ಬಿಜೆಪಿಯ ʻ400 ಪಾರ್ʼ ಘೋಷಣೆ ಲೇವಡಿ ಮಾಡಿದ ಅಖಿಲೇಶ್‌
x

ಬಿಜೆಪಿಯ ʻ400 ಪಾರ್ʼ ಘೋಷಣೆ ಲೇವಡಿ ಮಾಡಿದ ಅಖಿಲೇಶ್‌


ಡಿಯೋರಿಯಾ (ಯುಪಿ)- ಬಿಜೆಪಿಯ ʻ400 ಪಾರ್ʼ ಘೋಷಣೆಯನ್ನು ಲೇವಡಿ ಮಾಡಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, 140 ಸ್ಥಾನಗಳನ್ನು ಗೆಲ್ಲಲೂ ಹೆಣಗಾಡಲಿದೆ ಎಂದು ಶನಿವಾರ ಹೇಳಿದ್ದಾರೆ.

ʻಚುನಾವಣೆ ಬಾಂಡ್‌ ಮೂಲಕ ಬಿಜೆಪಿಗೆ ದೇಣಿಗೆ ನೀಡಿದ ಕಂಪನಿಗಳು ಸರಕುಗಳ ಬೆಲೆಗಳನ್ನು ಹೆಚ್ಚಿಸಿ ಹಣ ವಾಪಸು ಪಡೆಯುತ್ತಿವೆ. ಇದು ಹಣದುಬ್ಬರಕ್ಕೆ ಕಾರಣವಾಯಿತು,ʼ ಎಂದು ಹೇಳಿದರು.

ಕಾಂಗ್ರೆಸ್‌ನ ಡಿಯೋರಿಯಾ ಲೋಕಸಭೆ ಅಭ್ಯರ್ಥಿ ಅಖಿಲೇಶ್ ಪ್ರತಾಪ್ ಸಿಂಗ್ ಮತ್ತು ಕುಶಿನಗರದ ಎಸ್‌ಪಿ ಅಭ್ಯರ್ಥಿ ಅಜಯ್ ಕುಮಾರ್ ಸಿಂಗ್ ಅವರ ಪರವಾಗಿ ಪ್ರಚಾರ ನಡೆಸಿದ ಅವರು,ʻಉತ್ತರ ಪ್ರದೇಶದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಇಂಡಿಯ ಒಕ್ಕೂಟಕ್ಕೆ ಭಾರೀ ಬೆಂಬಲ ವ್ಯಕ್ತವಾಗಿದೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಖಂಡಿತವಾಗಿಯೂ ಇನ್ನಿಲ್ಲವಾಗಲಿದೆ ಎಂಬ ವಿಶ್ವಾಸವಿದೆ. ಸರ್ಕಾರ ಮಾತ್ರವಲ್ಲ, ಲೋಕಸಭೆ ಚುನಾವಣೆ ಫಲಿತಾಂಶದ ನಂತರ ಮಾಧ್ಯಮಗಳೂ ಬದಲಾಗಲಿವೆ,ʼಎಂದರು.

ಬಿಜೆಪಿಯ 400 ಪಾರ್ ಘೋಷಣೆ ಕುರಿತು ವಾಗ್ದಾಳಿ ನಡೆಸಿ,ʼ ಘೋಷಣೆ ಮಾಡಿದವರು 400 ಸೀಟು ಕಳೆದುಕೊಳ್ಳಲಿದ್ದಾರೆ. 543 ರಲ್ಲಿ 400 ಕಳೆದರೆ, ಎಷ್ಟು ಸ್ಥಾನಗಳು ಉಳಿತುತ್ತವೆ,ʼ ಎಂದು ಸಭಿಕರನ್ನು ಕೇಳಿದರು. ಉತ್ತರ ನೀಡಿದಾಗ,ʻ140 ಕೋಟಿ ಜನರು 140 ಸ್ಥಾನಗಳನ್ನುಕೊಡಲಿದ್ದರೆ. ಪೂರ್ವಾಂಚಲದ ಜನರು ನಮ್ಮನ್ನು ಉತ್ಸಾಹದಿಂದ ಸ್ವಾಗತಿಸಿದ್ದಾರೆ. 2014 ರಲ್ಲಿ ಇಲ್ಲಿಗೆ ಬಂದವರಿಗೆ 2024 ರಲ್ಲಿ ನಿರ್ಗಮನ ಖಚಿತ,ʼ ಎಂದು ಹೇಳಿದರು.

ʻನೀವು ಬಿಜೆಪಿಯವರನ್ನು ಪಕ್ಷ ಏಕೆ ಸಂವಿಧಾನವನ್ನು ಬದಲಿಸಲು ಬಯಸುತ್ತದೆ ಮತ್ತು ಮೀಸಲು ಕೊನೆಗೊಳಿಸಲು ಬಯಸುತ್ತದೆ ಎಂದು ಪ್ರಶ್ನಿಸಿ. ಬಿಜೆಪಿಯ ಪ್ರತಿಯೊಂದು ಮಾತು ಮತ್ತು ಭರವಸೆ ಸುಳ್ಳಾಗಿದೆ. 10 ವರ್ಷ ಕೇಂದ್ರ ಮತ್ತು ಏಳು ವರ್ಷಗಳ ರಾಜ್ಯ ಸರ್ಕಾರದಲ್ಲಿ ಸಿಗಬೇಕಾದ ಸೌಲಭ್ಯಗಳು ಸಿಗದೆ, ರೈತರು ಮತ್ತು ಯುವಜನರ ಭವಿಷ್ಯ ಅಪಾಯದಲ್ಲಿದೆ.ಬಡಜನರು ಕೆಲಸ ಮಾಡುವ ಸರ್ಕಾರವನ್ನು ಬಯಸುತ್ತಾರೆ. ಇಂಡಿಯ ಒಕ್ಕೂಟ ಕೇಂದ್ರದಲ್ಲಿ ಸರ್ಕಾರ ರಚಿಸಿದರೆ, ಅಗ್ನಿವೀರ್ ಯೋಜನೆ ರದ್ದುಗೊಳಿಸಲಾಗುವುದು,ʼ ಎಂದು ಹೇಳಿದರು.

ಹಿರಿಯ ಕಾಂಗ್ರೆಸ್ ನಾಯಕ ಮತ್ತು ಪಕ್ಷದ ಉತ್ತರ ಪ್ರದೇಶ ಉಸ್ತುವಾರಿ ಅವಿನಾಶ್ ಪಾಂಡೆ ಮಾತನಾಡಿದರು. ಡಿಯೋರಿಯಾ ಮತ್ತು ಕುಶಿನಗರದಲ್ಲಿ ಜೂನ್ 1 ರಂದು ಏಳನೇ ಹಂತದಲ್ಲಿ ಮತದಾನ ನಡೆಯಲಿದೆ.

Read More
Next Story