಾಡಲು ಕುಂಭಮೇಳಕ್ಕೆ ಕನಿಷ್ಠ 10 ಕೋಟಿ ಮಂದಿ ಆಗಮಿಸುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಜನರನ್ನು ನಿಯಂತ್ರಣ ಮಾಡಲು ಸಾಧ್ಯವಾಗದೇ ಅಧಿಕಾರಿಗಳು ಅವರೆಲ್ಲರನ್ನೂ ವಾಪಸ್‌ ಕಳುಹಿಸುತ್ತಿದ್ದಾರೆ.

ಮುರಿದ ತಡೆಗೋಡೆ

ಏಕಾಏಕಿ ಜನರ ಸಂಖ್ಯೆ ಹೆಚ್ಚಾದ ಕಾರಣ ತಳ್ಳಾಟ ಆರಂಭವಾಯಿತು. ಹೀಗಾಗಿ ತಡೆಗೋಡೆ ಮುರಿದ ನಂತರ ಕಾಲ್ತುಳಿತ ಸಂಭವಿಸಿದೆ . "ಸಂಗಮ ಪ್ರದೇಶದಲ್ಲಿ ತಡೆಗೋಡೆ ಮುರಿದ ನಂತರ ಕೆಲವರು ಗಾಯಗೊಂಡರು ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು" ಎಂದು ಅವರು ತಿಳಿಸಿದ್ದಾರೆ.

ಮಕರ ಸಂಕ್ರಾಂತಿಯಿಂದ ಕುಂಭಮೇಳ ನಡೆಯುವ ಅಷ್ಟೂ ದಿನ ನೀರಿನಲ್ಲಿ ಮಿಂದೇಳುವುದನ್ನು ‘ಪವಿತ್ರ’ ಎಂದು ಭಾವಿಸಲಾಗುತ್ತದೆ. ಆದರೆ ಅಮೃತ ಸ್ನಾನದ (ಶಾಹಿ ಸ್ನಾನ) ದಿನಗಳನ್ನು ವಿಶೇಷವಾದ ದಿನಗಳೆಂದು ಎಂದು ಪರಿಗಣಿಸಲಾಗುತ್ತದೆ.

Live Updates

  • 29 Jan 2025 4:56 PM IST

     ಪ್ರಯಾಗ್ ರಾಜ್ ಕುಂಭಮೇಳದ ಕಾಲ್ತುಳಿತದಲ್ಲಿ ಬೆಳಗಾವಿಯ ಮತ್ತೊಬ್ಬರು ಮೃತಪಟ್ಟಿದ್ದಾರೆ. ಇದರೊಂದಿಗೆ ಕರ್ನಾಟಕದ ಭಕ್ತರ ಸಾಲಿನಲ್ಲಿ ಮೃತರ ಸಂಖ್ಯೆ 3ಕ್ಕೆ ಏರಿದೆ. ವಪತ್ನಿ ಜೊತೆಗೆ ಪ್ರಯಾಗ್ ರಾಜ್‌ಗೆ ತೆರಳಿದ್ದರು. ಬುಧವಾರ ಬೆಳಿಗ್ಗೆ ಕಾಲ್ತುಳಿತದಲ್ಲಿ ಗಂಭೀರ ಗಾಯಗೊಂಡಿದ್ದ ಅರುಣ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

  • 29 Jan 2025 3:52 PM IST

    ಮಹಾ ಕುಂಭ ಮೇಳದಲ್ಲಿ ಕಾಲ್ತುಳಿತಕ್ಕೆ ಒಳಗಾಗಿದ್ದ ಬೆಳಗಾವಿಯ ಒಬ್ಬ ತಾಯಿ ಹಾಗೂ ಮಗಳು ಸಾವನ್ನಪ್ಪಿದ್ದಾರೆ.  ನಗರದ ವಡಗಾವಿಯ ನಿವಾಸಿ ಜ್ಯೋತಿ ಹತ್ತರವಾಠ (50) ಹಾಗೂ ಇವರ ಪುತ್ರಿ ಮೇಘಾ ಹತ್ತರವಾಠ (18) ಸಾವನ್ನಪ್ಪಿದ್ದಾರೆ ಎಂದು ಮೃತರ ಸಂಬಂಧಿ ಗುರುರಾಜ ಹುದ್ದಾರ ಅವರು ಮಾಹಿತಿ ನೀಡಿದ್ದಾರೆ.

  • 29 Jan 2025 2:04 PM IST

    ಘಟನೆಯಿಂದ ದುಃಖಿತನಾಗಿದ್ದೇನೆ: ಅಮಿತ್ ಶಾ

    "ಮಹಾ ಕುಂಭಮೇಳದಲ್ಲಿ ಸಂಭವಿಸಿದ ದುರಂತ ಅಪಘಾತದಿಂದ ನಾನು ತೀವ್ರ ದುಃಖಿತನಾಗಿದ್ದೇನೆ. ಈ ಘಟನೆಯಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ನನ್ನ ಸಂತಾಪ ವ್ಯಕ್ತಪಡಿಸುತ್ತೇನೆ. ಈ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಅವರಿಗೆ ನೀಡಲಿ. ನಾನು ಉತ್ತರ ಪ್ರದೇಶದ ಮುಖ್ಯಮಂತ್ರಿ ಮತ್ತು ಸ್ಥಳೀಯ ಆಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ" ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹಿಂದಿಯಲ್ಲಿ 'ಎಕ್ಸ್' ನಲ್ಲಿ ಬರೆದಿದ್ದಾರೆ.

  • 29 Jan 2025 2:04 PM IST



  • 29 Jan 2025 12:43 PM IST

    ಕಾಲ್ತುಳಿತದಲ್ಲಿ ಬೆಳಗಾವಿ ದಂಪತಿಗೆ ಗಾಯ, ಉಳಿದವರು ಸುರಕ್ಷಿತ

    ಬೆಳಗಾವಿ ನಗರದ ಶೆಟ್ಟಿ ಗಲ್ಲಿ ನಿವಾಸಿಗಳಾದ ಅರುಣ್ ಕೋಪರ್ಡೆ, ಕಾಂಚನಾ ಕೋಪರ್ಡೆ ದಂಪತಿ ಕಾಲ್ತುಳಿತದ ವೇಳೆ ಪ್ರತ್ಯೇಕವಾಗಿದ್ದು, ಇಬ್ಬರೂ ಗಾಯಗೊಂಡಿದ್ದಾರೆ. ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪೋಷಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ಕಾಂಚನಾ-ಅರುಣ್‌ ದಂಪತಿಯ ಪುತ್ರ ಓಂಕಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

    ಇನ್ನು ಬೆಳಗಾವಿ ಬಿಜೆಪಿ ಕಾರ್ಯಕರ್ತರು ಕೂಡ ಕುಂಭ ಮೇಳಕ್ಕೆ ತೆರಳಿದ್ದುಮ ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಬೆಳಗಾವಿ ಬಿಜೆಪಿ ಕಚೇರಿಯ ಉಸ್ತುವಾರಿ ಅಶೋಕ ಬಿಳಿಸೊಕೊಪ್ಪ ದ ಫೆಡರಲ್‌ ಕರ್ನಾಟಕಕ್ಕೆ ತಿಳಿಸಿದರು.

    ಬೆಳಗಾವಿಯಿಂದ ಅಂದಾಜು 147 ಜನರು ಮಹಾ ಕುಂಭ ಮೇಳಕ್ಕೆ ತೆರಳಿದ್ದಾರೆ.

  • 29 Jan 2025 12:22 PM IST

    ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಸಾಗುತ್ತಿರುವ ಮಹಾಕುಂಭಮೇಳದ ತ್ರಿವೇಣಿ ಸಂಗಮದಲ್ಲಿ ಕಾಲ್ತುಳಿತ ಸಂಭವಿಸಿ ಹಲವರು ಮೃತಪಟ್ಟಿದ್ದಾರೆ. ಮೃತರ ಕುಟುಂಬಗಳಿಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ.

  • 29 Jan 2025 11:56 AM IST

    ಉತ್ತರಪ್ರದೇಶದ ಪ್ರಯಾಗ್ ರಾಜ್‌ನ ಮಹಾಕುಂಭಮೇಳದಲ್ಲಿ ಕಾಲ್ತುಳಿತ ದುರಂತ ಸಂಭವಿಸಿರುವ ಕಾರಣ ಪ್ರಯಾಗ್‌ರಾಜ್‌ಗೆ ಹೋಗುವ ಮತ್ತು ಬರುವ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂಬ ವದಂತಿಯನ್ನು ರೈಲ್ವೆ ಅಧಿಕಾರಿಗಳು ಅಲ್ಲಗಳೆದಿದ್ದಾರೆ.

  • 29 Jan 2025 11:47 AM IST

    ಪ್ರಯಾಗ್‌ರಾಜ್‌ನ ಮಹಾಕುಂಭಮೇಳದಲ್ಲಿ ಕಾಲ್ತುಳಿತವು ಹಲವರನ್ನು ಬಲಿಪಡೆದಿದ್ದರೂ, ಬುಧವಾರ ಮುಂಜಾನೆ ವೇಳೆಗೆ ಪರಿಸ್ಥಿತಿ ಹತೋಟಿಗೆ ಬಂದಿರುವ ಕಾರಣ, ಮೌನಿ ಅಮಾವಾಸ್ಯೆಯ ಶಾಹಿ ಸ್ನಾನವನ್ನು ನಿಗದಿಯಂತೆ ಮುಂದುವರಿಸಲು ತೀರ್ಮಾನಿಸಲಾಗಿದೆ. ಅದರಂತೆ, ಈಗ ಕುಂಭಮೇಳದ 2ನೇ ಶಾಹಿ ಸ್ನಾನ ಆರಂಭವಾಗಿದೆ.

  • 29 Jan 2025 11:40 AM IST

    ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಕಾಲ್ತುಳಿತ ಸಂಭವಿಸಿದ್ದು, ಹಲವು ಭಕ್ತರು ಗಾಯಗೊಂಡಿದ್ದಾರೆ. ಸ್ಥಳದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಭಕ್ತರು ವದಂತಿಗಳಿಗೆ ಕಿವಿ ಕೊಡಬಾರದು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಮನವಿ ಮಾಡಿದ್ದಾರೆ.

  • 29 Jan 2025 11:20 AM IST

    ತ್ರಿವೇಣಿ ಸಂಗಮಕ್ಕೆ ಭಕ್ತರು ಬರುವುದು ಬೇಡ. ಪರಿಸ್ಥಿತಿ ನಿಯಂತ್ರಣ ಕಷ್ಟ: ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ ಮನವಿ

Read More
Next Story