ಅಂಬೇಡ್ಕರ್ ಕುರಿತ ಅಮಿತ್​ ಶಾ ಹೇಳಿಕೆ ಬಿಜೆಪಿಯ ಧೈರ್ಯಕ್ಕೆ ಸವಾಲು
x
ರಾಜ್ಯ ಸಭೆಯಲ್ಲಿ ಅಮಿತ್ ಶಾ ಭಾಷಣ.

ಅಂಬೇಡ್ಕರ್ ಕುರಿತ ಅಮಿತ್​ ಶಾ ಹೇಳಿಕೆ ಬಿಜೆಪಿಯ ಧೈರ್ಯಕ್ಕೆ ಸವಾಲು

ಅಮಿತ್ ಶಾ ಹೇಳಿಕೆ ಹೀಗಿದೆ; ಕೆಲವರಿಗೆ ಅಂಬೇಡ್ಕರ್ ಅವರ ಹೆಸರನ್ನು ಜಪ ಮಾಡುವುದೇ ಫ್ಯಾಶನ್ ಆಗಿದೆ. ಅಂಬೇಡ್ಕರ್ ಅವರ ಹೆಸರನ್ನು ಅಷ್ಟೊಂದು ಸಲ ಹೇಳುವ ಬದಲು ದೇವರ ಹೆಸರನ್ನು ಜಪಿಸಿದ್ದರೆ ಏಳು ಜನ್ಮಗಳ ಕಾಲ ಸ್ವರ್ಗ ಪ್ರಾಪ್ತಿಯಾಗುತ್ತಿತ್ತು...


ಕಳೆದ ಎರಡು ದಿನಗಳ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಲಯ ತಪ್ಪಿಬಿಟ್ಟರು. ಭಾರತೀಯ ಸಂವಿಧಾನದ ಕರ್ತೃ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಡಿಸೆಂಬರ್ 17ರಂದು ಸಂಸತ್ತಿನಲ್ಲಿ ಅವರು ನೀಡಿದ ಅಜಾಗರೂಕ ಹೇಳಿಕೆಗಳು ವಿರೋಧ ಪಕ್ಷಕ್ಕೆ ಅಸ್ತ್ರವನ್ನೇ ಕೊಟ್ಟಂತಾಗಿದೆ. ನನಗೆ ಯಾವುದೇ ದುರುದ್ದೇಶ ಇರಲಿಲ್ಲ. ಭಾರತದ ಮೂಲಭೂತ ಕಾನೂನು ಚೌಕಟ್ಟಿನ ಮುಖ್ಯ ವಾಸ್ತುಶಿಲ್ಪಿಯಾಗಿರುವ ಬಾಬಾ ಸಾಹೇಬ್​ ವಿರುದ್ಧ ಯಾವುದೇ ತಿರಸ್ಕಾರದ ಭಾವ ಹೊಂದಿಲ್ಲ ಎಂಬುದಾಗಿ ಸಮಜಾಯಿಷಿ ನೀಡಿದ್ದಾರೆ.

ಆಡಳಿತಾರೂಢ ಬಿಜೆಪಿಯ ಪಾಲಿಗೆ 'ಚಾಣಕ್ಯ' ಎಂದೇ ಖ್ಯಾತಿ ಹೊಂದಿರುವ ಶಾ ಹೇಗೆ ಈ ತಪ್ಪು ಮಾಡಿದರು ಎಂಬುದೇ ಯಕ್ಷ ಪ್ರಶ್ನೆ. ಹೇಳಿಕೆ ನೀಡುವ ವೇಳೆ ಅವರ ಅವರ ಕೈಯಲ್ಲಿ ಒಂದು ಕಾಗದದ ಹಾಳೆಯಿತ್ತು. ಅದನ್ನೇ ಓದಿಕೊಂಡಂತೆ ತೋರುತ್ತಿತ್ತು, ಅವರ ಹೇಳಿಕೆ ಹೀಗಿದೆ; ಕೆಲವರಿಗೆ ಅಂಬೇಡ್ಕರ್ ಅವರ ಹೆಸರನ್ನು ಜಪ ಮಾಡುವುದೇ ಫ್ಯಾಶನ್ ಆಗಿದೆ. ಅಂಬೇಡ್ಕರ್ ಅವರ ಹೆಸರನ್ನು ಅಷ್ಟೊಂದು ಸಲ ಹೇಳುವ ಬದಲು ದೇವರ ಹೆಸರನ್ನು ಜಪಿಸಿದ್ದರೆ ಏಳು ಜನ್ಮಗಳ ಕಾಲ ಸ್ವರ್ಗ ಪ್ರಾಪ್ತಿಯಾಗುತ್ತಿತ್ತು...

ವಿರೋಧ ಪಕ್ಷಗಳನ್ನು ಮತ್ತೆ ತರಾಟೆಗೆ ತೆಗೆದುಕೊಂಡರು

ರಾಜ್ಯ ಸಭೆಯಲ್ಲಿ ಅವರ ಭಾಷದ ಈ ತುಣುಕು ಸದನದ ಒಳಗೆ ಹಾಗೂ ಹೊರಗೆ ಮಾರ್ದನಿಸಿತು. ಕೇವಲ 24 ಗಂಟೆಗಳಲ್ಲಿ ಭಾರಿ ಕೋಲಾಹಲ ಉಂಟುಮಾಡಿತು. ಸಂವಿಧಾನ ಸಭೆಯ ಸದಸ್ಯರು ಮತ್ತು ಅಧ್ಯಕ್ಷರಾದ ಡಾ.ರಾಜೇಂದ್ರ ಪ್ರಸಾದ್ ಅವರು ಸಂವಿಧಾನದ ಮೊದಲ ಕರಡು ಪ್ರತಿಗೆ ಸಹಿ ಹಾಕಿದ 75 ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಅಮಿತ್​ ಶಾ ಮಾತನಾಡಿದ್ದರು. ರಾಜ್ಯ ಸಭೆಯಲ್ಲಿ ನಡೆದ ಎರಡು ದಿನಗಳ ಸುದೀರ್ಘ ಚರ್ಚೆಗೆ ಉತ್ತರಿಸುವಾಗ ಅಮಿತ್ ಶಾ ಅವರ ಮುಂದೆ 34 ಪುಟಗಳ ಕರಡು ಇತ್ತು.

ಕುತೂಹಲಕಾರಿ ಸಂಗತಿಯೆಂದರೆ ರಾಜ್ಯಸಭೆಯಲ್ಲಿ ತಮ್ಮಭಾಷಣದಿಂದ ಕೋಲಾಹಲ ಸೃಷ್ಟಿಯಾಗಿ ಅಧಿವೇಶನದ ಕೊನೇ ದಿನದ ತನಕ ಮುಂದುವರಿದ ನಡುವೆಯೇ ಪ್ರಧಾನಿ ಮೋದಿ ಅವರು ರಾಜಸ್ಥಾನಕ್ಕೆ ಭೇಟಿ ನೀಡಿದ್ದರು. ಜತೆಗೆ ಇಬ್ಬರು ಕೇಂದ್ರ ಮಂತ್ರಿಗಳನ್ನು ಕರೆದುಕೊಂಡು ಹೋಗಿದ್ದರು. ಹೀಗಾಗಿ ಶಾ ಡೆಲ್ಲಿ ಕೋಟೆಯಲ್ಲಿ ಒಬ್ಬರೇ ಸೆಣಸಾಡಬೇಕಾಯಿತು. ಅತ್ತ ಲೋಕಸಭೆಯಲ್ಲಿ ''ಒಂದು ರಾಷ್ಟ್ರ ಒಂದು ಚುನಾವಣೆ'' ವಿಧೇಯಕವನ್ನು ಸದನ ಜಂಟಿ ಸಮಿತಿಗೆ ನೀಡಲು ಮುಂದಾಗಿದ್ದ ಕಾರಣ ಎಲ್ಲ ಸದಸ್ಯರು ಹಾಜರಿರಬೇಕು ಎಂದು ವಿಪ್​ ಹೊರಡಿಸಿದ್ದ ಹೊರತಾಗಿಯೂ ಇಬ್ಬರು ಪ್ರಮುಖ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ಸೇರಿದಂತೆ 20 ಬಿಜೆಪಿ ಸಂಸದರು ಸದನಕ್ಕೆ ಗೈರು ಹಾಜರಾಗಿ ನಿಯಮ ಉಲ್ಲಂಘಿಸಿದ್ದರು.

ವಿಧೇಯಕ ಮಂಡನೆ ದಿನ ಸದನಕ್ಕೆ ಗೈರುಹಾಜರಾಗಲು ಪ್ರಧಾನಿ ಮೋದಿ ಮೊದಲೇ ನಿರ್ಧರಿಸಿದ್ದರೇ ಅಥವಾ ಅಮಿತ್ ಶಾ ಅವರ ಭಾಷಣವು ಸೃಷ್ಟಿಸಬಹುದಾದ ಸುಂಟರಗಾಳಿಯ ಬಗ್ಗೆ ಅವರಿಗೆ ಸುಳಿವು ಇದ್ದ ಕಾರಣ ದೂರ ಉಳಿದಿದ್ದರು ಎಂದು ಕಾಣುತ್ತದೆ. ಸದಸ್ಯರ ಅನುಪಸ್ಥಿತಿಯನ್ನು ಪಕ್ಷವು ಎಷ್ಟು ಗಂಭೀರವಾಗಿ ಪರಿಗಣಿಸಿದೆ ಎಂದರೆ ಅದಕ್ಕೆ ಕಾರಣ ಹುಡುಕಲು ತನಿಖೆಯನ್ನು ಕೈಗೊಳ್ಳುತ್ತದೆ. ಅದೇನೇ ಇರಲಿ, ಮಂಗಳವಾರದಿಂದ, ಸರ್ಕಾರ ಮತ್ತು ಬಿಜೆಪಿಯ ಲೆಕ್ಕಾಚಾರಗಳು ಹದಗೆಟ್ಟಿವೆ. ಪ್ರಧಾನಿ ಮೋದಿ ತಮ್ಮ ಬೇಡಿಕೆಯನ್ನು ತಿರಸ್ಕರಿಸುತ್ತಾರೆ ಎಂದು ಗೊತ್ತಿದ್ದರೂ ಅಮಿತ್ ಶಾ ಅವರನ್ನು ಸಂಪುಟದಿಂದ ವಜಾಗೊಳಿಸುವಂತೆ ಒತ್ತಾಯಿಸುವಷ್ಟು ವಿರೋಧ ಪಕ್ಷಗಳನ್ನು ಕೆರಳಿದ್ದವು.

ಅಮಿತ್ ಶಾ ವಿರುದ್ಧ ವಾಗ್ದಾಳಿ

ಕೇಂದ್ರದಲ್ಲಿನ ಬಿಜೆಪಿ ಸರ್ಕಾರದ ಕಳೆದ 10 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಪ್ರಮುಖ ಸಚಿವರನ್ನು ತೆಗೆದುಹಾಕುವ ಒತ್ತಡವನ್ನು ಎದುರಿಸಿದೆ ಹಾಗೂ ಕಾಂಗ್ರೆಸ್ ನೇತೃತ್ವದ ಅದರ ಪ್ರತಿಪಕ್ಷಗಳು ಆಕ್ರಮಣಕಾರಿ ಒತ್ತಾಯ ಮಾಡಿದ್ದಾರೆ. ಬಿಜೆಪಿ ಮತ್ತು ಅದರ ನೇತೃತ್ವದ ಎನ್​ಡಿಎ ವಿರುದ್ಧ ದೊಡ್ಡ ವಿರೋಧದ ಅಲೆಯನ್ನು ಸೃಷ್ಟಿಸುವ ಇಂಡಿಯಾ ಬಣವನ್ನು ದೊಡ್ಡ ಪ್ರತಿಪಕ್ಷವಾಗಿ ರೂಪಿಸಿದ್ದಾರೆ.

ಶಾ ಅವರ ರಾಜೀನಾಮೆಯ ಬೇಡಿಕೆ ಎಷ್ಟು ತೀವ್ರವಾಗಿದೆಯೆಂದರೆ ಇದು ಸಂಸತ್ತಿನ ಆವರಣದಲ್ಲಿ ಘರ್ಷಣೆಗೆ ಕಾರಣವಾಯಿತು. ಹಲವಾರು ರಾಜ್ಯಗಳ ರಾಜಧಾನಿಗಳಲ್ಲಿ ಪ್ರತಿಭಟನೆಗಳಿಗೆ ಕಾರಣವಾಯಿತು. ಅಲ್ಲಿ ಪೊಲೀಸರು ಲಾಠಿ ಹೊಡೆತಗಳು ಮತ್ತು ಅಶ್ರುವಾಯು ಶೆಲ್​ಗಳನ್ನು ಪ್ರಯೋಗಿಸಬೇಕಾಯಿತು.

ಅಕ್ಬರ್ ರಸ್ತೆಯ ಕಾಂಗ್ರೆಸ್ ಪ್ರಧಾನ ಕಚೇರಿಯ ಹೊರಗೆ ದೆಹಲಿ ಪೊಲೀಸರು ಮಂಗಳವಾರ ಹಾಕಿದ್ದ ಬ್ಯಾರಿಕೇಡ್ ಅನ್ನು ಕಾಂಗ್ರೆಸ್ಸಿಗರು ಮುರಿದಿದ್ದರು. ಅಮಿತ್ ಶಾ ಅವರ ಪ್ರತಿಕೃತಿಗಳನ್ನು ದಹಿಸಿದ್ದರು. ಡಿಸೆಂಬರ್ 19 ರ ಗುರುವಾರ ಲಕ್ನೋದಲ್ಲಿ ಸಮಾಜವಾದಿ ಪಕ್ಷವು ಪ್ರತಿಭಟನಾ ಮೆರವಣಿಗೆ ನಡೆಸಿದಾಗ ಉತ್ತರ ಪ್ರದೇಶದಿಂದ ಇದೇ ರೀತಿಯ ವರದಿಗಳು ಬಂದವು. ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಲು ಮುಂದಿನ ದಿನಗಳಲ್ಲಿ ಪ್ರತಿಭಟನೆಗಳು ಮುಂದುವರಿಯುತ್ತವೆ ಎಂದು ಪಕ್ಷಗಳ ನಾಯಕರು ಹೇಳಿದ್ದಾರೆ.

ಶಾ ಅವರನ್ನು ಪೂರ್ಣ ಶಕ್ತಿಯಿಂದ ಬೆಂಬಲಿಸುವುದು

ಅಮಿತ್ ಶಾ ಅವರನ್ನು ಬೆಂಬಲಿಸಲು ಬಿಜೆಪಿ ಎಲ್ಲ ರೀತಿಯಲ್ಲೂ ಪ್ರಯತ್ನಿಸುತ್ತಿದೆ. ಅಮಿತ್ ಶಾ ಅವರನ್ನು ವಜಾಗೊಳಿಸಬೇಕು ಎಂಬ ಕಾಂಗ್ರೆಸ್ ಮತ್ತು ಅದರ ಬೇಡಿಕೆಯನ್ನು ಮೋದಿ ಬುಧವಾರ ಸಾಮಾಜಿಕ ಮಾಧ್ಯಮದಲ್ಲಿ ಖಂಡಿಸಿದ್ದಾರೆ. ಮರುದಿನ ಬೆಳಿಗ್ಗೆ ಬಿಜೆಪಿ ಸಂಸದರು ಸಂಸತ್ತಿನಲ್ಲಿ ಕಾಂಗ್ರೆಸ್ ಸಂಸದರೊಂದಿಗೆ ಘರ್ಷಣೆ ನಡೆಸಿದ್ದಾರೆ. ಇಬ್ಬರು ಬಿಜೆಪಿ ಸಂಸದರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಂತರ, ಎರಡೂ ಕಡೆಯವರು ದೆಹಲಿಯಲ್ಲಿ ಪೊಲೀಸ್ ದೂರುಗಳನ್ನು ದಾಖಲಿಸಿದ್ದರು.

ರಾಜಕೀಯ ಮತ್ತು ಚುನಾವಣಾ ಮಟ್ಟಗಳಲ್ಲಿನ ಅಪಾಯಗಳು ಎರಡೂ ಕಡೆಯವರು ತಪ್ಪಿಸಿಕೊಳ್ಳಲಾಗದಷ್ಟು ಹೆಚ್ಚಾಗಿದೆ. ಭಾರತದ ಒಟ್ಟು ಜನಸಂಖ್ಯೆಯ ನಾಲ್ಕನೇ ಒಂದು ಭಾಗದಷ್ಟಿರುವ ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟು ಜನಾಂಗದವರು ಅಂಬೇಡ್ಕರ್ ಅವರನ್ನು ದೇವರಂತೆ ಪರಿಗಣಿಸುತ್ತಾರೆ. ಇತರ ಹಿಂದುಳಿದ ಜಾತಿಗಳಿಗೆ ಸೇರಿದ ಮೂರನೇ ಒಂದು ಭಾಗದಷ್ಟು ಜನರು ಅಂಬೇಡ್ಕರ್ ಅವರಿಗೆ ಕನಿಷ್ಠ ಗೌರವ ನೀಡುತ್ತಾರೆ.

ಇದು ಪ್ರತಿಪಕ್ಷಗಳು ಕೆಟ್ಟದಾಗಿ ಕೂಗಲು ಮತ್ತು ಶಾ ಅವರ ತಲೆ ದಂಡಕ್ಕೆ ಒತ್ತಾಯಿಸಲು ಕಾರಣವಾಗಿದೆ. ಮತ್ತೊಂದೆಡೆ, ಬಿಜೆಪಿ ತನ್ನ ಪೂರ್ಣ ಶಕ್ತಿಯೊಂದಿಗೆ ಪ್ರತಿಪಕ್ಷಗಳನ್ನು ಎದುರಿಸಲು ನಿರ್ಧರಿಸಿದೆ.

ಜಿದ್ದು ಕಡಿಮೆಯಾಗುವ ಯಾವುದೇ ಲಕ್ಷಣಗಳಿಲ್ಲ

ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಗುರುವಾರ (ಡಿಸೆಂಬರ್ 19) ಪತ್ರಿಕಾಗೋಷ್ಠಿ ನಡೆಸಿ, ಬಿಜೆಪಿ ಸಂಸದರು ಖರ್ಗೆ ಅವರನ್ನು ತಳ್ಳಿದ್ದಾರೆ ಮತ್ತು ಪ್ರಿಯಾಂಕಾ ಗಾಂಧಿ ಸೇರಿದಂತೆ ಮಹಿಳಾ ಸಂಸದರನ್ನು ಸಂಸತ್ತಿನ ಕಟ್ಟಡದ ಮುಖ್ಯ ದ್ವಾರದಲ್ಲಿ "ತೋಳ್ಬಲ" ಬಳಸಿ ಹೆದರಿಸಿದ್ದಾರೆ ಎಂದು ಆರೋಪಿಸಿದ್ದರು .

ಖರ್ಗೆ ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಡಿ ಬಿಜೆಪಿ ವರಿಷ್ಠರ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಕಾಂಗ್ರೆಸ್ ಸಂಸದ ಪ್ರಮೋದ್ ತಿವಾರಿ ಹೇಳಿದ್ದಾರೆ. ಅಂಬೇಡ್ಕರ್ ವಿರುದ್ಧ ಶಾ ಅವರ ಹೇಳಿಕೆಗಳಿಂದ ಪ್ರಚೋದಿಸಲ್ಪಟ್ಟ ಘರ್ಷಣೆಯು ಇಲ್ಲಿಯವರೆಗೆ ಕಡಿಮೆಯಾಗುವ ಯಾವುದೇ ಲಕ್ಷಣಗಳನ್ನು ತೋರಿಸಿಲ್ಲ.

ಅಮಿತ್​ ಶಾ ಅವರು ಮೋದಿಯವರ ಮೊದಲ ವಿಶ್ವಾಸಾರ್ಹ ವ್ಯಕ್ತಿ. ಹೀಗಾಗಿ, ಅಂಬೇಡ್ಕರ್ ಬಗ್ಗೆ ಅವರ ಹೇಳಿಕೆಗಳಿಂದ ಉದ್ಭವಿಸಿರುವ ವಿವಾದವು ಅವರ ಭವಿಷ್ಯದ ಬಗ್ಗೆ ಮಾತ್ರ ಅಲ್ಲ. ಇದರಿಂದ ಉಂಟಾಗುವ ಅನಿಶ್ಚಿತತೆಯನ್ನೂ ನಿಭಾಯಿಸುವ ಪರಿಸ್ಥಿತಿಯನ್ನು ಬಿಜೆಪಿಗೆ ತಂದಿಟ್ಟಿದೆ.

Read More
Next Story