ಅಮರ್ತ್ಯ ಸೇನ್, ಶಮಿಗೆ ಚುನಾವಣಾ ಆಯೋಗದ ನೋಟಿಸ್: ಇದು ರೂಢಿಗತ ಪ್ರಕ್ರಿಯೆ ಎಂದ ಬಂಗಾಳ ಸಿಇಒ
x

ನೊಬೆಲ್ ಪ್ರಶಸ್ತಿ ವಿಜೇತ ಅಮರ್ತ್ಯ ಸೇನ್.

https://thefederal.com/category/states/east/west-bengal/sir-hearing-summons-amartya-sen-mohammed-shami-bengal-ceo-224470

ಅಮರ್ತ್ಯ ಸೇನ್, ಶಮಿಗೆ ಚುನಾವಣಾ ಆಯೋಗದ ನೋಟಿಸ್: ಇದು 'ರೂಢಿಗತ ಪ್ರಕ್ರಿಯೆ' ಎಂದ ಬಂಗಾಳ ಸಿಇಒ

ಚುನಾವಣಾ ಆಯೋಗದ ಅಧಿಸೂಚನೆಯ ಪ್ರಕಾರ, ಇಂತಹ ಅಪೂರ್ಣ ಮಾಹಿತಿ ಇರುವ ಪ್ರಕರಣಗಳಲ್ಲಿ ವಿಚಾರಣೆ ನಡೆಸುವುದು ಕಡ್ಡಾಯ.


Click the Play button to hear this message in audio format

ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್, ಸ್ಟಾರ್ ಕ್ರಿಕೆಟಿಗ ಮೊಹಮ್ಮದ್ ಶಮಿ ಮತ್ತು ತೃಣಮೂಲ ಕಾಂಗ್ರೆಸ್ ಸಂಸದ ದೇವ್ ಅವರಿಗೆ ನೀಡಲಾದ ಚುನಾವಣಾ ಪರಿಶೀಲನಾ ನೋಟಿಸ್‌ಗಳು ಕೇವಲ 'ರೂಢಿಗತ ಪ್ರಕ್ರಿಯೆ'ಯ ಭಾಗವೇ ಹೊರತು, ಉದ್ದೇಶಪೂರ್ವಕ ಕ್ರಮವಲ್ಲ ಎಂದು ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.

ಖ್ಯಾತನಾಮರಿಗೆ ನೋಟಿಸ್ ನೀಡಿದ ಕ್ರಮ ವಿವಾದಕ್ಕೀಡಾದ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಸಿಇಒ ಕಚೇರಿ, ಮತದಾರರ ಪಟ್ಟಿಯ ಪರಿಶೀಲನಾ ನಮೂನೆಗಳಲ್ಲಿ ಕಡ್ಡಾಯವಾಗಿ ಭರ್ತಿ ಮಾಡಬೇಕಾದ ಲಿಂಕ್ ಕಾಲಂಗಳನ್ನು ಖಾಲಿ ಬಿಟ್ಟಿದ್ದರಿಂದ ಈ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದೆ.

ತಾಂತ್ರಿಕ ದೋಷವೇ ಕಾರಣ

ಚುನಾವಣಾ ಆಯೋಗದ ಅಧಿಸೂಚನೆಯ ಪ್ರಕಾರ, ಇಂತಹ ಅಪೂರ್ಣ ಮಾಹಿತಿ ಇರುವ ಪ್ರಕರಣಗಳಲ್ಲಿ ವಿಚಾರಣೆ ನಡೆಸುವುದು ಕಡ್ಡಾಯ. ಅಮರ್ತ್ಯ ಸೇನ್ ಅವರ ಪ್ರಕರಣದಲ್ಲಿ 'ತಾರ್ಕಿಕ ವ್ಯತ್ಯಾಸ' ಕಂಡುಬಂದಿದ್ದರಿಂದ ನೋಟಿಸ್ ನೀಡಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ವಿದೇಶಿ ಮತದಾರರಾಗಿ ನೋಂದಾಯಿಸಿಕೊಂಡಿರುವ ಅಮರ್ತ್ಯ ಸೇನ್ ಅವರ ಪರವಾಗಿ ಅವರ ಕುಟುಂಬದ ಸದಸ್ಯ ಶಾಂತಭಾನು ಸೇನ್ ನಮೂನೆ ಸಲ್ಲಿಸಿದ್ದರು. ಅದರಲ್ಲಿ ಅಮರ್ತ್ಯ ಸೇನ್ ಅವರನ್ನು ಅವರ ತಾಯಿ ಅಮಿತಾ ಸೇನ್ ಅವರೊಂದಿಗೆ ಲಿಂಕ್ ಮಾಡಲಾಗಿತ್ತು. "ಮತದಾರ (ಅಮರ್ತ್ಯ ಸೇನ್) ಮತ್ತು ಅವರ ತಾಯಿಯ ನಡುವಿನ ವಯಸ್ಸಿನ ವ್ಯತ್ಯಾಸ 15 ವರ್ಷಕ್ಕಿಂತ ಕಡಿಮೆಯಿದ್ದಿದ್ದರಿಂದ, ಇಆರ್‌ಒ ನೆಟ್ ಪೋರ್ಟಲ್ ಅದನ್ನು ದೋಷ ಎಂದು ಗುರುತಿಸಿತು. ಹೀಗಾಗಿ ಇತರರಂತೆ ಅವರಿಗೂ ನೋಟಿಸ್ ಜಾರಿ ಮಾಡಲಾಯಿತು," ಎಂದು ಸಿಇಒ ಕಚೇರಿ 'ಎಕ್ಸ್' ಖಾತೆಯಲ್ಲಿ ತಿಳಿಸಿದೆ.

ಮನೆ ಬಾಗಿಲಿಗೆ ಬಂದ ಅಧಿಕಾರಿಗಳು

ಅಮರ್ತ್ಯ ಸೇನ್ ಅವರಿಗೆ 85 ವರ್ಷಕ್ಕಿಂತ ಮೇಲ್ಪಟ್ಟಿರುವುದರಿಂದ, ನಿಯಮಾನುಸಾರ ಬೂತ್ ಮಟ್ಟದ ಅಧಿಕಾರಿಗಳು ಮತ್ತು ಸಹಾಯಕ ಚುನಾವಣಾ ನೋಂದಣಿ ಅಧಿಕಾರಿಗಳು ಬೋಲ್ಪುರದಲ್ಲಿರುವ ಅವರ ಮನೆಗೆ ತೆರಳಿ ಪರಿಶೀಲನಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಾರೆ. ಎಲ್ಲ ಪ್ರಕರಣಗಳಲ್ಲೂ ಆಯೋಗದ ನಿಯಮಗಳನ್ನು ಏಕರೂಪವಾಗಿ ಪಾಲಿಸಲಾಗಿದ್ದು, ಯಾವುದೇ ವಿಶೇಷ ಅಥವಾ ತಾರತಮ್ಯದ ಕ್ರಮ ಕೈಗೊಂಡಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಇದೇ ವೇಳೆ, ಮೊಹಮ್ಮದ್ ಶಮಿ ಮತ್ತು ಅವರ ಸಹೋದರ ಮೊಹಮ್ಮದ್ ಕೈಫ್ ಕೂಡ ನಮೂನೆಯನ್ನು ಸರಿಯಾಗಿ ಭರ್ತಿ ಮಾಡದ ಕಾರಣ ವಿಚಾರಣೆಗೆ ಕರೆಯಲಾಗಿದೆ ಎಂದು ವರದಿಯಾಗಿದೆ.

Read More
Next Story